ಬ್ರಿಟನ್‌ನಲ್ಲಿ ಆತ್ಮಹತ್ಯೆ ತಡೆಗೆ ಹೊಸ ಸಚಿವರ ನೇಮಕ

By Web DeskFirst Published Oct 11, 2018, 11:05 AM IST
Highlights

ಸಾರ್ವಜನಿಕರ ಆತ್ಮಹತ್ಯೆ ತಡೆಯಲು ಬ್ರಿಟನ್ ಪ್ರಧಾನಿ ಥೆರೆಸಾ ಮೇ ಹೊಸ ನೀತಿ ಜಾರಿ |  ಆತ್ಮಹತ್ಯಾ ತಡೆ ಸಚಿವರ ನೇಮಕ | ಇಂಗ್ಲೆಂಡ್‌ನಲ್ಲಿ ವರ್ಷಕ್ಕೆ ಸುಮಾರು 4500 ಮಂದಿ ಆತ್ಮಹತ್ಯೆಗೆ ಶರಣಾಗುತ್ತಾರೆ.

ಲಂಡನ್ (ಅ. 11):  ಮಾನಸಿಕ ಖಿನ್ನತೆ ಸೇರಿ ಇತರ ಕಾರಣಗಳಿಗಾಗಿ ಇಂಗ್ಲೆಂಡ್‌ನಲ್ಲಿ ವರ್ಷಕ್ಕೆ ಸುಮಾರು 4500 ಮಂದಿ ಆತ್ಮಹತ್ಯೆಗೆ ಶರಣಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆತ್ಮಹತ್ಯೆ ಘಟನೆಗಳನ್ನು ತಡೆಯಲು ಬ್ರಿಟನ್ ಪ್ರಧಾನಿ ಥೆರೆಸಾ ಮೇ ಅವರು ಆತ್ಮಹತ್ಯಾ ತಡೆ ಸಚಿವಾಲಯವನ್ನೇ ಜಾರಿಗೆ ತಂದಿದ್ದಾರೆ.

50 ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದ ಮಾನಸಿಕ ಆರೋಗ್ಯ ಶೃಂಗದಲ್ಲಿ ಮಾತನಾಡಿದ ಥೆರೆಸಾ ಮೇ ಅವರು, ನೂತನವಾಗಿ ಸ್ಥಾಪಿಸಲಾದ ಆತ್ಮಹತ್ಯಾ ತಡೆ ಸಚಿರನ್ನಾಗಿ ಡೋಯ್ಲ್ ಪ್ರೈಸ್ ಅವರನ್ನು ಆಯ್ಕೆ ಮಾಡಿದ್ದಾರೆ. ಸಾರ್ವಜನಿಕರ ಜೊತೆ ಸಮಾಲೋಚನೆಗಾಗಿ 18 ಕೋಟಿ ರು. ಮೀಸಲಿಡುವುದಾಗಿ ಹೇಳಿದರು. 

click me!