
ಮದುವೆಯಾದ ನಂತರ ತವರು ಮನೆಯಿಂದ ಗಂಡನ ಮನೆಗೆ ಮಗಳನ್ನು ಕಳಿಸುವುದು ಎಮೋಷನಲ್ ಸಂದರ್ಭ. ತವರು ಮನೆಯಿಂದ ಗಂಡನ ಮನೆಗೆ ಹೋಗುವಾಗ ಮದುಮಗಳು ನೆನಪಿನ ಮೂಟೆ ಹೊತ್ತು ಹೊರಡುತ್ತಾಳೆ. ಹುಟ್ಟಿನ ದಿನದಿಂದ ಮದುವೆಯ ದಿನದವರೆಗೂ ಅಪ್ಪ ಅಮ್ಮನ ಜತೆಗೆದ್ದ ಹುಡುಗಿ ಹೊಸ ಜೀವನ ಕಟ್ಟಿಕೊಳ್ಳಲು ತನ್ನವರಿಂದ ದೂರ ಹೋಗುವ ಸಂದರ್ಭ ಅದು. ಎಲ್ಲಾ ಹೆಣ್ಣು ಮಕ್ಕಳಿಗೂ ಮತ್ತು ಹೆತ್ತವರಿಗೂ ಸಹಿಸಲಾಧ್ಯವಾಗುವಷ್ಟು ಕಣ್ಣೀರು ಧುಮ್ಮಿಕ್ಕಿ ಬರುತ್ತದೆ. ಇಂಥದ್ದೇ ಒಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಗಂಡನಿಗೆ ಮದುವೆ ದಿನವೇ ಟ್ರೇಲರ್ ಸಿಕ್ಕಿದೆ, ಮುಂದೆ ಮಾರಿ ಹಬ್ಬ ಕಾದಿದೆ ಎಂದು ತಮಾಷೆ ಮಾಡಿದ್ದಾರೆ.
ಮದುವೆಯಾದ ನಂತರ ತವರು ಮನೆಯವರು ವಧುವನ್ನು ವರನ ಮನೆಗೆ ಕಳಿಸಲು ಕಾರು ಏರಿಸಿದ್ದಾರೆ. ಕಾರಿನಲ್ಲಿ ಗಂಡನ ಜತೆಗೆ ಕುಳಿತ ವಧು ಬಿಕ್ಕಳಿಸಿ ಅಳುತ್ತಾಳೆ. ತವರು ಮನೆಯವರು ಕೂಡ ಮಗಳನ್ನು ಕಳಿಸಿಕೊಡುವ ವೇಳೆ ಅಳುತ್ತಿದ್ದರು. ತನ್ನ ದುಖಃ, ದುಮ್ಮಾನವನ್ನು ಹುಡುಗಿ ಗಂಡನ ಮೇಲೆ ಈ ವೇಳೆ ತೀರಿಸಿಕೊಳ್ಳುತ್ತಾಳೆ. ಗಂಡನ ಮುಖ ಹಿಡಿದು ಬಾಯಿ ಮುಚ್ಚಿ ಎಳೆದಾಡುತ್ತಾಳೆ. ಗಂಡ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಕಪಾಳಕ್ಕೊಂದು ಬಾರಿಸುತ್ತಾಳೆ.
ಸಂಬಂಧಿಕರೊಬ್ಬರು ಈ ಘಟನೆಯನ್ನು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರು ಈ ವಿಡಿಯೋ ನೋಡಿ ತಮಾಷೆ ಮಾಡುತ್ತಿದ್ದಾರೆ. ಇದು ಟ್ರೇಲರ್ ಅಷ್ಟೇ ಪಿಚ್ಚರ್ ಬಾಕಿಯಿದೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಸಾಮಾನ್ಯವಾಗಿ ಹೆಂಡತಿಯನ್ನು ಹೋಮ್ ಮಿನಿಸ್ಟರ್, ಹೆದರಿಸುತ್ತಾಳೆ ಎಂದೆಲ್ಲಾ ತಮಾಷೆ ಮಾಡುವುದು ಸಹಜ. ಈ ಘಟನೆ ವೈರಲ್ ಆಗುವುದಕ್ಕೂ ಅದೇ ಕಾರಣ.
ಮದುಮಗಳು ಮದುವೆಯ ನಂತರ ಖುಷಿಗೆ ಕಂಠಪೂರ್ತಿ ಕುಡಿದು ರಿಸೆಪ್ಷನ್ ಮುಗಿಯುವವರೆಗೂ ಮಲಗೇ ಇದ್ದಳಂತೆ. ಪಾಪ ಮದುಮಗ ಒಬ್ಬನೇ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿಯಾಬೇಕಾದ ಅನಿವಾರ್ಯ ಉಂಟಾಯಿತಂತೆ. ಈ ಘಟನೆಯ ಬಗ್ಗೆ ಮದುವೆಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆ ಪೋಸ್ಟ್ ಈಗ ವೈರಲ್ ಆಗಿದೆ.
"ನಾನು ಇತ್ತೀಚೆಗೆ ಮದುವೆ ಸಮಾರಂಭವೊಂದಕ್ಕೆ ಹೋಗಿದ್ದೆ. ಸಂಜೆ ಆರು ಗಂಟೆಗೆಲ್ಲಾ ರಿಸೆಪ್ಷನ್ ಆರಂಭವಾಯಿತು. ಗಂಡು ಹೆಣ್ಣು ಇಬ್ಬರೂ ಬಂದರು. ಅಧಿಕೃತವಾದ ಭಾಷಣ ಮತ್ತುಳಿದ ಕಾರ್ಯಕ್ರಮ ಕ್ಷಣದೊಳಗೆ ಮುಗಿದುಹೋಯಿತು. ಯಾಕೆ ಇಷ್ಟೊಂದು ತುರ್ತಾಗಿ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ನನ್ನನ್ನು ಕಾಡಿತ್ತು. ಆದರೆ ಮದುಮಗಳ ಪರಿಸ್ಥಿತಿಯನ್ನು ನೋಡಿ ಅರ್ಥವಾಗಿತ್ತು. ಆಕೆ ಸಂಪೂರ್ಣವಾಗಿ ಕುಡಿದಿದ್ದಳು. ಏನು ಮಾಡುತ್ತಿದ್ದಾಳೆ ಎಂಬ ಪರಿಭ್ರಮೆಯೂ ಆಕೆಗಿರಲಿಲ್ಲ," ಎಂದು ಮದುವೆಯ ಬಗ್ಗೆ ಸಂಬಂಧಿ ಬರೆದುಕೊಂಡಿದ್ದಾರೆ.
ಸಂಜೆ ಎಂಟುಗಂಟೆಗೆಲ್ಲಾ ಮದುಮಗಳು ನಿಲ್ಲಲೂ ಶಕ್ತಿಯಿಲ್ಲದೇ ಮಲಗಿಬಿಟ್ಟಳು. ನಂತರ ರಿಸೆಪ್ಷನ್ ಹೊರಬದಿಯ ಸೋಫಾ ಒಂದರ ಮೇಲೆ ಮಲಗಿದವಳು ರಿಸೆಪ್ಷನ್ ಮುಗಿದರೂ ಏಳಲಿಲ್ಲವಂತೆ. ಮದುವೆಗೆ ಬಂದವರೆಲ್ಲಾ ಮದುಮಗಳ ಸ್ಥಿತಿ ನೋಡಿ ಆಳಿಗೊಂದು ಮಾತು ಉದುರಿಸಿ ಹೋದರಂತೆ.
ಇದನ್ನೂ ಓದಿ: ಮದುವೆ ದಿನ ವರ-ವಧು ನಗುವಂತೆಯೇ ಇಲ್ಲ, ಇದೆಂಥಾ ವಿಚಿತ್ರ ಸಂಪ್ರದಾಯ !
ನಂತರ ರಿಸೆಪ್ಷನ್ ಮುಗಿದ ಮೇಲೆ ಆಕೆಯನ್ನು ಎತ್ತಿಕೊಂಡು ಕಾರಿನತ್ತ ಕರೆದೊಯ್ಯಲಾಯಿತಂತೆ. ಬೆಲೆಬಾಳುವ ಬಟ್ಟೆ ಧರಿಸಿದ್ದ ಆಕೆ, ಅದರ ಮೇಲೆಯೇ ವಾಂತಿ ಮಾಡಿಕೊಳ್ಳುತ್ತಿದ್ದರಂತೆ ಎಂದು ಸಂಬಂಧಿ ಬರೆದುಕೊಂಡಿದ್ದಾರೆ. "ಮದುಮಗನನ್ನು ನೋಡಿ ನನಗೆ ಬೇಸರವಾಯಿತು. ಆತ ಒಬ್ಬನೇ ರಿಸೆಪ್ಷನ್‌ಗೆ ಬಂದ ಅತಿಥಿಗಳನ್ನು ಮಾತನಾಡಿಸುತ್ತಿದ್ದ. ಹೆಂಡತಿ ಜೊತೆ ನೃತ್ಯ ಮಾಡಬೇಕಾದವನು ಒಬ್ಬನೇ ಮಂಕಾಗಿ ಕೂತಿದ್ದ. ಈಗಲಾದರೂ ಆಕೆ ಮಾಡಿದ ತಪ್ಪಿನ ಅರಿವಾಗಿರಬಹುದು," ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಹಲವರು, ತನ್ನ ಮದುವೆಯ ದಿನವೇ ಹುಡುಗಿ ಈ ರೀತಿ ಮಾಡಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. "ಮದುವೆಯ ದಿನ ಕುಡಿಯುವುದು ತಪ್ಪಿಲ್ಲ. ಮದುವೆ ಎಂದರೆ ಪ್ರತಿಯೊಬ್ಬರಿಗೂ ಭಯವಿರುತ್ತದೆ. ಆದರೆ ನಮ್ಮ ಲಿಮಿಟೇಷನ್ ನಮಗೆ ಗೊತ್ತಿರಬೇಕು. ನಿಲ್ಲಲೂ ಶಕ್ತಿಯಿಲ್ಲದಷ್ಟು ಕುಡಿದರೆ ಹೇಗೆ," ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Weird News: ಇಲ್ಲಿ ಮದುವೆಗೆ ಮೊದಲು ಹುಡುಗಿ ತಾಯಿಯಾಗ್ಲೇಬೇಕಂತೆ…!
"ಮದುವೆಯಾಗಿರುವ ಖುಷಿಯಲ್ಲಿ ಲೆಕ್ಕವಿಲ್ಲದಷ್ಟು ಕುಡಿದಿದ್ದಾಳೆ ಅನಿಸುತ್ತಿದೆ. ಅದರ ಜತೆಗೆ ಸರಿಯಾಗಿ ಏನೂ ತಿಂದಿಲ್ಲ. ಈ ಕಾರಣಕ್ಕಾಗಿಯೇ ಆಕೆ ರಿಸೆಪ್ಷನ್ ಕೂಡ ಅಟೆಂಡ್ ಮಾಡದಷ್ಟು ಪಾನಮತ್ತಳಾಗಿದ್ದಾಳೆ. ಕುಡಿದ ಮೇಲೆ ಸರಿಯಾಗಿ ಊಟ ಮಾಡದಿದ್ದರೆ ಹೀಗೇ ಆಗುತ್ತದೆ," ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.