
ಹಾಸನ (ಜ.24): ವಿವಾಹ ಪೂರ್ವ ಫೋಟೋ ಶೂಟ್'ಗೆ ತೆರಳುತ್ತಿದ್ದ ಕಾರು ಮರಕ್ಕೆ ಡಿಕ್ಕಿ ಹೊಡೆದು, ಭೀಕರ ರಸ್ತೆ ಅಪಘಾತ ನಡೆದಿದ್ದು ಹಸೆಮಣೆ ಏರಬೇಕಾಗಿದ್ದ ಭಾವೀ ವಧು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಪಾಳ್ಯದಲ್ಲಿ ನಡೆದಿದೆ.
ವಿವಾಹ ನಿಶ್ಚಯವಾಗಿದ್ದ ರಾಧಿಕಾ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ವರ ಸುಪ್ರೀತ್, ಗಂಭೀರ ಗಾಯಗೊಂಡಿದ್ದಾನೆ.
ತುಮಕೂರು ಜಿಲ್ಲೆ ಗುಬ್ಬಿಯ ರಾಧಿಕಾ- ಸುಪ್ರೀತ್ ನಡುವೆ ವಿವಾಹ ನಿಶ್ಚಯಗೊಂಡಿತ್ತು. ಇವರಿಬ್ಬರೂ ಫೋಟೋ ಶೂಟನ್ನು ಹಾಸನದ ಶೆಟ್ಟಿಹಳ್ಳಿ ಚರ್ಚ್'ನಲ್ಲಿ ಮುಗಿಸಿ ಮಂಜ್ರಾಬಾದ್ ಕೋರ್ಟ್ ಕಡೆ ತೆರಳುತ್ತಿದ್ದರು. ಈ ವೇಳೆ ಆಲೂರಿನ ಪಾಳ್ಯದಲ್ಲಿ ಅಸ್ವಸ್ಥ ಮಹಿಳೆಗೆ ಕಾರು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಪಾದಚಾರಿ ಅಸ್ವಸ್ಥ ಮಹಿಳೆ ಸಾವನ್ನಪ್ಪಿದ್ದಾಳೆ. ಕಾರಿನಲ್ಲಿದ್ದ ರಾಧಿಕಾ ಸಹ ಸಾವನ್ನಪ್ಪಿದ್ದು, ರಾಧಿಕಾ ತಾಯಿ, ಕ್ಯಾಮರಾಮನ್'ಗಳು ಸೇರಿ ಮೂವರ ಸ್ಥಿತಿ ಗಂಭೀರವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.