ಕ್ಯಾಟ್‌ವಾಕ್‌ ವೇಳೆ ವೇದಿಕೆ ಮೇಲೆ ಬಿದ್ದು ಬ್ರೆಜಿಲ್‌ ಮಾಡೆಲ್‌ ಸಾವು

Published : Apr 29, 2019, 10:49 AM IST
ಕ್ಯಾಟ್‌ವಾಕ್‌ ವೇಳೆ ವೇದಿಕೆ ಮೇಲೆ ಬಿದ್ದು ಬ್ರೆಜಿಲ್‌ ಮಾಡೆಲ್‌ ಸಾವು

ಸಾರಾಂಶ

ಕ್ಯಾಟ್‌ವಾಕ್‌ ವೇಳೆ ವೇದಿಕೆ ಮೇಲೆ ಕುಸಿದು ಬಿದ್ದು ಬ್ರೆಜಿಲ್‌ ಪ್ರಖ್ಯಾತ ಮಾಡೆಲ್‌ ಸಾವನ್ನಪ್ಪಿದ್ದಾರೆ.

ಸಾವೋ ಪೌಲೋ[ಏ.29]: ಬ್ರೆಜಿಲ್‌ ದೇಶದ ರೂಪದರ್ಶಿಯೊಬ್ಬ ಕ್ಯಾಟ್‌ವಾಕ್‌ ಮಾಡುತ್ತಿರುವ ವೇಳೆಯೇ ವೇದಿಕೆ ಮೇಲೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ ಆಘಾತಕಾರಿ ಘಟನೆ ಸಾವೋ ಪೌಲೋದ ಓಕ್ಸೋ ಪ್ರದರ್ಶನದಲ್ಲಿ ನಡೆದಿದೆ.

ಮೃತ ರೂಪದರ್ಶಿಯನ್ನು ಟೇಲ್ಸ್‌ ಸೋ​ರ್‍ಸ್ (26) ಎಂದು ಗುರುತಿಸಲಾಗಿದ್ದು, ರೂಪದರ್ಶಿ ವೈವಿದ್ಯಮಯ ವಿನ್ಯಾಸ ಬಟ್ಟೆಗೆ ಅಳವಡಿಸಿದ್ದ ಬಾಲದ ಮಾದರಿ ಬಟ್ಟೆವೇದಿಕೆಯಲ್ಲಿ ತಿರುಗಿದಾಗ ಅವರ ಕಾಲಿಗೆ ಸಿಲುಕಿದೆ. ಈ ವೇಳೆ ಒಂದೆರಡು ಹೆಜ್ಜೆಗಳಲ್ಲಿ ಅದನ್ನು ನಿಯಂತ್ರಿಸಲು ಯತ್ನಿಸಿ ವಿಫಲರಾದ ಅವರು ನೆಲಕ್ಕೆ ಬಿದ್ದಿದ್ದಾರೆ.

ಕೂಡಲೇ ಸ್ಥಳದಲ್ಲಿದ್ದ ಆಯೋಜಕರು ರೂಪದರ್ಶಿಯನ್ನು ಆಸ್ಪತ್ರೆಗೆ ದಾಖಲಿಸಿದರೂ, ಆ ವೇಳೆಗಾಗಲೇ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರ್ಯಾಮಿ ಪ್ರಶಸ್ತಿ ವಿಜೇತ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಬೆಂಗಳೂರು ಮನೆಯಿಂದ ಡೆಲಿವರಿ ಬಾಯ್ಸ್ ಕಳ್ಳತನ!
ನನಗೆ ಎಚ್ಚರಿಕೆ ಕೊಡೋ ಮುನ್ನ ಹುಷಾರ್, ಕಾಮನ್‌ಸೆನ್ಸ್ ಇಟ್ಟುಕೊಂಡು ಡೀಲ್ ಮಾಡಿ, ಪತ್ರ ಬರೆದವನಿಗೆ ಡಿಕೆಶಿ ವಾರ್ನಿಂಗ್!