
ಬೆಂಗಳೂರು(ಏ.15):‘ನಾನೇನು ನಾಗನನ್ನು ನನ್ನ ತೊಡೆಯಲ್ಲಿ ಇಟ್ಟುಕೊಂಡಿದ್ದೀನಾ? ನೀವೇ ಹುಡುಕಿಕೊಳ್ಳಿ..!' ದಾಳಿಗೆ ಬಂದ ಪೊಲೀಸರು ನಾಗರಾಜ ಅಲಿಯಾಸ್ ನಾಗನ ಪತ್ನಿ ಲಕ್ಷ್ಮಿಯನ್ನು ‘ನಿನ್ನ ಪತಿ ಎಲ್ಲಿ' ಎಂದು ಪ್ರಶ್ನಿಸಿದಾಗ ಖಾರವಾಗಿ ಪ್ರತಿಕ್ರಿಯಿಸಿದ್ದು ಹೀಗೆ.
ನೀವು ಇರುವುದು ಏಕೆ? ಹುಡುಕಿಕೊಳ್ಳಿ ಎಂದು ಹೇಳಿದ್ದಾಳೆ. ಮನೆಯಲ್ಲಿ ಹಣ ತಂದು ಇಟ್ಟವರ್ಯಾರು ಎಂಬ ಪ್ರಶ್ನೆಗೆ ‘ನೀವೇ ಹಣ ತಂದು ಇಟ್ಟಿರಬಹುದು' ಎಂದು ಹೇಳುವ ಮೂಲಕ ತನಿಖೆಗೆ ಸಹಕರಿಸಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಇನ್ನು ದೃಶ್ಯ ಮಾಧ್ಯಮಗಳ ಪ್ರತಿನಿಧಿಗಳು ನೇರ ಪ್ರಸಾರ ಸುದ್ದಿ ನೀಡುವ ವೇಳೆ ಬಾಂಬ್ ನಾಗ ಅಲಿಯಾಸ್ ನಾಗರಾಜ್ ಎಂದು ಸಂಬೋಧಿಸುತ್ತಿದ್ದರು. ಇದನ್ನು ಕಂಡ ನಾಗರಾಜನ ಪತ್ನಿ ಲಕ್ಷ್ಮಿ ತನ್ನ ಪತಿ ಹೆಸರನ್ನು ಬಾಂಬ್ ನಾಗ ಎಂದು ಹೇಳಬೇಡಿ ಎಂದು ಅವರು ವಿರುದ್ಧ ಕಟ್ಟಡದ ಮೇಲಿನಿಂದ ನಿಂತು ಆಕ್ರೋಶ ವ್ಯಕ್ತಪಡಿಸಿದಳು. ಬಾಂಬ್ ನಾಗ ಎಂದು ಸಂಬೋಧಿಸುವುದಕ್ಕೆ ನಾಗ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದ. ‘ಎಷ್ಟುಸುದ್ದಿ ನೀಡುತ್ತೀರಾ ನೀಡಿ? ನಿಮ್ಮನೆಲ್ಲಾ ನೋಡಿಕೊಳ್ಳುತ್ತೇನೆ' ಎಂದು ಕೂಗುತ್ತಿದ್ದಳು. ಬಳಿಕ ಪೊಲೀಸರ ಎದುರು ಲಕ್ಷ್ಮಿ ಕಣ್ಣೀರು ಹಾಕುತ್ತಿದ್ದ ದೃಶ್ಯಗಳು ಕಂಡುಬಂತು. ದಾಳಿ ಬಳಿಕ ಮಧ್ಯಾಹ್ನ 4 ಗಂಟೆ ಸುಮಾರಿಗೆ ಪೊಲೀಸರು ಊಟ ತರಿಸಿ ನಾಗನ ಪತ್ನಿ ಲಕ್ಷ್ಮಿಗೆ ನೀಡಿದರಾದರೂ ಊಟ ಮಾಡದೆ ಕೋಪ ವ್ಯಕ್ತಪಡಿಸುತ್ತಿದ್ದಳು. ಈ ವೇಳೆ ಮನೆಯಿಂದ ಹೊರಗಡೆ ಬಿಡಿ ನಾನು ವಾಯು ವಿಹಾರಕ್ಕೆ ಹೋಗಬೇಕೆಂದು ಹೇಳಿದಳು. ಇಲ್ಲವಾದರೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುತ್ತೇನೆಂದು ಬೆದರಿಕೆ ಹಾಕಿದಳು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.