ಕಾಶ್ಮೀರದ ಬಾಂಬ್ ಸ್ಫೋಟ: ನಾಲ್ವರು ಪೊಲೀಸರು ಹುತಾತ್ಮ

Published : Jan 06, 2018, 10:14 PM ISTUpdated : Apr 11, 2018, 12:57 PM IST
ಕಾಶ್ಮೀರದ ಬಾಂಬ್ ಸ್ಫೋಟ: ನಾಲ್ವರು ಪೊಲೀಸರು ಹುತಾತ್ಮ

ಸಾರಾಂಶ

ಭಾರತೀಯ ಮೀಸಲು ಪೊಲೀಸ್‌ನ ೩ನೇ ಬಟಾಲಿಯನ್‌ನ ನಾಲ್ವರು ಸಿಬ್ಬಂದಿ, ಉತ್ತರ ಕಾಶ್ಮೀರದ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸೇವೆಯಲ್ಲಿ ನಿರತರಾಗಿದ್ದರು

ಶ್ರೀನಗರ(ಜ.06): ಉತ್ತರ ಕಾಶ್ಮೀರದ ಸೋಪೋರ್ ನಗರದಲ್ಲಿ ಉಗ್ರರು ನಡೆಸಿದ ಸ್ಫೋಟದಲ್ಲಿ ಗಸ್ತು ನಡೆಸುತ್ತಿದ್ದ ನಾಲ್ವರು ಪೊಲೀಸರು ಹುತಾತ್ಮರಾಗಿದ್ದಾರೆ. ೨೦೧೫ರ ನಂತರ ನಡೆದ ಪ್ರಥಮ ಐಇಡಿ ಸ್ಫೋಟ ಇದಾಗಿದ್ದು, ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ನ ಛೋಟಾ ಬಜಾರ್ ಮತ್ತು ಬಡಾ ಬಜಾರ್ ನಡುವಿನ ಅಂಗಡಿಯೊಂದರ ಬಳಿ ಐಇಡಿ ಅಳವಡಿಸಲಾಗಿತ್ತು. ಭಾರತೀಯ ಮೀಸಲು ಪೊಲೀಸ್‌ನ ೩ನೇ ಬಟಾಲಿಯನ್‌ನ ನಾಲ್ವರು ಸಿಬ್ಬಂದಿ, ಉತ್ತರ ಕಾಶ್ಮೀರದ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸೇವೆಯಲ್ಲಿ ನಿರತರಾಗಿದ್ದರು. ಪ್ರತ್ಯೇಕತಾವಾದಿಗಳು ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ, ಭದ್ರತಾ ಕಾರ್ಯದಲ್ಲಿ ಪೊಲೀಸ್ ತೊಡಗಿಸಿಕೊಂಡಿದ್ದರು. ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಸಬ್-ಇನ್ಸ್‌ಪೆಕ್ಟರ್ ಇರ್ಷಾದ್ ಅಹ್ಮದ್, ಕಾನ್ಸ್‌ಟೆಬಲ್‌ಗಳಾದ ಗುಲಾಂ ನಬಿ, ಪರ್ವೇಜ್ ಅಹ್ಮದ್, ಮೊಹಮ್ಮದ್ ಅಮೀನ್ ಮೃತ ಪೊಲೀಸ್ ಸಿಬ್ಬಂದಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಸೀಸ್‌ನಲ್ಲಿ ಮಕ್ಕಳಿಗೆ ಜಾಲತಾಣ ಬಳಕೆ ನಿಷೇಧ : ನಾಳೆಯಿಂದ ಜಾರಿ
ನಿಮ್ಮ ಪತ್ನಿ ಭಾರತಕ್ಕೆ ಕಳಿಸಿ : ವ್ಯಾನ್ಸ್‌ಗೆ ವಲಸಿಗರ ಟಾಂಗ್‌