
ಮ್ಯಾಂಚೆಸ್ಟರ್ (ಮೇ 23): ಇಂಗ್ಲೆಂಡ್ ದೇಶದಲ್ಲಿ ಮಧ್ಯರಾತ್ರಿ ಸಂಭವಿಸಿದ ಪೈಶಾಚಿಕ ಬಾಂಬ್ ಸ್ಫೋಟಕ್ಕೆ 19ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮ್ಯಾಂಚೆಸ್ಟ್ ಅರೇನಾ ಸಭಾಂಗಣದಲ್ಲಿ ಅಮೆರಿಕದ ಪಾಪ್ ಗಾಯಕಿ ಏರಿಯಾನಾ ಗ್ರಾಂಡ್ ಅವರ ಮ್ಯೂಸಿಕ್ ಶೋ ವೇಳೆ ಈ ದುರ್ಘಟನೆ ಸಂಭವಿಸಿದೆ. ಆತ್ಮಹತ್ಯಾ ಬಾಂಬ್ ದಾಳಿಕೋರನೊಬ್ಬ ಈ ದಾಳಿ ನಡೆಸಿದನೆಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಯಾವ ಸಂಘಟನೆಯೂ ಈವರೆಗೆ ಈ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ. ಆದರೆ, ಉಗ್ರಗಾಮಿ ಸಂಘಟನೆಯು ಈ ಸ್ಫೋಟವನ್ನು ಎಸಗಿರಬಹುದೆಂಬ ಶಂಕೆ ಇದೆ. ಬ್ರಿಟನ್ ಅಧ್ಯಕ್ಷೆ ಥೆರೆಸಾ ಮೇ ಅವರು ಈ ಘಟನೆಯನ್ನು ಭಯೋತ್ಪಾದಕ ದಾಳಿ ಎಂದು ಹೇಳಿದ್ದಾ.
ಪೊಲೀಸರ ಪ್ರಕಾರ ರಾತ್ರಿ 10:35ಕ್ಕೆ ಬಾಂಬ್ ಸ್ಫೋಟವಾಗಿರುವ ಮಾಹಿತಿ ಸಿಕ್ಕಿದೆ. ಅಂದರೆ, ಭಾರತೀಯ ಕಾಲಮಾನ ಬೆಳಗ್ಗೆ 3 ಗಂಟೆಗೆ ಈ ದುರ್ಘಟನೆ ಸಂಭವಿಸಿದೆ. ಏರಿಯಾನಾ ಗ್ರಾಂಡ್'ಳ ಸಂಗೀತ ಕಾರ್ಯಕ್ರಮವಿದ್ದ ಸಭಾಂಗಣದಲ್ಲಿ ಮಕ್ಕಳು ಸೇರಿದಂತೆ ಸಾವಿರಾರು ಜನರು ನೆರೆದಿದ್ದರು.
ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿಶ್ವಾದ್ಯಂತ ನಾಯಕರು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
12 ವರ್ಷಗಳ ನಂತರ ಇಂಗ್ಲೆಂಡ್ ದೇಶದಲ್ಲಿ ಸಂಭವಿಸಿದ ಭೀಕರ ಉಗ್ರ ಕೃತ್ಯ ಇದಾಗಿದೆ. 2005ರಲ್ಲಿ ನಾಲ್ವರು ಬ್ರಿಟನ್ ವ್ಯಕ್ತಿಗಳು ಲಂಡನ್'ನಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿ 52 ಜನರನ್ನು ಬಲಿತೆಗೆದುಕೊಂಡಿದ್ದರು. ಇರಾಕ್, ಸಿರಿಯಾ, ಆಫ್ಘಾನಿಸ್ತಾನ ಮೊದಲಾದ ದೇಶಗಳಲ್ಲಿ ಅಮೆರಿಕ ನಡೆಸಿದ, ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಪ್ರಮುಖವಾಗಿ ಸಾಥ್ ಕೊಡುತ್ತಿರುವ ರಾಷ್ಟ್ರಗಳಲ್ಲಿ ಬ್ರಿಟನ್ ಕೂಡ ಒಂದು. ಹೀಗಾಗಿ, ಉಗ್ರಗಾಮಿಗಳ ಕೆಂಗಣ್ಣು ಬ್ರಿಟನ್ ದೇಶದ ಮೇಲೆ ಇದ್ದೇ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.