ಎನ್‌ಕೌಂಟರ್ ದಯಾನಾಯಕ್ ಮುಂಬೈ ಎಟಿಎಸ್‌ಗೆ ವರ್ಗ

Published : Sep 25, 2019, 10:47 AM IST
ಎನ್‌ಕೌಂಟರ್ ದಯಾನಾಯಕ್ ಮುಂಬೈ ಎಟಿಎಸ್‌ಗೆ ವರ್ಗ

ಸಾರಾಂಶ

ಎನ್‌ಕೌಂಟರ್ ಖ್ಯಾತಿಯ ಕರ್ನಾಟಕ ಪೊಲಿಸ್ ಅಧಿಕಾರಿ ದಯಾನಾಯಕ್ ಅವರನ್ನು ಮಂಗಳವಾರ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಕ್ಕೆ ವರ್ಗಾವಣೆ ಮಾಡಲಾಗಿದೆ. ದಯಾನಾಯಕ್ ಅವರು ಸದ್ಯ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮುಂಬೈ (ಸೆ. 25): ಎನ್‌ಕೌಂಟರ್ ಖ್ಯಾತಿಯ ಕರ್ನಾಟಕ ಪೊಲಿಸ್ ಅಧಿಕಾರಿ ದಯಾನಾಯಕ್ ಅವರನ್ನು ಮಂಗಳವಾರ ಮಹಾರಾಷ್ಟ್ರದ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್) ಕ್ಕೆ ವರ್ಗಾವಣೆ ಮಾಡಲಾಗಿದೆ. ದಯಾನಾಯಕ್ ಅವರು ಸದ್ಯ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದಯಾನಾಯಕ್ ಅವರು ಕರ್ನಾಟಕದ ಉಡುಪಿ ಮೂಲದವರಾಗಿದ್ದಾರೆ. 1995 ರಲ್ಲಿ ಅವರು ಮುಂಬೈ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. 90 ರ ದಶಕದಲ್ಲಿ ಅವರು ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತಿಗಳಿಸಿದ್ದರು. ಮುಂಬೈ ಭೂಗಲೋಕದ 80ಕ್ಕೂ ಹೆಚ್ಚು ರೌಡಿಗಳನ್ನು ದಯಾನಾಯಕ್ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಮಹಾರಾಷ್ಟ್ರ ಸಂಘಟಿಕ ಅಪರಾಧಗಳ ತಡೆ ಕಾಯ್ದೆ ಅಡಿ ಅಕ್ರಮ ಆಸ್ತಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ದಯಾನಾಯಕ್ ಅವರನ್ನು 2006 ರಲ್ಲಿ ಅಮಾನತುಗೊಳಿಸಿತ್ತು. ಆದರೆ, ಅವರ ವಿರುದ್ಧ ಆರೋಪಗಳು ಸಾಬೀತಾಗದ ಹಿನ್ನೆಲೆಯಲ್ಲಿ 2015 ರಲ್ಲಿ ಅಮಾನತು ಶಿಕ್ಷೆ ರದ್ದುಗೊಳಿಸಲಾಗಿತ್ತು. 2016 ರಲ್ಲಿ ಮುಂಬೈ ಪೊಲೀಸ್ ಸೇವೆಗೆ ಮರಳಿದ್ದರು. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bengaluru: ಫ್ರೀಡಂ ಪಾರ್ಕ್‌ನಲ್ಲಿ ಕೈಗೆ ಕೋಳ ಹಾಕಿಕೊಂಡು 'STOP killing Men' ಪ್ರತಿಭಟನೆ ಮಾಡಿದ ಪುರುಷರು!
ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ