ಬ್ಲೂವೇಲ್ ಚಾಲೆಂಜ್: ಫೇಸ್'ಬುಕ್, ಗೂಗಲ್, ಯಾಹೂ ಅಭಿಪ್ರಾಯ ಕೇಳಿದ ದೆಹಲಿ ಕೋರ್ಟ್

By Suvarna Web DeskFirst Published Aug 22, 2017, 6:03 PM IST
Highlights

ಬ್ಲೂವೆಲ್ ಚಾಲೆಂಜ್  ಆಟದ ಲಿಂಕ್’ಗಳನ್ನು ತೆಗೆದುಹಾಕುವ ಬಗ್ಗೆ ಫೇಸ್’ಬುಕ್. ಗೂಗಲ್ ಹಾಗೂ ಯಾಹೂ ಕಂಪನಿಗೆ ಪ್ರತಿಕ್ರಿಯಿಸುವಂತೆ ದೆಹಲಿ ನ್ಯಾಯಾಲಯ ಆದೇಶಿಸಿದೆ.

ನವದೆಹಲಿ (ಆ.22): ಬ್ಲೂವೆಲ್ ಚಾಲೆಂಜ್  ಆಟದ ಲಿಂಕ್’ಗಳನ್ನು ತೆಗೆದುಹಾಕುವ ಬಗ್ಗೆ ಫೇಸ್’ಬುಕ್. ಗೂಗಲ್ ಹಾಗೂ ಯಾಹೂ ಕಂಪನಿಗೆ ಪ್ರತಿಕ್ರಿಯಿಸುವಂತೆ ದೆಹಲಿ ನ್ಯಾಯಾಲಯ ಆದೇಶಿಸಿದೆ.

ಅದೇ ರೀತಿ ಬ್ಲೂವೆಲ್ ಚಾಲೆಂಜ್ ಲಿಂಕ್’ಗಳನ್ನು ಆನ್’ಲೈನ್’ನಿಂದ ತಗೆದು ಹಾಕುವಂತೆ ಅಂತರ್ಜಾಲ ಘಟಕಗಳಿಗೆ ನಿರ್ದೆಶಿಸುವ ಬಗ್ಗೆ ಕೇಂದ್ರ ಹಾಗೂ ದೆಹಲಿ ಪೊಲೀಸರ ಪ್ರತಿಕ್ರಿಯೆಯನ್ನು ಕೇಳಿದೆ.

ಬ್ಲೂವೇಲ್ ಚಾಲೆಂಜ್ ಆಟದಿಂದಾಗಿ ಮಕ್ಕಳು ಆತ್ಯಹತ್ಯೆಗೆ ಶರಣಾಗಿರುವ ಬಗ್ಗೆ ನ್ಯಾ. ಗೀತಾ ಮಿತ್ತಲ್ ಹಾಗೂ ನ್ಯಾ. ಹರಿಶಂಕರ್ ನೇತೃತ್ವದ ನ್ಯಾಯಪೀಠ ಕಳವಳ ವ್ಯಕ್ತಪಡಿಸಿತ್ತು. ಈ ಆಟವನ್ನು ಆಡುವಾಗ ಮಕ್ಕಳು ಕಟ್ಟಡದಿಂದ ಜಿಗುಯುವುದು ಯಾಕೆ? ಯಾಕೆ ಇಷ್ಟೊಂದು ಪ್ರಭಾವಿತರಾಗುತ್ತಿದ್ದಾರೆ ಎಂದು ದೆಹಲಿ ನ್ಯಾಯಾಲಯ ಆತಂಕ ವ್ಯಕ್ತಪಡಿಸಿತ್ತು.

ಮಕ್ಕಳೇ ಏಕೆ ಬಲಿಯಾಗುತ್ತಿದ್ದಾರೆ?

ಈ ಸಾವಿನ ಆಟಕ್ಕೆ ಬಲಿಯಾದವರೆಲ್ಲರೂ 16 ವಯಸ್ಸಿಗಿಂತ ಕಿರಿಯರು ಎಂಬುವುದು ಬೆಚ್ಚಿ ಬೀಳಿಸುವ ವಿಚಾರ. ಹಾಗಾದ್ರೆ ಮಕ್ಕಳೆ ಏಕೆ ಬಲಿಪಶುಗಳಾಗುತ್ತಾರೆ ಎಂದು ಯೋಚಿಸಿದರೆ ಸಿಗುವುದು ಕೇವಲ ಒಂದೇ ಉತ್ತರ.... ಬಿಡುವಿಲ್ಲದ ಜೀವನದಿಂದ ದಿನದಿಂದ ದಿನಕ್ಕೆ ಮಕ್ಕಳ ಚಟುವಟಿಕೆಗಳ ಮೇಲೆ ಹೆತ್ತವರ ಗಮನ ಕುಂಟಿತವಾಗುತ್ತಿದೆ. ಅಲ್ಲದೇ ಮಕ್ಕಳ ಮೇಲಿನ ಅಂಧ ಪ್ರೀತಿಯಿಂದ ಪ್ರತಿಯೊಂದೂ ಬೇಡಿಕೆಗಳನ್ನು ತಂದೆ ತಾಯಿ ಪೂರೈಸುತ್ತಿದ್ದಾರೆ. ಹೀಗಾಗಿ ಮಕ್ಕಳಿಗೆ ತಂದೆ ತಾಯಿಯ ಪ್ರೀತಿಯೊಂದು ಬಿಟ್ಟು ಉಳಿದೆಲ್ಲವೂ ಸಿಗುತ್ತಿದೆ. ಎಲ್ಲೋ ಒಂದೆಡೆ ಈ ಪ್ರೀತಿಯಿಂದ ದೂರ ಸರಿದ ಮಕ್ಕಳಲ್ಲಿ ಒಂಟಿತನದ ಭಾವನೆ ಮೂಡುವುದರಲ್ಲಿ ಅನುಮಾನ ಮತ್ತು ಆಶ್ಚರ್ಯವಿಲ್ಲ. ಇದೇ ಕಾರಣದಿಂದ ಮಕ್ಕಳ ಗಮನ ಇಂತಹ ಮನ ಕೆಡಿಸುವ ವಿಚಾರಗಳ ಮೇಲೆ ಹೆಚ್ಚಾಗುತ್ತಿದೆ.

 

click me!