
ಹೈದರಾಬಾದ್: ಕಳೆದ ಕೆಲವು ದಿನಗಳಿಂದ ಬ್ಲೂ ವೇಲ್‌ಗೆ ಬಲಿಯಾದವರ ಸುದ್ದಿ ಕಡಿಮೆಯಾದಂತೆ ಕಾಣುತ್ತಿತ್ತು, ಈ ಮಾರಾಣಾಂತಿಕ ವೀಡಿಯೋ ಗೇಮ್ ವಿರುದ್ಧ ಸರಕಾರ ತೆಗೆದುಕೊಂಡ ಕ್ರಮ ಫಲ ನೀಡಿದೆ ಎಂದು ಕೊಳ್ಳುತ್ತಿರುವಾಗಲೇ, ಬಿ.ಟೆಕ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಬ್ಲೂ ವೇಲ್‌ಗೆ ಬಲಿಯಾಗಿದ್ದಾನೆಂದು ಶಂಕಿಸಲಾಗಿದೆ.
ಪಿಲಣಿಯ ಬಿಟ್ಸ್ ವಿದ್ಯಾರ್ಥಿ 19 ವರ್ಷದ ಟಿ.ವರುಣ್ ಆತ್ಮಹತ್ಯೆಗೆ ಶರಣಾದವನು. ಎರಡನೇ ವರ್ಷದ ಪದವಿ ಓದುತ್ತಿದ್ದ ವರುಣ್, ರಜೆಗೆಂದು ಗಂಡಿಪೇಟೆಯ ತಮ್ಮ ಮನೆಗೆ ತೆರಳಿದ್ದಾಗ, ಮುಖಕ್ಕೆ ಪ್ಲಾಸ್ಟಿಕ್ ಬ್ಯಾಗ್ ಹಾಕ್ಕೊಂಡು, ಉಸಿರುಗಟ್ಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ವೀಡಿಯೋ ಗೇಮ್‌ನ ದಾಸರಾದವರಿಗೆ ಸಮಾಜ ವಿರೋಧಿ ಚಟುವಟಿಕೆಗಳನ್ನು ಮಾಡಲು ಪ್ರೇರೇಪಿಸಲಿದ್ದು, ವರುಣ್ ಇಂಟರ್ನೆಟ್ ಹಾಗೂ ವೀಡಿಯೋ ಗೇಮ್ಸ್ ದಾಸನಾಗಿದ್ದ ಎನ್ನಲಾಗಿದೆ.
'ಬಹುತೇಕ ಸಮಯವನ್ನು ವರುಣ್ ಕಂಪ್ಯೂಟರ್ ಮುಂದೆಯೇ ಕಳೆಯುತ್ತಿದ್ದ. ಆತನ ದೇಹದ ಮೇಲೆ ಯಾವುದೇ ಗಾಯಗಳಾಗಿಲ್ಲ. ತನಿಖೆ ವೇಳೆಸಾವಿಗೆ ಸ್ಪಷ್ಟ ಕಾರಣ ತಿಳಿಯಬಹುದು,' ಎಂದು ತನಿಖಾ ಅಧಿಕಾರಿ ಹೇಳಿದ್ದಾರೆ.
ಅನುಮಾನಸ್ಪದ ಸಾವೆಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.