
ಉಡುಪಿ[ಜೂ.17]: ಜಿಲ್ಲೆಯ ಕುಂದಾಪುರ ತಾಲೂಕು ಸಿದ್ದಾಪುರ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕಾಗಿ ಜೂ.14 ರಂದು ನಡೆದಿದ್ಧ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭರ್ಜರಿ ಜಯಗಳಿಸಿದ್ದಾರೆ.
ಇಂದು ನಡೆದ ಮತ ಎಣಿಕೆಯಲ್ಲಿ ಭಾರತೀಯ ಜನತಾ ಪಕ್ಷದ ರೋಹಿತ್ ಕುಮಾರ್ ಶೆಟ್ಟಿ 11926 ಮತಗಳನ್ನು ಪಡೆಯುವುದರೊಂದಿಗೆ ಕಾಂಗ್ರೆಸಿನ ಪ್ರಸನ್ನ ಕುಮಾರ್ ಶೆಟ್ಟಿ ಅವರನ್ನು 3360 ಅಂತರದಿಂದ ಸೋಲಿಸಿದರು.
ಪ್ರಸನ್ನ ಅವರು 8566 ಮತ ಪಡೆದರೆ ಜೆಡಿಎಸ್'ನ ಅರುಣ್ ಶೆಟ್ಟಿ 276 ಮತ ಪಡೆದರು. ನೋಟಾಗೆ 280 ಮತಗಳು ಬಿದ್ದಿದ್ದವು. ಚುನಾವಣೆಯಲ್ಲಿ ಒಟ್ಟು 21.048 ಮತ ಚಲಾವಣೆಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.