ಮಹಾರಾಷ್ಟ್ರ ಪುರಸಭೆ ಚುನಾವಣೆ: ಬಿಜೆಪಿಗೆ ಭರ್ಜರಿ ಜಯ

By Suvarna Web DeskFirst Published Apr 21, 2017, 1:57 PM IST
Highlights

ಏಪ್ರಿಲ್ 21 ರಂದು ಮೂರು ಜಿಲ್ಲೆಗಳ 201 ಪುರಸಭೆ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಲಾತೂರ್'ನ 70 ಸ್ಥಾನಗಳಲ್ಲಿ ಬಜೆಪಿ 40 ರಲ್ಲಿ ಜಯ ಗಳಿಸಿದೆ. ಈ ಪುರಸಭೆಯು ಕಾಂಗ್ರಸ್'ನ ಮಾಜಿ  ಮುಖ್ಯಮಂತ್ರಿ ದಿವಂಗತ ವಿಲಾಸ್'ರಾವ್ ದೇಶ್'ಮುಖ್  ಅವರ ಪುತ್ರ ಅಮಿತ್ ದೇಶ್'ಮುಖ್ ಅವರ ನಿಯಂತ್ರಣದಲ್ಲಿತ್ತು.

ಮುಂಬೈ(ಏ.21): ಮಹಾರಾಷ್ಟ್ರದ ಲಾತೂರ್ ಹಾಗೂ ಚಂದ್ರಾಪುರ್ ಜಿಲ್ಲೆಯ ಪುರಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆ[ಇ ಭರ್ಜರಿ ವಿಜಯ ಸಾಧಿಸಿದೆ. ಪರ್ಭಾನಿ'ಯಲ್ಲಿ ಮಾತ್ರ ಕಾಂಗ್ರೆಸ್ ಹಾಗೂ ಎನ್'ಸಿಪಿ ಮುನ್ನಡೆಯಲ್ಲಿವೆ.

ಏಪ್ರಿಲ್ 21 ರಂದು ಮೂರು ಜಿಲ್ಲೆಗಳ 201 ಪುರಸಭೆ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಲಾತೂರ್'ನ 70 ಸ್ಥಾನಗಳಲ್ಲಿ ಬಜೆಪಿ 40 ರಲ್ಲಿ ಜಯ ಗಳಿಸಿದೆ. ಈ ಪುರಸಭೆಯು ಕಾಂಗ್ರಸ್'ನ ಮಾಜಿ  ಮುಖ್ಯಮಂತ್ರಿ ದಿವಂಗತ ವಿಲಾಸ್'ರಾವ್ ದೇಶ್'ಮುಖ್  ಅವರ ಪುತ್ರ ಅಮಿತ್ ದೇಶ್'ಮುಖ್ ಅವರ ನಿಯಂತ್ರಣದಲ್ಲಿತ್ತು.

ವಿದರ್ಭದ ಚಂದ್ರ'ಪುರದ 66 ಸ್ಥಾನಗಳಲ್ಲಿ ಭಾರತೀಯ ಜನತಾ ಪಕ್ಷ 30 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. 17 ಸ್ಥಾನಗಳಿಸಿರುವ ಕಾಂಗ್ರೆಸ್ 17 ರಲ್ಲಿ ಜಯಗಳಿಸಿದೆ. ಪರ್ಭಾನಿ'ಯಲ್ಲಿ ಕಾಂಗ್ರೆಸ್ ಹಾಗೂ ಎನ್'ಸಿಪಿ 30 ಹಾಗೂ 20 ಸ್ಥಾನ'ಗಳಿಸುವ ಮೂಲಕ ಮೊದಲೆರಡು ಸ್ಥಾನ ಗಳಿಸಿವೆ. ಫೆಬ್ರವರಿಯಲ್ಲಿ ಬೃಹ್ಮನ್'ಮುಂಬೈ ಪುರಸಭೆ ಚುನಾವಣೆಯಲ್ಲಿ ಸಹ ನಡೆದ  ಬಿಜೆಪಿ ಅತ್ಯಧಿಕ ಸ್ಥಾನಗಳನ್ನು ಗಳಿಸಿತ್ತು.

click me!