‘ಆಷಾಢದ ನಂತರ ಬಿಜೆಪಿ ಸರ್ಕಾರ’

By Web DeskFirst Published Jul 2, 2019, 10:18 AM IST
Highlights

ಈಗಾಗಲೇ ಮೈತ್ರಿ ಕೂಟದಲ್ಲಿ ರಾಜೀನಾಮೆ ಪರ್ವ ಆರಂಭವಾಗಿದ್ದು, ಆಷಾಢದ ಬಳಿಕ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಭವಿಷ್ಯ ನುಡಿಯಲಾಗಿದೆ. 

ಮಂಡ್ಯ [ಜು.2] :  ಆಷಾಢದ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಶಾಸಕ, ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಸೋಮವಾರ ದೃಢವಾಗಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌.ಅಶೋಕ್‌ ಬಿಜೆಪಿಯಿಂದ ಆಪರೇಷನ್‌ ಕಮಲ ನಡೆಸುವುದಿಲ್ಲ. ಆದರೆ, ರಾಜ್ಯದ ಮೈತ್ರಿ ಸರ್ಕಾರದ ಎರಡೂ ಪಕ್ಷಗಳ ನಡುವೆ ತಾರತಮ್ಯ- ಕಂದಕ ಹೆಚ್ಚಾಗಿದೆ. ಹೀಗಾಗಿ ಮೈತ್ರಿ ಸರ್ಕಾರ ತಾನಾಗಿಯೇ ಸರಕಾರ ತನಗೆ ತಾನೇ ಪತನಗೊಳ್ಳಲಿದೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ನಡವಳಿಕೆಯಿಂದ ಎಲ್ಲರೂ ಬೇಸತ್ತಿದ್ದಾರೆ. ಕಾಂಗ್ರೆಸ್‌ನಂತೂ ಅಸಹಕಾರ, ಅಸಹನೆ ಗುಂಪುಗಾರಿಕೆ ಹೆಚ್ಚಾಗಿದೆ. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಶಾಸಕರ ನಡುವಿನ ತಾರತಮ್ಯ ಎದ್ದುಕಾಣುತ್ತಿದೆ. ಈ ತಾರತಮ್ಯ ಸಹಿಸದ ಅತೃಪ್ತ ಶಾಸಕರು ರಾಜೀನಾಮೆ ನೀಡುವ ಹಾದಿಯಲ್ಲಿದ್ದಾರೆ. ಶಾಸಕ ಆನಂದ್‌ಸಿಂಗ್‌ ರಾಜೀನಾಮೆ ನೀಡುವುದರ ಮೂಲಕ ಪರ್ವ ಆರಂಭಿಸಿದ್ದಾರೆ. ಮುಂದಿನ ಒಂದು ವಾರದಲ್ಲಿ ನಿರೀಕ್ಷೆ ಮಾಡಲಾಗದಷ್ಟು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಅಶೋಕ್‌ ಹೊಸ ಬಾಂಬ್‌ ಸಿಡಿಸಿದರು.

click me!