
ಹೈದರಾಬಾದ್: ಕರ್ನಾಟಕ ಚುನವಣೆಗಳು ಮುಗಿದು ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ ತನ್ನ ಬಲ ಪ್ರದರ್ಶಿಸಿದ್ದಾಯ್ತು. ಈಗ ಬಿಜೆಪಿ ತೆಲಂಗಾಣದತ್ತ ತನ್ನ ಚಿತ್ತ ಹರಿಸಿದೆ.
'ಇತ್ತೀಚೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೆವು. ಆಗ ಅವರು, 'ಈಗ ಕರ್ನಾಟಕ ಚುನಾವಣೆ ಮುಗಿದಿದೆ. ಇನ್ನು ತೆಲಂಗಾಣದತ್ತ ನಾವು ಗಮನ ಹರಿಸಲಿದ್ದೇವೆ’ ಎಂದು ಹೇಳಿದರು. ಅಲ್ಲದೆ, ಆಂಧ್ರಪ್ರದೇಶ, ಪ.ಬಂಗಾಳ ಹಾಗೂ ಒಡಿಶಾದತ್ತ ಕೂಡ ಪಕ್ಷ ಗಮನ ಹರಿಸಲಿದೆ ಎಂದು ತಿಳಿಸಿದರು' ಎಂದು ತೆಲಂಗಾಣ ಬಿಜೆಪಿ ಅಧ್ಯಕ್ಷ ಕೆ. ಲಕ್ಷ್ಮಣ ಹೇಳಿದರು.
ಅಮಿತ್ ಶಾ ಅವರು ಮುಂದಿನ ತಿಂಗಳು ತೆಲಂಗಾಣಕ್ಕೆ ಬರಲಿದ್ದಾರೆ. ಇಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿ ರಣತಂತ್ರ ರೂಪಿಸಲಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.