ಭಿನ್ನಮತದ ನಡುವೆಯೂ ಕಾರ್ಯಕಾರಿಣಿಗೆ ಚಾಲನೆ; ಸಂತೋಷ್ ಗೈರು

Published : May 06, 2017, 08:34 AM ISTUpdated : Apr 11, 2018, 12:38 PM IST
ಭಿನ್ನಮತದ ನಡುವೆಯೂ ಕಾರ್ಯಕಾರಿಣಿಗೆ ಚಾಲನೆ; ಸಂತೋಷ್ ಗೈರು

ಸಾರಾಂಶ

ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ವೇದಿಕೆ ಮೇಲೆ ಕುಳಿತಿದ್ದರು. ಆದರೆ ಈಶ್ವರಪ್ಪ ವೇದಿಕೆ ಮೇಲೆ ಎಲ್ಲ ನಾಯಕರನ್ನೂ ಕೈ ಮುಗಿಯುತ್ತಾ ತಮ್ಮ ಆಸನಕ್ಕೆ ಬಂದರು. ಈ ವೇಳೆ ಮಧ್ಯದಲ್ಲಿ ಯಡಿಯೂರಪ್ಪ ಕೂಡಾ ಇದ್ದರು. ಯಡಿಯೂರಪ್ಪಗೂ ಈಶ್ವರಪ್ಪ ಕೈ ಮುಗಿದರು, ಆದರೆ ಯಡಿಯೂರಪ್ಪ ಯಾವುದೋ ಪೇಪರ್​ ನೋಡುತ್ತಾ ಕುಳಿತಿದ್ರು. ತಲೆ ಮೇಲೆ ಎತ್ತಲಿಲ್ಲ. ಹಾಗೇ ಕೈ ಮುಗಿದ ಈಶ್ವರಪ್ಪ ಮುಂದಕ್ಕೆ ಹೋದ್ರು.

ಮೈಸೂರು (ಮೇ.06): ಬಿ.ಎಸ್​. ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್  ನಡುವಿನ ಶೀತಲ ಸಮರ ಮೈಸೂರು ಕಾರ್ಯಕಾರಿಣಿಯಲ್ಲಿ  ಬಹಿರಂಗಗೊಂಡಿದೆ.  ಹಿಂದಿನ ಕಾರ್ಯಕಾರಣಿಯಲ್ಲಿ ಮುಂಚೂಣಿಯಲ್ಲಿರುತ್ತಿದ್ದ  ಸಂತೋಷ್ ಈ ಬಾರಿ ಗೈರುಹಾಜರಾಗಿದ್ದರೆ, ಕೆ.ಎಸ್. ಈಶ್ವರಪ್ಪ ಭಾಗವಹಿಸಿದ್ದಾರೆ.

ಬಂಡಾಯದ ಮಧ್ಯೆ ಮೈಸೂರಲ್ಲಿ ಇಂದು 20-ದಿನಗಳ ಬಿಜೆಪಿ ಕಾರ್ಯಕಾರಿಣಿ ಆರಂಭವಾಗಿದ್ದು, ಸಭೆಗೆ ಭಾನುಪ್ರಕಾಶ್ ಹಾಗೂ ನಿರ್ಮಲ್ ಕುಮಾರ್ ಸುರಾನಾ ಗೈರುಹಾಜರಾಗಿದ್ದಾರೆ.

ಅಪಸ್ವರ ಎತ್ತದಂತೆ ಬಂಡಾಯ ನಾಯಕರಿಗೆ ಸೂಚನೆ ನೀಡಿದ್ದೇನೆ, ಏನೇ ಅಸಮಾಧಾನ ಇದ್ದರೂ ನನ್ನ ಜತೆ ಮಾತಾಡಲಿ, ಎಂದು ಮೈಸೂರಿನಲ್ಲಿ ಸುವರ್ಣ ನ್ಯೂಸ್​ಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ. ಈ ಸಂದರ್ಭದಲ್ಲಿ ಈಶ್ವರಪ್ಪ ಬಣಕ್ಕೆ ಮತ್ತೆ ಎಚ್ಚರಿಕೆ ಕೊಟ್ಟ ಯಡಿಯೂರಪ್ಪ, ಯಾರೊಬ್ಬರೂ ಒಂದೇ ಒಂದು ಒಡಕಿನ ಶಬ್ದ ಮಾತಾಡಬಾರದು ಎಂದಿದ್ದಾರೆ.

ಈಶ್ವರಪ್ಪ ಕೈ ಮುಗಿದ್ರೂ, ಬಿಎಸ್​ವೈ ನೋ ರಿಯಾಕ್ಷನ್​:

ಮೈಸೂರಿನ ಬಿಜೆಪಿ ಕಾರ್ಯಕಾರಿಣಿಯಲ್ಲಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ವೇದಿಕೆ ಮೇಲೆ ಕುಳಿತಿದ್ದರು. ಆದರೆ ಈಶ್ವರಪ್ಪ ವೇದಿಕೆ ಮೇಲೆ ಎಲ್ಲ ನಾಯಕರನ್ನೂ ಕೈ ಮುಗಿಯುತ್ತಾ ತಮ್ಮ ಆಸನಕ್ಕೆ ಬಂದರು. ಈ ವೇಳೆ ಮಧ್ಯದಲ್ಲಿ ಯಡಿಯೂರಪ್ಪ ಕೂಡಾ ಇದ್ದರು. ಯಡಿಯೂರಪ್ಪಗೂ ಈಶ್ವರಪ್ಪ ಕೈ ಮುಗಿದರು, ಆದರೆ ಯಡಿಯೂರಪ್ಪ ಯಾವುದೋ ಪೇಪರ್​ ನೋಡುತ್ತಾ ಕುಳಿತಿದ್ರು. ತಲೆ ಮೇಲೆ ಎತ್ತಲಿಲ್ಲ. ಹಾಗೇ ಕೈ ಮುಗಿದ ಈಶ್ವರಪ್ಪ ಮುಂದಕ್ಕೆ ಹೋದ್ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!
ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!