
ಬೆಂಗಳೂರು[ಜ.07] ಕಾರ್ಮಿಕ ಸಂಘಟನೆಗಳನ್ನು ದಿಕ್ಕು ತಪ್ಪಿಸುವ ಉದ್ದೇಶಕ್ಕೆ ಕರೆ ನೀಡಿರುವ ಬಂದ್‌ಗೆ ಯಾವುದೆ ಅರ್ಥವಿಲ್ಲ. ವಾಸ್ತವಿಕತೆಯಿಂದ ದೂರ ಇರುವ ಈ ಬಂದ್‌ನ್ನು ಧಿಕ್ಕರಿಸಬೇಕು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಮನವಿ ಮಾಡಿದ್ದಾರೆ.
ನಿರುದ್ಯೋಗ, ಬೆಲೆ ಏರಿಕೆ ಮತ್ತು ಕೇಂದ್ರ ಸರಕಾರದ ಆರ್ಥಿಕ ನೀತಿ ವಿರೋಧಿಸಿ ಕರೆನೀಡಿರುವ ಬಂದ್‌ಗೆ ಅರ್ಥವಿಲ್ಲ. ಕಳೆದ 4 ವರ್ಷದಲ್ಲಿ ಬೆಲೆ ನಿಯಂತ್ರಣದಲ್ಲಿದೆ. ಕಪೋ ಕಲ್ಪಿತ ಅಂಕಿ ಅಂಶಗಳ ಆಧಾರದಲ್ಲಿ ಬಂದ್‌ಗೆ ಕರೆ ನೀಡಿರುವುದು ಖಂಡನೀಯ ಎಂದಿದ್ದಾರೆ.
ಜನವರಿ 8 - 9 ರಂದು ಭಾರತ್ ಬಂದ್ : ಏನಿರುತ್ತೆ..? ಏನಿರಲ್ಲ..?
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರ್ಕಾರಿ ಉದ್ದಿಮೆಗಳ ಖಾಸಗೀಕರಣ 15 ವರ್ಷಗಳಿಂದ ನಡೆಯುತ್ತಿರುವ ಪ್ರಕ್ರಿಯೆ. ಇದನ್ನು ಮೋದಿ ಸರಕಾರ ಕೈಗೊಂಡಿಲ್ಲ.ಮುಂದಿನ ಲೋಕಸಭಾ ಚುನಾವಣೆ ಗಮನದಲ್ಲಿರಿಸಿ ರಾಜಕೀಯ ಲಾಭಕ್ಕಾಗಿ ಹಮ್ಮಿಕೊಂಡಿರುವ ಬಂದ್ ಧಿಕ್ಕರಿಸಬೇಕು ಎಂದು ಬಿಜೆಪಿ ಮನವಿ ಮಾಡಿದೆ.
ನಾಳೆ ಭಾರತ್ ಬಂದ್ : ಶಾಲಾ-ಕಾಲೇಜುಗಳಿಗೆ ಇರುತ್ತಾ ರಜೆ..?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.