ವಿಶ್ವನಾಥ್ ಪರ ಬ್ಯಾಟಿಂಗ್, ಮಾತೆ ಮಹಾದೇವಿಗೆ ಭರ್ಜರಿ ಟಾಂಗ್

First Published Jul 9, 2018, 9:28 PM IST
Highlights

ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿ ಗೆದ್ದು ಬಂದರೂ ಸರಕಾರದಲ್ಲಿ ಸಚಿವ ಸ್ಥಾನ ವಂಚಿತರಾಗಿರುವ ಕುರುಬ ನಾಯಕ ಎಚ್. ವಿಶ್ವನಾಥ್ ಪರ ಮತ್ತೊಬ್ಬ ಕುರುಬ ನಾಯಕ ಬ್ಯಾಟ್ ಬೀಸಿದ್ದಾರೆ. ಬ್ಯಾಟ್ ಬೀಸಿರುವುದು ಮಾತ್ರವಲ್ಲದೇ ಅನುಕಂಪದ ಮಾತುಗಳನ್ನು ಆಡಿದ್ದಾರೆ.

ಬೆಂಗಳೂರು[ಜು.9] ಕಾಗಿನೆಲೆ ಮಠ ನಾಲ್ಕು ಶಾಖೆ ಪಡೆಯಲು ಕಾರಣ ಎಚ್.ವಿಶ್ವನಾಥ್  ಆದರೆ ಅವರಿಗೆ ಮಂತ್ರಿ ಪಟ್ಟ ಸಿಗಬೇಕಿತ್ತು ಕೊನೆ ಹಂತದಲ್ಲಿ ಅದು ಕೈ ತಪ್ಪಿದೆ ಎಂದು ಬಿಜೆಪಿ ನಾಯಕ  ಕೆಎಸ್ ಈಶ್ವರಪ್ಪ ಅನುಕಂಪ ವ್ಯಕ್ತಪಡಿಸಿದ್ದಾರೆ. 

ವಿಶ್ವನಾಥ್ ಅವರಿಗೆ ಮುಂದೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ.  ವಿಶ್ವನಾಥ್ ಕುರುಬ ಜಾತಿಯ ನಾಯಕ ಆದರೆ ನಾನು ಹಿಂದೂ ಧರ್ಮದ ನಾಯಕ. ರಘುನಾಥ್ ಮಲ್ಕಾಪುರೆ, ನಾನು ಹಿಂದೂ ನಾಯಕರು ಹಿಂದೂಗಳ ವಿಚಾರವಾಗಿ ಯಾರೇ‌‌ ಕೆಮ್ಮಿದರೂ ನಾವು ಬಿಡೋದಿಲ್ಲ ನಾನು ಹಿಂದೂ ನಾಯಕ‌ ಎಂದು ಹೇಳಿಕೊಳ್ಳೋಕೆ ನನಗೆ ಹೆಮ್ಮೆ ಇದೆ ಎಂದು ಹೇಳಿದರು.

ಕಾಂಗ್ರೆಸ್ ನಲ್ಲಿ ಎಷ್ಟೇ ಮಂದಿ ಲಿಂಗಾಯತ ನಾಯಕರಿದ್ದರೂ ಯಡಿಯೂರಪ್ಪ ಲಿಂಗಾಯತ ನಾಯಕ ಅಂತಾರೆ. ಜೆಡಿಎಸ್ ನ ದೇವೆಗೌಡರು ಒಕ್ಕಲಿಗರ ಸಮುದಾಯಕ್ಕೆ ನಾಯಕ ಅಂತಾರೆ ಕುರುಬರಿಗೆ ಸಿದ್ದರಾಮಯ್ಯ ನಾಯಕ ಅಂತ ಜನ ಗುರುತಿಸುತ್ತಾರೆ ಕುರುಬರು ಅವರ ನಾಯಕ ಸಿದ್ದರಾಮಯ್ಯ ತಪ್ಪು ಮಾಡಿದ್ರೆ ಅವರಿಗೂ ಬೈತಾರೆ ಯಡಿಯೂರಪ್ಪ ತಪ್ಪು ಮಾಡಿದಾಗ ಅವರ ಸಮುದಾಯದವರೂ ಅವರಿಗೂ ಬೈತಾರೆ ಹೀಗಾಗಿ ನಾವು ಎಲ್ಲಾ ಜಾತಿ, ಧರ್ಮವನ್ನು ಒಂದೇ ದೃಷ್ಟಿಯಲ್ಲಿ ನೋಡಬೇಕು  ಎಂದು ಪಾಠ ಮಾಡಿದರು.

ಸ್ವಾಮೀಜಿಗಳು ತ್ಯಾಗಿಗಳು, ನಾವು ಭೋಗಿಗಳು ನೀವು ಯಾವುದೇ ಪಕ್ಷ ಪರವಾಗಿ ಹೋಗಬೇಡಿ ಒಂದು ವೇಳೆ ಅವರ ಪಕ್ಷವೊಂದರ ಪರ ಮಾತಾಡಿದ್ರೆ ನಾವು ಅವರನ್ನು ಸ್ವಾಮೀಜಿಗಳು ಎಂದು ಕರೆಯಲು ಸಾಧ್ಯವಾ?  ಎಂದು ಮಾತೆ ಮಾತೆ ಮಹಾದೇವಿಗೆ ಟಾಂಗ್ ನೀಡಿದರು.

ಸರ್ಕಾರ ಬಹಳ ದಿನ ಇದ್ರೆ‌ ಇಬ್ಬರು ಒಳ್ಳೆಯ ಸಚಿವರಾಗಲಿದ್ದಾರೆ ಹೆಚ್ಎಂ ರೇವಣ್ಣ, ಮತ್ತು ಎಚ್ ವಿಶ್ವನಾಥ್ ಅವರು ಮಂತ್ರಿಗಳಾದರೆ ಎಲ್ಲರಿಗೂ ಖುಷಿಯಾಗಲಿದೆ. ಕೊನೆ ಕ್ಷಣದಲ್ಲಿ ಬಿಜೆಪಿಗೆ ಕೈಕೊಟ್ಟ ಪಕ್ಷೇತರ ಶಾಸಕ ಶಂಕರ್ ಯಾವ ಸರಕಾರ ಬಂದರೂ ಸಚಿವರಾಗುತ್ತಾರೆ ಎಂದು ವ್ಯಂಗ್ಯವಾಡಿದರು.

click me!