‘ಕಾಂಗ್ರೆಸ್ ಗಿಂತ ಬಿಜೆಪಿ ಅವಧಿಯಲ್ಲೇ ಹೆಚ್ಚು ಭ್ರಷ್ಟಾಚಾರ’

By Web DeskFirst Published Sep 9, 2018, 1:50 PM IST
Highlights

ಕಳೆದ ಐದು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಿತು. ಕಾಂಗ್ರೆಸ್ ಅನ್ನು ಅಧಿಕಾರದಿಂದ ಇಳಿಸಿ ಜನರು ಬಿಜೆಪಿಗೆ ಅಧಿಕಾರ ನೀಡಿದರು. ಆದರೆ ಕಾಂಗ್ರೆಸ್ ಅವಧಿಗಿಂತ ಬಿಜೆಪಿ ಅವಧಿಯಲ್ಲೇ ಹೆಚ್ಚು ಭ್ರಷ್ಟಾಚಾರ ನಡೆದಿದೆ ಎಂದು ಆಪ್ ಮುಖಂಡ ಅರವಿಂದ್ ಕೇಜ್ರಿವಾಲ್ ಆರೋಪ ಮಾಡಿದ್ದಾರೆ. 

ನವದೆಹಲಿ : ಕೇಂದ್ರ ಸರ್ಕಾರ ರಫೇಲ್ ಖರೀದಿ ಹಗರಣದಲ್ಲಿ ಭಾಗಿಯಾಗುವ ಮೂಲಕ ಭಾರೀ ಭ್ರಷ್ಟಾಚಾರ ಎಸಗಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ಕೇಜ್ರಿವಾಲ್ ಆರೋಪಕ್ಕೆ ಹಿರಿಯ ಬಿಜೆಪಿ ಮುಖಂಡ ಯಶವಂತ್ ಸಿನ್ಹಾ ಹಾಗೂ ಶತ್ರುಘ್ನ ಸಿನ್ಹಾ ಕೂಡ ಧ್ವನಿ ಗೂಡಿಸಿದ್ದಾರೆ. 

ಆಮ್ ಆದ್ಮಿ ಪಕ್ಷದ ಸಮ್ಮೇಳದಲ್ಲಿ ಮಾತನಾಡಿದ ಕೇಜ್ರಿವಾಲ್ ಕಾಂಗ್ರೆಸ್ ಗಿಂತಲೂ ಕೂಡ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಐದು ವರ್ಷಗಳ ಹಿಂದೆ ಜನರು ದೇಶದಲ್ಲಿ ಭ್ರಷ್ಟಾಚಾರವನ್ನು ಹೋಗಲಾಡಿಸಬೇಕು ಎಂದು ಕಾಂಗ್ರೆಸ್ ನ್ನು ಅಧಿಕಾರದಿಂದ ಕೆಳಕ್ಕೆ ಇಳಿಸಿ ಬಿಜೆಪಿಗೆ ಅಧಿಕಾರ ನೀಡಿದರು. ಆದರೆ ಈ ಪಕ್ಷವೂ ಕೂಡ ಭ್ರಷ್ಟಾಚಾರವನ್ನು ಮುಂದುವರಿಸಿತು ಎಂದರು. . 

Latest Videos

ಭ್ರಷ್ಟಾಚಾರವನ್ನು ಬಿಜೆಪಿಯು ದೇಶದಲ್ಲಿ ಮುಂದುವರಿಸಿದ್ದಲ್ಲದೇ ಭಾರೀ ಹಗರಣಗಳನ್ನು ನಡೆಸಿದೆ.  ಕಾಂಗ್ರೆಸ್ 2ಜಿ ಹಗರಣ ಮಾಡಿದರೆ ಇವರು ಸಹರಾ ಬಿರ್ಲಾ ಡೈರಿ ಸ್ಕ್ಯಾಮ್ ಮಾಡಿದರು. ಅವರು ಕಾಮನ್ ವೆಲ್ತ್ ಹಗರಣ ಮಾಡಿದರೆ ಇವರು ಲಲಿತ್ ಮೋದಿ ಹಗರಣ ಮಾಡಿದರು. ಅವರು ಭೋಫೋರ್ಸ್ ಹಗರಣದಲ್ಲಿ ಪಾಲ್ಗೊಂಡರೆ ಇವರು ರಫೇಲ್ ಸ್ಕ್ಯಾಮ್ ಮಾಡಿದರು ಎಂದು ಕೇಜ್ರಿವಾಲ್ ಆರೋಪಿಸಿದರು.

click me!