
ನವದೆಹಲಿ (ಅ.25): ಆಗ್ರಾದಲ್ಲಿನ ವಿಶ್ವ ಪ್ರಸಿದ್ಧ ಐತಿಹಾಸಿಕ ಮೊಗಲ್ ಸ್ಮಾರಕ ತಾಜ್ ಮಹಲ್‌ಗೆ "ತಾಜ್ ಮಂದಿರ್'' ಎಂದು ಪುನರ್ ನಾಮಕರಣ ಮಾಡುವಂತೆ ಬಿಜೆಪಿ ನಾಯಕ ವಿನಯ್ ಕಟಿಯಾರ್ ಸರಕಾರವನ್ನು ಆಗ್ರಹಿಸಿದ್ದಾರೆ.
ತಾಜ್ ಮಹಲ್‌ಗೆ ತಾಜ್ ಮಂದಿರ್ ಎಂದು ಪುನರ್ ನಾಮಕರಣ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ; ಏಕೆಂದರೆ ತಾಜ್ ಮಹಲ್ ಹಿಂದೆ ಶಿವಾಲಯವಾಗಿತ್ತು' ಎಂದು ಕಟಿಯಾರ್ ಹೇಳಿದ್ದಾರೆ. ತಾಜ್ ಮಹಲ್ ಆವರಣದಲ್ಲಿ ನಿನ್ನೆ ಸೋಮವಾರ ಹಿಂದೂ ಯುವ ವಾಹಿನಿ ಸಂಘಟನೆಗೆ ಸೇರಿದ ಕಾರ್ಯಕರ್ತರ ಒಂದು ಸಮೂಹ ಶಿವ ಚಾಳೀಸಾ ಪಠಿಸಿ ಪೊಲೀಸರಿಂದ ಬಂಧನಕ್ಕೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ವಿನಯ್ ಕಟಿಯಾರ್ ಅವರು ತಾಜ್ ಮಹಲ್ ಪುನರ್ ನಾಮಕರಣಕ್ಕೆ ಒತ್ತಾಯಿಸಿದ್ದಾರೆ.
ವಾರದ ಹಿಂದೆ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರು, "ಐತಿಹಾಸಿಕ ಸ್ಮಾರಕ ತಾಜ್ ಮಹಲ್ ದ್ರೋಹಿಗಳ ನಿರ್ಮಿತಿ; ಅದು ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿನ ಒಂದು ಕಪ್ಪು ಚುಕ್ಕೆ' ಎಂದು ಹೇಳಿದ್ದರು. ಆ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, "ಐತಿಹಾಸಿಕ ತಾಜ್ ಮಹಲ್ ಕಟ್ಟಡವನ್ನು ಯಾರು, ಯಾಕಾಗಿ ಕಟ್ಟಿದರು ಎಂಬುದು ಮುಖ್ಯವಲ್ಲ; ಅದು ಭಾರತೀಯ ಕಾರ್ಮಿಕರ ರಕ್ತ ಮತ್ತು ಬೆವರಿನ ಫಲವಾಗಿದೆ' ಎಂದು ಹೇಳಿದ್ದರು. ಇಷ್ಟಕ್ಕೂ ತಾಜ್ ಮಹಲ್ ಕುರಿತ ವಿವಾದ ಆರಂಭವಾದದ್ದು ಉತ್ತರ ಪ್ರದೇಶ ಸರಕಾರದ ಪ್ರವಾಸೋದ್ಯಮ ಇಲಾಖೆ ತನ್ನ ಕೈಪಿಡಿಯಲ್ಲಿ ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಅನ್ನು ಉಲ್ಲೇಖೀಸದೆ ಕೈಬಿಟ್ಟ ಕಾರಣಕ್ಕೆ !
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.