
ಬೆಂಗಳೂರು (ಸೆ.26): ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಚಿವ ಜಾರ್ಜ್ ರಾಜೀನಾಮೆ ನೀಡುವವರೆಗೂ ಅಹೋರಾತ್ರಿ ಹೋರಾಟ ಮಾಡುವುದಾಗಿ ಘೋಷಣೆ ಮಾಡಿದರು. ಆದರೆ ಈಗ ಬಿಜೆಪಿಯು ಸಚಿವ ಜಾರ್ಜ್ ವಿರುದ್ಧ ಹೋರಾಟ ಕೈಬಿಟ್ಟಂತೆ ಕಾಣಿಸುತ್ತದೆ.
ಹೋರಾಟ ಮಾಡಿಯೇ ತೀರುತ್ತೇವೆ ಅಂತ ಘೋಷಣೆ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ ನಾಯಕರೆಲ್ಲಾ ದೆಹಲಿಗೆ ತೆರಳಿದ್ದರು. ಯಡಿಯೂರಪ್ಪ ಪ್ರತಿಭಟನೆಗೆ ವ್ಯವಸ್ಥೆ ಯಾರು ಮಾಡಬೇಕು ಎಂಬ ಜವಾಬ್ದಾರಿಯೇ ಹಂಚಿಕೆ ಮಾಡಿರಲಿಲ್ಲ. ಎಷ್ಟು ದಿನದವರೆಗೆ ಪ್ರತಿಭಟನೆ ನಡೆಸಬೇಕು?. ಒಂದು ವೇಳೆ ಸಿಬಿಐ ತನಿಖೆ ಅರಂಭವಾಗುವುದು ತಡವಾದಲ್ಲಿ ಏನು ಮಾಡುವುದು? ಎಂಬ ಯಾವ ವಿಚಾರವೂ ನಾಯಕರು ಚರ್ಚೆ ನಡೆಸಲಿಲ್ಲ. ಅಷ್ಟೇ ಅಲ್ಲದೆ ನಿನ್ನೆ ಸಂಜೆಯವರೆಗೂ ಬೆಂಗಳೂರು ನಗರ ಬಿಜೆಪಿ ಘಟಕಕ್ಕೆ ಪ್ರತಿಭಟನೆಯ ವಿಚಾರವೇ ಗೊತ್ತಿರಲಿಲ್ಲ . ಅಹೋರಾತ್ರಿ ಪ್ರತಿಭಟನೆಯ ಪೂರ್ವ ಸಿದ್ದತಾ ಸಭೆ ಕೂಡ ಈವರೆಗೂ ನಡೆದಿಲ್ಲ. ಈ ಎಲ್ಲಾ ಬೆಳವಣಿಗೆ ನೋಡಿದರೆ ಬಿಜೆಪಿ ಗಣಪತಿ ಆತ್ಮಹತ್ಯೆ ಪ್ರಕರಣ ಮೆರೆತುಬಿಟ್ಟಿದ್ದಾರಾ ಎಂಬ ಅನುಮಾನ ಶುರುವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.