ಶಾ ಭೇಟಿ ಮಾಡಿದ್ದು, ಸಂಜೆ ವೇಳೆಗೆ ಶುಭ ಸುದ್ದಿ ಬರಲಿದೆ : ವಿಶ್ವನಾಥ್

By Web DeskFirst Published Jul 25, 2019, 12:38 PM IST
Highlights

ನಮ್ಮ ನಾಯಕರು ಈಗಾಗಲೇ ದಿಲ್ಲಿಗೆ ಹೋಗಿ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದ್ದು, ಸಂಜೆ ವೇಳೆ ಶುಭ ಸುದ್ದಿ ಬರಲಿದೆ ಎಂದು ಶಾಸಕ ವಿಶ್ವನಾಥ್ ಹೇಳಿದ್ದಾರೆ. 

ಬೆಂಗಳೂರು [ಜು.25] : ರಾಜ್ಯದಲ್ಲಿ ದೋಸ್ತಿ ಸರ್ಕಾರ ಪತನದ ಬಳಿಕ ಸರ್ಕಾರ ರಚನೆ ಮಾಡಲು ಮುಂದಾಗಿದ್ದ ಬಿಜೆಪಿ ನಾಯಕರಿಗೆ ಸದ್ಯ  ಹೈ ಕಮಾಂಡ್ ಬ್ರೇಕ್ ಹಾಕಿದೆ. 

"

ಈಗಾಗಲೇ ನಮ್ಮ ನಾಯಕರು ದಿಲ್ಲಿಗೆ ಹೋಗಿ ಅಮಿತ್ ಶಾ ಭೇಟಿ ಮಾಡಿದ್ದಾರೆ. ಮತ್ತೆ ಭೇಟಿ ಮಾಡುವ ಭರವಸೆಯನ್ನೂ ನೀಡಿದ್ದಾರೆ. ಮತ್ತೆ ಯಾವ ಸಮಸ್ಯೆಯೂ ಸರ್ಕಾರಕ್ಕೆ ಎದುರಾಗದಿರಲಿ ಎಂದು ಈ ರೀತಿ ಯೋಚನೆ ಮಾಡಿ ಮುನ್ನಡೆಯುತ್ತಿದ್ದೇವೆ  ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ. 

ಇಂದು ಸಂಜೆ ವೇಳೆ ಶುಭ ಸುದ್ದಿ ಬರುತ್ತದೆ. ಕೇಂದ್ರದ ನಾಯಕರು ಎಚ್ಚರಿಕೆಯಿಂದ ಮುನ್ನಡೆಯಲು ಸೂಚನೆ ನೀಡಿದ್ದಾರೆ. ಕೇಂದ್ರದಿಂದ ಸೂಚನೆ ಬಂದಲ್ಲಿ ಶುಭ ಸಮಯವಾದ ಆಷಾಡದಲ್ಲಿ ರಾಜ್ಯ ನಾಯಕರು ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ ಎಂದು ವಿಶ್ವನಾಥ್ ಹೇಳಿದರು. 

ಕರ್ನಾಟಕ ರಾಜಕೀಯದ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಅತೃಪ್ತರಾಗಿ ಮುಂಬೈಗೆ ತೆರಳಿರುವ 15 ಜನರ ಬಗ್ಗೆಯೂ ನಾವು ಯೋಚಿಸಬೇಕಿದೆ. ಅವರ ರಾಜೀನಾಮೆ ಇನ್ನೂ ಕೂಡ ಅಂಗೀಕಾರವಾಗಿಲ್ಲ. ಅವರ ಭವಿಷ್ಯದ ಬಗ್ಗೆಯೂ ಕೂಡ ನಾವು ಯೋಚಿಸಬೇಕಿದೆ. ನಾಲ್ಕು ವರ್ಷಗಳ ಕಾಲ ಸುಭದ್ರವಾಗಿ ಆಡಳಿತ ನಡೆಸುವ ಸರ್ಕಾತ ನೀಡಬೇಕಾದ ಹಿನ್ನೆಲೆಯಲ್ಲಿ ಕೆಲವೊಂದು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿದೆ ಎಂದು ಶಾಸಕ ವಿಶ್ವನಾಥ್ ಹೇಳಿದರು. 

click me!