
ನವದೆಹಲಿ[ಜು.27] ಪ್ರಧಾನಿ ನರೇಂದ್ರ ಮೋದಿ ಬಾಲ್ಯದ ಜೀವನದ ಆಧಾರಿತ, ಬಾಲ್ಯದಿಂದ ಸ್ಫೂರ್ತಿ ಪಡೆದ ಕತೆ ಆಧಾರಿತ ಸಿನಿಮಾವೊಂದನ್ನು ಬಿಜೆಪಿಯ ಹಿರಿಯ ನಾಯಕರು ಸಂಸತ್ ನ ಗ್ರಂಥಾಲಯದಲ್ಲಿ ವೀಕ್ಷಣೆ ಮಾಡಿದರು.
ಕೇಂದ್ರ ಸಚಿವ ಅನಂತ್ ಕುಮಾರ್, ಸುಷ್ಮಾ ಸ್ವರಾಜ್, ರಾಜ್‌ನಾಥ್ ಸಿಂಗ್, ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್, ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸೆರಿತಂತೆ ಪ್ರಮುಖರು 32 ನಿಮಿಷದ ‘ಚಲೋ ಜೀತೆ ಹೈನ್’ ಎಂಬ ಕಿರು ಚಿತ್ರವನ್ನು ವೀಕ್ಷಿಸಿದರು.
ಅಡ್ವಾಣಿ-ಮೋದಿ ನಡುವೆ ಇದೆಯಾ ಮುನಿಸು? ಇಬ್ಬರ ನಡುವೆ ಇದೆಯಾ ಅಸಮಾಧಾನದ ಪರದೆ?
ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಸಹ ಸಿನಿಮಾವನ್ನು ಮಂಗಳವಾರವೇ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದರು. ಒಬ್ಬ ದಲಿತ ಹುಡುಗ ತನ್ನ ವಿದ್ಯಾಭ್ಯಾಸಕ್ಕಾಗಿ, ಪುಸ್ತಕ ಕೊಳ್ಳಲು ಹೇಗೆ ಹೋರಾಟ ಮಾಡುತ್ತಾನೆ ಎಂಬುದೇ ಚಿತ್ರದ ಪ್ರಮುಖ ಕಥಾ ಹಂದರ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.