‘ಸ್ವಿಜರ್ ಲ್ಯಾಂಡ್ ನಲ್ಲಿ ಇರುವ ರಾಹುಲ್ ಖಾಂದಾನ್ ಆಸ್ತಿ ಎಷ್ಟು?’

By Web DeskFirst Published Mar 9, 2019, 4:28 PM IST
Highlights

ರಾಹುಲ್ ಗಾಂಧಿ ಸಂಪೂರ್ಣ ಕುಟುಂಬವೇ ಭ್ರಷ್ಟಾಚಾರದಲ್ಲಿ ತೊಡಗಿದ್ದು, ನೀರವ್ ಮೋದಿ ಮಲ್ಯರನ್ನು ಪೋಷಿಸಿದ್ದೇ  ಯುಪಿಎ ಸರ್ಕಾರ ಎಂದು ಸಂಸದೆ ಶೋಭಾ ಕರಂದ್ಲಾಜೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಹಾವೇರಿ :  ಪ್ರಧಾನಿ ನರೇಂದ್ರ ಮೋದಿ 30 ಸಾವಿರ ಕೋಟಿ ಹಣವನ್ನು ಅಂಬಾನಿ ಜೇಬಿಗೆ ಇಳಿಸಿದ್ದಾರೆ ಎನ್ನುವ ಆರೋಪ ಸಂಬಂಧ ಸಂಸದೆ ಶೋಭಾ ಕರಂದ್ಲಾಜೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ,  ರಾಹುಲ್ ಗಾಂಧಿಯವರ ಖಾಂದಾನ್ ಭ್ರಷ್ಟಾಚಾರದಿಂದಲೇ ಬಂದಿದೆ. ಇಂದಿರಾ ಗಾಂಧಿಯಿಂದ ಹಿಡಿದು ರಾಹುಲ್ ತನಕ ಭ್ರಷ್ಟಾಚಾರ ಪೋಷಣೆಯಾಗಿದೆ. 

ಈ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ನೀರವ್ ಮೋದಿ, ಮಲ್ಯ ಪೋಷಿಸಿದ್ದೇ ಯುಪಿಎ.  ರಾಹುಲ್ ಗಾಂಧಿ ಈ ಬಗ್ಗೆ ಅವರ ತಾಯಿ ಸೋನಿಯಾ ಗಾಂಧಿ ಬಳಿ ಕೇಳಲಿ.

ನಮ್ಮ ನರೇಂದ್ರ ಮೋದಿ 12 ವರ್ಷ ಕಪ್ಪು ಚುಕ್ಕೆಯಿಲ್ಲದೇ ಗುಜರಾತ್ ಮುಖ್ಯಮಂತ್ರಿ ಆಗಿದ್ದರು. ಅವರಿಗೆ ಖಾಂದನ್ ಬೆಳೆಸುವ ಅವಶ್ಯಕತೆ, ಅನಿವಾರ್ಯತೆ ಇಲ್ಲ, ಅವರಿಗೆ ಮಕ್ಕಳಿಲ್ಲ. ನಿಮ್ಮ ಕುಟುಂಬದ ಹಣ ಸ್ವಿಟ್ಜರ್ಲೆಂಡ್‌‌ ನಲ್ಲಿ ಎಷ್ಟಿದೆ? ಈ ಬಗ್ಗೆ ತನಿಖೆಯಾಗಲಿ ಎಂದು ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ. 

ಇನ್ನು ರಾಹುಲ್ ಗಾಂಧಿ ಒಂದು ಬೆರಳು ಬೇರೆಯವರಿಗೆ ತೋರಿಸಿದರೆ ಇನ್ನೊಂದು ಬೆರಳು ಅವರಿಗೆ ತೋರಿಸುತ್ತೆದೆ. ದೇಶ ರಾಹುಲ್ ಭಾಷಣ ಕೇಳಿ ನಗುತ್ತಿದೆ, ಸೋಲಿನ ಭೀತಿಯಿಂದ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. 

ಅನಿಲ್ ಅಂಬಾನಿಗೆ ಸಿಕ್ಕಿರೋ ಟೆಂಡರ್ ಎಷ್ಟು ಎನ್ನುವ ಕನಿಷ್ಟ ಜ್ಞಾನ ಇರಬೇಕು. ಅದರ ಮೌಲ್ಯ ಎಷ್ಟು ಎನ್ನುವುದನ್ನು ಮೊದಲು ಅಧ್ಯಯನ ಮಾಡಲಿ.  ಟೆಂಡರ್ ಮೌಲ್ಯ 1500 ಕೋಟಿಗಿಂತ ಜಾಸ್ತಿ ಇಲ್ಲ. ಹೀಗಾಗಿ ರಾಹುಲ್ ಮತ್ತೆ ಕಲಿತ ಶಾಲೆಗೆ ಹೋಗಿ ಲೆಕ್ಕದ ಪಾಠ ಕಲಿಯಲಿ ಎಂದು ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

click me!