ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಬರ ಪ್ರವಾಸದಲ್ಲಿದ್ದು ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಶೆಟ್ಟಳ್ಳಿ ಗ್ರಾಮಕ್ಕೆ ಭೇಟಿ ನೀಡಿ ನೋವು ಆಲಿಸಿದರು. ಈ ಸಂದರ್ಭ ರಾಜ್ಯ ಸರ್ಕಾರ ಮತ್ತು ಜೆಡಿಎಸ್ ನಾಯಕರ ವಿರುದ್ಧ ತಮ್ಮದೆ ಧಾಟಿಯಲ್ಲಿ ವಾಗ್ದಾಳಿ ಮಾಡಿದರು.
ಯಾದಗಿರಿ[ಡಿ.04] ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಬರ ಪ್ರವಾಸದಲ್ಲಿದ್ದು ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲೂಕಿನ ಶೆಟ್ಟಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದರು.
ಜಿಲ್ಲೆಗೆ ಈ ತರಹ ಭೀಕರ ಬರಗಾಲ ಎಂದೂ ಬಂದಿರಲಿಲ್ಲ. ಹತ್ತಿ, ತೊಗರಿ, ಜೋಳ ಈ ತರಹ ಹಾಳಾಗಿದ್ದರೂ ರಾಜ್ಯ ಸರ್ಕಾರ ರೈತರ ಬಳಿ ಬಂದು ಮಾತಾಡಿಸಿಲ್ಲ. ದೇವೆಗೌಡರು ಮಣ್ಣಿನ ಮಗಾ ಅಂತ ಹೇಳಿ ಅಧಿಕಾರಕ್ಕೆ ಬಂದಾಗ ಮೇಲೆ ರೈತರಿಗೆ ಮಣ್ಣೇ ತಿನ್ನಿಸುತ್ತಿದ್ದಾರೆ. ದೇವೇಗೌಡ ಕುಮಾರಸ್ವಾಮಿಯವರು ಸ್ವಯಂ ಘೋಷಿತ ಮಣ್ಣಿನ ಮಗ ಆಗಿ ಪರವಾಗಿಲ್ಲ. ಆದರೆ ಮಣ್ಣಿನ ಮಕ್ಕಳಿಗೆ ಮಣ್ಣು ತಿನ್ನಿಸಬೇಡಿ ಎಂದು ಈಶ್ವರಪ್ಪ ಕಟುಕಿದರು.
ಹುಚ್ಚರಂತೆ ಸಿದ್ದು ಮಾತಂತೆ, ಆದ್ರೆ ಬಿಜೆಪಿಗೆ ಬಂದ್ರೆ ವೆಲ್ಕಮ್ಮಂತೆ!
ಸರ್ಕಾರ ಬೆಳೆಪರಿಹಾರ ಕೂಡುವುದು ಬಿಡೋದು ಆ ಮೇಲೆ. ರೈತರಿಗೆ ಸಮಾಧಾನ ಮಾಡುವ ಕೆಲಸವೂ ರಾಜ್ಯ ಸರ್ಕಾರ ಮಾಡಿಲ್ಲ. ಈ ಜಮೀನಿನ ಬೆಳೆ ನೋಡಿ ಹತ್ತಿ ಅಂತ ಬೋರ್ಡ್ ಹಾಕಬೇಕಾಗಿದೆ ಎಂದ ಮಾಜಿ ಡಿಸಿಎಂ ಹಾಗೂ ಶಾಸಕ ಈಶ್ವರಪ್ಪ. ಹತ್ತಿ ಬೆಳೆನಾಶವಾಗಿ ಕಡ್ಡಿ ನೆಟ್ಟ ರೀತಿಯಲ್ಲಿ ಇದೆ ಹತ್ತಿ, ತೊಗರಿ ಬೆಳೆ ನಾಶವಾಗಿದೆ. ಆದರೂ ರಾಜ್ಯ ಸರ್ಕಾರ ಹಗುರವಾಗಿ ತೆಗೆದುಕೊಳ್ಳುತ್ತಿದೆ. ಇಂತಹ ಬರದ ವೇಳೆಯಲ್ಲಿ ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕಾಗಿದೆ.
ರೈತರ ಸಂಕಷ್ಟ ಆಲಿಸಿದಾಗ ರೈತರ ಆತ್ಮಹತ್ಯೆ ಕಡಿಮೆಯಾಗುತ್ತವೆ. ರಾಜ್ಯ ಸರ್ಕಾರದ ಯಾವ ಸಚಿವರು ಕೂಡ ರೈತರ ಹೊಲ-ಗದ್ದೆಗಳಿಗೆ ಹೋಗುತ್ತಿಲ್ಲ. ಮುಖ್ಯಮಂತ್ರಿ ಗಳು ,ಉಪಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಇದ್ದಾರೆ. ದೇವೇಗೌಡರು ಸಿದ್ದರಾಮಯ್ಯ ಉಪ ಚುನಾವಣೆಗೆ ಒಟ್ಟಾದರು. ಆದರೆ ಅವರು ಒಂದಾಗಿದ್ದು ಅಧಿಕಾರಕ್ಕಾಗಿ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ ಮತ್ತು ದೇವೇಗೌಡ ಒಂದಾಗಿ ಬಂದು ರೈತರ ಬಳಿಗೆ ಬರಬೇಕು .ಈಗಾಲಾದರೂ ರಾಜ್ಯ ಸರ್ಕಾರ ಎಚ್ಚತ್ತುಕೊಳ್ಳಲಿ ಎಂದ ಈಶ್ವರಪ್ಪ ಮನವಿ ಮಾಡಿದರು.