‘ಜಾತ್ಯಾತೀತತೆ ಪಾಠ ಮಾಡ್ತಿದ್ದ ತಂದೆಯನ್ನು ಕೋಮುವಾದ ಕೊಂದಿತು’!

By Web DeskFirst Published Dec 4, 2018, 4:52 PM IST
Highlights

‘ನಮ್ಮ ತಂದೆ ನಮಗೆ ಜಾತ್ಯಾತಯೀತತೆ ಹೇಳಿ ಕೊಟ್ಟಿದ್ದರು’! ಬುಲಂದ್‌ಶಹರ್ ದಾಳಿಯಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿಯ ಪುತ್ರನ ಅಳಲು! ಹಿಂದೂ-ಮುಸ್ಲಿಂ ಭಾಂಧವ್ಯಕ್ಕೆ ಶ್ರಮಿಸುತ್ತಿದ್ದ ಅಧಿಕಾರಿ ಸುಬೋಧ್ ಕುಮಾರ್! ಕೋಮುವಾದದಿಂದಾಗಿ ತಂದೆ ಸಾವು ಅಧಿಕಾರಿ ಪುತ್ರ ಅಭಿಶೇಕ್ ಕುಮಾರ್ ಹೇಳಿಕೆ! ಸಮಾಜದಲ್ಲಿ ಹಿಂಸೆ ನಡೆಯುವುದು ತಂದೆಗೆ ಎಂದಿಗೂ ಇಷ್ಟವಿರಲಿಲ್ಲ

ಬುಲಂದ್‌ಶಹರ್(ಡಿ.04): ತಮ್ಮ ತಂದೆ ತಮಗೆ ಜಾತ್ಯಾತೀತತೆಯ ಪಾಠ ಹೇಳಿ ಕೊಟ್ಟಿದ್ದರು ಬುಲಂದ್‌ಶಹರ್ ನಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿಯ ಸುಬೋಧ್ ಕುಮಾರ್ ಪುತ್ರ ಅಭಿಶೇಕ್ ಕುಮಾರ್ ಹೇಳಿದ್ದಾರೆ.

ತಮ್ಮ ಮಕ್ಕಳು ಎಲ್ಲಾ ಧರ್ಮಗಳನ್ನು ಗೌರವಿಸಬೇಕು ಎಂದು ತಮ್ಮ ತಂದೆ ಬಯಸುತ್ತಿದ್ದರು ಎಂದು ಅಭಿಶೇಕ್ ಕುಮಾರ್ ತಂದೆಯನ್ನು ನೆನೆದು ಗದ್ಗದಿತರಾಗಿದ್ದಾರೆ.

ನಾವು ದೇಶದ ಒಬ್ಬ ಉತ್ತಮ ನಾಗರಿಕರಾಗಬೇಕು, ಧರ್ಮದ ಹೆಸರಿನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಬಾರದು, ಅದು ಹಿಂದೂ, ಮುಸ್ಲಿಮ್, ಸಿಖ್ ಯಾರೇ ಅಗಲಿ ಇಲ್ಲಿ ಎಲ್ಲರೂ ಸಮಾನರು ಎಂದು ಸುಬೋದ್ ಯಾವಾಗಲೂ ಹೇಳುತ್ತಿದ್ದರು ಎಂದು ಅಭೀಶೇಕ್ ಹೇಳಿದ್ದಾರೆ.

ಧರ್ಮದ ಹೆಸರಿನಲ್ಲಿ ಹಿಂಸೆ ನಡೆಯುವುದನ್ನು ನಮ್ಮ ತಂದೆ ವಿರೋಧಿಸುತ್ತಿದ್ದರು. ಆದರೆ ಇಂದು ನನ್ನ ತಂದೆ ಹಿಂದು-ಮುಸ್ಲಿಂ ಸಂಘರ್ಷದಿಂದ ನಡೆದ ಹಿಂಸೆಯಲ್ಲಿ ಮೃತರಾಗಿದ್ದಾರೆ. ನಾಳೆ ಇನ್ಯಾರ ತಂದೆ ಮೃತರಾಗುತ್ತಾರೋ ಎಂದು ಅಭೀಶೇಕ್ ಆತಂಕ ವ್ಯಕ್ತಪಡಿಸಿದ್ದಾರೆ.

Abhishek, son of deceased policeman Subodh Kumar Singh: My father wanted me to be a good citizen who doesn't incite violence in society in the name of religion. Today my father lost his life in this Hindu-Muslim dispute, tomorrow whose father will lose his life? pic.twitter.com/zpFJoI4O2R

— ANI UP (@ANINewsUP)

ನಮ್ಮ ತಂದೆ ಒಬ್ಬ ಅತ್ಯುತ್ತಮ ನಾಗರಿಕರಾಗಿದ್ದರು. ಅವರಿಗೆ ಸಮಾಜದಲ್ಲಿ ಹಿಂಸೆ ನಡೆಯುವುದು ಎಂದಿಗೂ ಇಷ್ಟವಿರಲಿಲ್ಲ. ಆದರೆ ಆ ಹಿಂಸೆಯಿಂದಲೇ ಅವರು ಮೃತರಾಗಿದ್ದು ದುರದೃಷ್ಟಕರ. ಇಂಥ ಹಿಂಸೆಗಳಿಗೆ ಕೊನೆ ಎಂದು? ಇಂದು ನನ್ನ ತಂದೆ ಮೃತರಾದರು, ನಾಳೆ ಯಾರ ತಂದೆಯೋ? ಎಂದು ಅಭಿಷೇಕ್ ಭಾವುಕರಾಗಿ ಹೇಳಿದ್ದಾರೆ.

ಅಕ್ರಮ ಕಸಾಯಿ ಖಾನೆಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯೇ ಹಿಂಸಾಚಾರಕ್ಕೆ ತಿರುಗಿತ್ತು. ಈ ಸಂದರ್ಭದಲ್ಲಿ ಹಿಂದು ಮತ್ತು ಮುಸ್ಲಿಂ ಸಮುದಾಯದ ನಡುವೆ ಆರಂಭವಾದ ಕೋಮು ಸಂಘರ್ಷವನ್ನು ತಡೆಯಲು ಮುಂದಾದ ಸುಬೋಧ್ ಕುಮಾರ್ ಸಿಂಗ್ ಅವರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದರು.

Mortal remains of Police Inspector Subodh Singh(who died after being attacked by people protesting over alleged cow slaughter) brought to his residence in Etah. pic.twitter.com/0gLqt6xJsp

— ANI UP (@ANINewsUP)

ಇನ್ನು ಘಟನೆಗೆ ಸಂಬಂಧಿಸಿದಂತೆ ಹಿಂದೂ ಬಲಪಂಥೀಯ ಸಂಘಟನೆಗೆ ಸೇರಿದ ನಾಲ್ವರನ್ನು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

click me!