
ಶಿವಮೊಗ್ಗ[ಅ.24] ‘ದೇಶದ ಸೈನಿಕರು ಅನಾಥರು, ಅವರ ಪತ್ನಿಯರು ವಿಧವೆಯರು. ಹಿಂದಿನ ಸರ್ಕಾರದ ಪರ್ಮಿಷನ್ ಇಲ್ಲದೆ ಪಾಕಿಸ್ತಾನದವರ ಮೇಲೆ ದಾಳಿ ಮಾಡಲು ಆಗ್ತಾ ಇರಲಿಲ್ಲ, ಸೈನಿಕರನ್ನು ಕೊಲೆ ಮಾಡ್ತಾ ಇದ್ದರು ಆದರೆ ಈಗ ಒಬ್ಬ ಸೈನಿಕನನ್ನು ಕೊಲೆ ಮಾಡಿದರೆ ತಕ್ಷಣವೇ ನೂರು ಪಾಕಿಸ್ತಾನದ ಸೈನಿಕರನ್ನು ಕೊಂದು ಬಿಡಿ ಮೋದಿಯವರು ಪರ್ಮಿಷನ್ ಕೊಟ್ಟಿದ್ದಾರೆ’ ಹೀಗೆಂದು ಹೇಳಿಕೆ ಕೊಟ್ಟಿದ್ದು ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ.
ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಪರ ಮತ ಯಾಚನೆ ಮಾಡಿದ ಈಶ್ವರಪ್ಪ ಮೊನ್ನೆ ನಡೆದ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ನನಗೆ ಒಂದು ಲಕ್ಷದ 4 ಸಾವಿರ ಮತಗಳನ್ನು ಅಕ್ಕ ತಂಗಿಯರು ಕೊಟ್ಟಿದ್ದರು. ಇದು ಸ್ಯಾಂಪಲ್ ಚುನಾವಣೆ. ಮತ್ತೆ ಮೋದಿಯವರು ಪ್ರಧಾನಿ ಆಗಲು ರಾಘವೇಂದ್ರ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಉಪಚುನಾವಣೆಯ ಪಿನ್ ಟು ಪಿನ್ ವಿವರಗಳು
ಚುನಾವಣೆಯಲ್ಲಿ ಡಿಪಾಜಿಟ್ ಬರದ ದಿನಗಳಲ್ಲಿ ಪಕ್ಷ ಕಟ್ಟಿದ್ದೇವೆ. ಹೆಣ್ಣು ಮಕ್ಕಳ ಮಾನ ಮಾರ್ಯದೆ ಉಳಿಸಲು ನಮೋ ಶೌಚಾಲಯ ಕಟ್ಟಿಸಿದ್ದಾರೆ. 6 ವರ್ಷದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆದಿತ್ತು ಅಂದು ಸಿಎಂ ಆಗಿದ್ದ ಸಿದ್ದರಾಮಯ್ಯ ಉಢಾಪೆ ಉತ್ತರ ನೀಡಿದ್ದರು. ಆದರೆ ನಮೋ ಸರ್ಕಾರ ಅತ್ಯಾಚಾರಕ್ಕೆ ಗಲ್ಲು ಶಿಕ್ಷೆಯನ್ನು ಜಾರಿಗೆ ತಂದಿತು. ಮುಸ್ಲಿಂ ಧರ್ಮದ ಮಹಿಳೆಯರ ಶೋಷಣೆಯ ಹಮ್ ಪಾಂಚ್ , ಹಮಾರ ಪಚ್ಚೀಸ್ ಎಂಬುದು ಚಾಲ್ತಿಯಲ್ಲಿತ್ತು . ಮೋದಿ ತಲಾಕ್ ಸಂಸ್ಕೃತಿ ಕೊನೆಗೊಳಿಸಿದರು. ತಲಾಖ್ ಮಾಡಿದ ನಂತರ ಮತ್ತೆ ಒಂದಾಗ ಬೇಕು ಅಂದರೆ ನಿಖಾ ಹಲಾಲ್ ರೂಪದಲ್ಲಿ ಇನ್ನೊಬ್ಬನ ಜೊತೆಗೆ ಮದುವೆಯಾಗಿ ಮತ್ತೆ ಒಂದಾಗಬೇಕು ಇಂತಹ ಅಸಹ್ಯ ವ್ಯವಸ್ಥೆ ತೆಗೆದು ಹಾಕಿದವರು ಮೋದಿ ಎಂದರು.
ಉಪ ಚುನಾವಣೆ ಯಲ್ಲಿ ಬಿಜೆಪಿ ಗೆಲ್ಲಿಸಿ. ರಾಘವೇಂದ್ರ ಗೆ ಓಟ್ ಕೊಟ್ಟರೆ ನರೇಂದ್ರ ಮೋದಿಯವರಿಗೆ ಓಟ್ ಕೊಟ್ಟಂತೆ. 31 ನೇ ತಾರೀಖು ಎನ್ ಇ ಎಸ್ ಮೈದಾನದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಮಾಡಲಿದೆ. ಕಾಂಗ್ರೆಸ್ ನಲ್ಲಿ ಚುನಾವಣೆಗೆ ನಿಲ್ಲದವರೆ ಇರದ ಸ್ಥಿತಿ ನಿರ್ಮಾಣವಾಗಿದೆ. ಯಡಿಯೂರಪ್ಪ ನವರನ್ನು 3 ಲಕ್ಷದ 66 ಸಾವಿರ ಮತಗಳಿಂದ ಗೆಲ್ಲಿಸಿದಂತೆ ರಾಘವೇಂದ್ರ ನನ್ನ 4 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.