ಹಿಂದೂ ಧಾರ್ಮಿಕ ಆಚರಣೆಯಲ್ಲಿ ಭಾಗಿ : ಇಶ್ರತ್ ಜಹಾನ್ ಮನೆಯಿಂದ ಔಟ್

By Web DeskFirst Published Jul 18, 2019, 2:29 PM IST
Highlights

ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹನುಮಾನ್ ಚಾಲಿಸಾ ಪಠಿಸಿದ್ದಕ್ಕೆ ಇಶ್ರತ್ ಜಹಾನ್ ಅವರನ್ನು ಮನೆ ಮಾಲಿಕರು ಆಕೆಯನ್ನು ಹೊರಹಾಕಿದ್ದಾರೆ. 

ಕೋಲ್ಕತಾ [ಜು.18] : ಹಿಂದೂ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಹಿನ್ನೆಲೆ ಬಿಜೆಪಿ ನಾಯಕಿ ಇಶ್ರತ್ ಜಹಾನ್  ಮತ್ತು ಆಕೆಯ ಮಗುವನ್ನು ಮನೆಯಿಂದ ಹೊರ ಹಾಕಲಾಗಿದೆ. 

ತ್ರಿವಳಿ ತಲಾಖ್ ನಿಷೇಧಕ್ಕೆ ಕಾರಣರಾಗಿದ್ದ ಇಶ್ರತ್ ಜಹಾನ್ ಇದೀಗ, ಹನುಮಾನ್ ಚಾಲೀಸಾ ಪಠಣದ ಮೂಲಕ ಬೆದರಿಕೆಗೆ ಒಳಗಾಗಿ ಆಶ್ರಯ ಕಳೆದುಕೊಂಡು, ತಮ್ಮ ಸಮುದಾಯದಿಂದ ಬೆದರಿಕೆಗೆ ಒಳಗಾಗಿದ್ದಾರೆ. 

ಹಿಂದೂ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳುವ ಮೂಲಕ ಆಕೆ ಧರ್ಮಕ್ಕೆ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಆಕೆಗೆ ಜೀವ ಬೆದರಿಕೆಯನ್ನೂ ಒಡ್ಡಲಾಗಿದೆ.  

ತಮ್ಮ ಪುಟ್ಟ ಮಗನೊಂದಿಗೆ ಒಂಟಿಯಾಗಿ ವಾಸ ಮಾಡುತ್ತಿದ್ದು, ತಮಗೆ ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ. ಯಾವುದೇ ಸಂದರ್ಭದಲ್ಲಿ ತಮ್ಮ ಜೀವಕ್ಕೆ ಅಪಾಯ ಎದುರಾಗಬಹುದೆಂದು ರಕ್ಷಣೆ ಕೋರಿದ್ದಾರೆ. 

ಹಿಂದೂ ಧರ್ಮಿಯರು ಆಚರಣೆ ಮಾಡುತ್ತಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇಶ್ರತ್ ಜಹಾನ್  ಹನುಮಾನ್ ಚಾಲೀಸಾ ಪಠಿಸುವುದರೊಂದಿಗೆ ಇದರ ಪ್ರತಿಗಳನ್ನು ಹಂಚಿದ್ದರು.  ಇದರಿಂದ ರೊಚ್ಚಿಗೆದ್ದ ಸಮುದಾಯ  ಅವರ ವಿರುದ್ಧ ಕ್ರಮ ಕೈಗೊಂಡಿದೆ.

click me!