
ಶಿವಮೊಗ್ಗ(ಜೂ.03): ಅವರಿಬ್ಬರು ಸ್ನೇಹಿತರು ನಿರ್ಜನ ಪ್ರದೇಶದಲ್ಲಿ ಕುಳಿತಿದ್ದರು. ಅಲ್ಲಿಗೆ ಬಂದ ಬಿಜೆಪಿ ಮುಖಂಡ ಬುದ್ದಿವಾದದ ನೆಪದಲ್ಲಿ ಯುವಕ - ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆ ಜೊತೆಗೆ ವಿಡಿಯೋ ಕೂಡ ಚಿತ್ರೀಕರಿಸಿದ್ದಾನೆ. ಇದೀಗ ಆ ವಿಡಿಯೋ ವೈರಲ್ ಆಗಿದ್ದು, ಯುವತಿ ಬಿಜೆಪಿ ಮುಖಂಡನ ವಿರುದ್ಧ ದೂರು ನೀಡಿದ್ದಾಳೆ.
ನಟರಾಜ್ ಎಂಬಾತ ಸಾಗರ ತಾಲೂಕಿನ ಬರೂರ್ ತಾಲೂಕು ಪಂಚಾಯ್ತಿ ಸದಸ್ಯೆಯ ಪತಿ. ಕಳೆದ 5-6 ತಿಂಗಳ ಹಿಂದೆ ಸಾಗರದಿಂದ ತ್ಯಾಗರ್ತಿ ಗ್ರಾಮದ ತನ್ನ ಸಹಚರರ ಜೊತೆ ಕಾರಿನಲ್ಲಿ ಹೋಗುತ್ತಿದ್ದ. ಈ ವೇಳೆ ರೈಲ್ವೆ ಹಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಯುವಕ ಯುವತಿಯರಿಬ್ಬರು ಕುಳಿತಿದ್ದರು. ಇದನ್ನು ಕಂಡ ನಟರಾಜ್ ಹಾಗೂ ಆತನ ಸಹಚರರು ಯುವಕ- ಯುವತಿಗೆ ಬುದ್ಧಿವಾದ ಹೇಳುವ ನೆಪದಲ್ಲಿ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾರೆ. ಕಾರಿನಲ್ಲಿ ಕರೆದೊಯ್ದು ಕಿರುಕುಳ ನೀಡಿ ದೃಶ್ಯ ಚಿತ್ರೀಕರಿಸಿದ್ದಾರೆ..
ಇದೀಗ ಆ ದೃಶ್ಯ ವ್ಯಾಟ್ಸಪ್'ನಲ್ಲಿ ಹರಿದಾಡುತ್ತಿದ್ದು, ಯುವತಿಯ ಬಾಳು ಹಾಳಾಗಿದೆ. ಇದರಿಂದ ನೊಂದ ಯುವತಿ ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಅಸಭ್ಯವಾಗಿ ವರ್ತಿಸಿ ವಿಡಿಯೋ ಮಾಡಿದ್ದಾರೆಂದು ಸಾಗರ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಸಂಬಂಧ ಪೊಲೀಸರು ನಟರಾಜ್ ಹಾಗೂ ಇತರೆ ಮೂವರ ವಿರುದ್ಥ ಪ್ರಕರಣ ದಾಖಲಿಸಿದ್ದಾಳೆ.
ಆದರೆ ಈ ಪ್ರೇಮ ಪ್ರಸಂಗ ಪತ್ತೆ ಹಚ್ಚಿದ ಕಾಂಗ್ರೆಸ್, ಬಿಜೆಪಿ ಮುಖಂಡನ ವಿರುದ್ಧ ಪಿತೂರಿ ನಡೆಸಿ ದೂರು ದಾಖಲಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪೊಲೀಸರ ವಿಚಾರಣೆ ಬಳಿಕ ಸತ್ಯ ಹೊರ ಬರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.