ಬೆಡ್ ರೂಮಲ್ಲೇ ಶತ್ರು? ಆರ್ಮಿಗೇ ಚಮಕ್..! ಚಾಲಾಕಿ ವಿಲನ್!

Published : Jun 02, 2017, 11:03 PM ISTUpdated : Apr 11, 2018, 12:38 PM IST
ಬೆಡ್ ರೂಮಲ್ಲೇ ಶತ್ರು? ಆರ್ಮಿಗೇ ಚಮಕ್..! ಚಾಲಾಕಿ ವಿಲನ್!

ಸಾರಾಂಶ

ಭಾರತ ಶತ್ರುಗಳ ಚಲನ ವಲನಗಳ ಮೇಲೆ ಸದಾ ಹದ್ದಿನ ಕಣ್ಣಿಟ್ಟಿರುತ್ತೆ. ಗಡಿಯಲ್ಲಿ ನುಗ್ಗಿ ಬರೋರು ರಿಯಲ್ ವಿಲನ್ಸ್​ ಅಲ್ಲ. ಅವರನ್ನು ಗಡಿಯಲ್ಲಿ ನುಗ್ಗಿಸುವಂತೆ ಮಾಡೋರು ರಿಯಲ್ ವಿಲನ್ಸ್​ ಅನ್ನೋದು ಇಂಡಿಯನ್ ಆರ್ಮಿಗೆ ಚೆನ್ನಾಗಿ ಗೊತ್ತಿದೆ. ಸೆರೆ ಸಿಕ್ಕ ಉಗ್ರರ ಜಾಡು ಹಿಡಿದು ಹೊರಟಾಗ, ಇಂಡಿಯನ್ ಆರ್ಮಿಗೆ ಸಿಕ್ಕ ಮಾಹಿತಿ ನಿಜಕ್ಕೂ ಅಚ್ಚರಿಯಾಗಿತ್ತು. ಯಾಕಂದರೆ ಉಗ್ರರು ಅವಿತಿರೋದು ಬೇರೆಲ್ಲೂ ಅಲ್ಲ ಜನ ಸಾಮಾನ್ಯರ ಮನೆಗಳಲ್ಲಿ' ಅದರಲ್ಲೂ ನೀವು ಮಲಗೋ ಬೆಡ್​​ರೂಂಗಳಲ್ಲಿ.

ಇಂಡಿಯನ್ ಆರ್ಮಿಯ ಪವರ್​ ಏನು ಅನ್ನೋದು ಇಡೀ ಜಗತ್ತಿಗೆ ಗೊತ್ತಿದೆ. ಅದರಲ್ಲೂ ಸದಾ ನರಿ ಬುದ್ದಿಯಿಂದ ಭಾರತದ ಮೇಲೆ ದಾಳಿ ಮಾಡ್ತಿರೋ ಪಾಕಿಸ್ತಾನ, ಭಾರತದ ಸೇನಾಬಲವನ್ನು ಕಂಡು ಬೆಚ್ಚಿ ಬಿದ್ದಿದೆ. ಇದೇ ಕಾರಣಕ್ಕೆ, ನೇರವಾಗಿ ಯುದ್ಧ ಮಾಡೋ ತಾಕತ್ತಿಲ್ದೇ, ಉಗ್ರರನ್ನ ಛೂ ಬಿಟ್ಟು ಆಗಾಗ ದಾಳಿ ನಡೆಸುತ್ತಿದೆ. ಆದರೆ ಗಡಿ ದಾಟಿ ಬರೋ ಉಗ್ರರನ್ನ ಬಗ್ಗು ಬಡಿಯುತ್ತಿದೆ ಇಂಡಿಯನ್​ ಆರ್ಮಿ.

ಭಾರತೀಯ ಸೇನಾಪಡೆ ಗಡಿಯಲ್ಲಿರೋ ಶತ್ರುಗಳನ್ನ ನಿರ್ನಾಮ ಮಾಡುತ್ತಿದೆ. ಉಗ್ರರ ಎದೆಯನ್ನ ಸೀಳುವಲ್ಲಿ ಹಗಲಿರುಳು ಶ್ರಮಿಸುತ್ತಿದೆ. ಶಸ್ತ್ರಾಸ್ತ್ರಗಳನ್ನ ಹೊತ್ತು ಭಾರತದ ಮೇಲೆ ದಾಳಿ ಮಾಡ್ಬೇಕು ಅಂತ ಬರೋ ಉಗ್ರರನ್ನ, ಗಡಿಯಲ್ಲೇ ಹೊಡೆದುರುಳಿಸುತ್ತಿದೆ. ಗಡಿಯಲ್ಲಿ ಘರ್ಜನೆ ಮಾಡುತ್ತಿರುವ ಇಂಡಿಯನ್ ಆರ್ಮಿ, ಇದೀಗ ಹೊಸದೊಂದು ಕಾರ್ಯಾಚರಣೆಗೆ ಇಳಿದಿದೆ. ಆ ಕಾರ್ಯಾಚರಣೆ ಗಡಿಯಲ್ಲಿನ ಶತ್ರುಗಳನ್ನು ಸದೆ ಬಡೆಯೋದಕ್ಕಿಂತಲೂ ಕ್ಲಿಷ್ಟಕರವಾದದ್ದು. ಇಲ್ಲಿ ಮದ್ದು ಗುಂಡಗಳ ಸದ್ದಿರೋದಿಲ್ಲ.. ಬುದ್ದಿವಂತಿಕೆಯೇ ಮೊನಚಾಗಿರುತ್ತೆ. ಯಾಕಂದ್ರೆ ಇಂಡಿಯನ್ ಆರ್ಮಿ ಈಗ ಸಮರ ಸಾರಿರೋದು ಮನೆ ಮನೆಗಳಲ್ಲಿ ಅಡಗಿರೋ ಉಗ್ರರ ವಿರುದ್ಧ. ಅದರಲ್ಲೂ ಜನ ಸಾಮಾನ್ಯರ ನಡುವೇನೇ ಇರೋ ಖತರ್ನಾಕ್​​ ವಿಲನ್ಸ್​​ಗಳ ವಿರುದ್ಧ.

ಹೌದು, ಇಷ್ಟು ದಿನ ಉಗ್ರರು ಗಡಿಯಲ್ಲಿರ್ತಾರೆ. ಅವರನ್ನ ಸೈನಿಕರು ಹೊಡೆದುರುಳಿಸ್ತಾರೆ ಅಂತ ನೀವೆಲ್ಲಾ ಅಂದುಕೊಂಡಿದ್ರಿ. ಆದ್ರೆ ನಿಮಗಿದು ನಿಜಕ್ಕೂ ಶಾಕಿಂಗ್​ ವಿಚಾರ. ಉಗ್ರರು ಜನರ ನಡುವೇನೇ ಸೇರಿಕೊಂಡಿದ್ದಾರೆ. ನಿಮ್ಮ ಜೊತೆಗೇ ಬೆರೆತಿದ್ದಾರೆ. ಇಷ್ಟೇ ಅಲ್ಲ. ನಿಮ್ಮ ಮನೆಯ ಬೆಡ್​ರೂಂಗೇ ಬಂದು ಕುಳಿತಿದ್ದಾರೆ.

ನಿಮ್ಮ ಮನೆಯಲ್ಲಿರೋ ಬೆಡ್​​ರೂಮಿನಲ್ಲಿ ವಿಲನ್​​ಗಳು ಸೇರಿಕೊಂಡಿದ್ದಾರೆ. ಅವರು ನಿಮಗೇ ಗೊತ್ತಿಲ್ಲದಂತೆ ನಿಮ್ಮ ಮನೆಯಲ್ಲಿ ಓಡಾಡ್ತಾರೆ. ಅವರಿಗೆ ಏನ್​ ಬೇಕೋ ಎಲ್ಲವನ್ನೂ ನಿಮ್ಮ ಮನೆಯಲ್ಲೇ ಮಾಡ್ತಾರೆ. ಆದರೆ ಯಾವುದೇ ಕಾರಣಕ್ಕೂ, ಅವರು ನಿಮ್ಮ ಮನೆಯಲ್ಲಿ ಇದ್ದಾರೆ ಅನ್ನೋದೇ ನಿಮಗೆ ಗೊತ್ತಾಗಲ್ಲ. ಯಾಕಂದರೆ, ನಿಮ್ಮನ್ನೇ ಯಾಮಾರಿಸೋ ಬೆಡ್​ರೂಂ ವಿಲನ್​ಗಳು ಅವರು. ನಿಮಗೇ ಗೊತ್ತಿಲ್ಲದಂತೆ ನಿಮ್ಮ ಬೆಡ್​ರೂಂ ಸೇರಿಕೊಂಡಿರೋ ಆ ಬೆಡ್​ರೂಂ ವಿಲನ್​ಗಳ ಹಿಂದೆ ಬಿದ್ದಿದೆ ಇಂಡಿಯನ್ ಆರ್ಮಿ.

ಭಾರತ ಶತ್ರುಗಳ ಚಲನ ವಲನಗಳ ಮೇಲೆ ಸದಾ ಹದ್ದಿನ ಕಣ್ಣಿಟ್ಟಿರುತ್ತೆ. ಗಡಿಯಲ್ಲಿ ನುಗ್ಗಿ ಬರೋರು ರಿಯಲ್ ವಿಲನ್ಸ್​ ಅಲ್ಲ. ಅವರನ್ನು ಗಡಿಯಲ್ಲಿ ನುಗ್ಗಿಸುವಂತೆ ಮಾಡೋರು ರಿಯಲ್ ವಿಲನ್ಸ್​ ಅನ್ನೋದು ಇಂಡಿಯನ್ ಆರ್ಮಿಗೆ ಚೆನ್ನಾಗಿ ಗೊತ್ತಿದೆ. ಸೆರೆ ಸಿಕ್ಕ ಉಗ್ರರ ಜಾಡು ಹಿಡಿದು ಹೊರಟಾಗ, ಇಂಡಿಯನ್ ಆರ್ಮಿಗೆ ಸಿಕ್ಕ ಮಾಹಿತಿ ನಿಜಕ್ಕೂ ಅಚ್ಚರಿಯಾಗಿತ್ತು. ಯಾಕಂದರೆ ಉಗ್ರರು ಅವಿತಿರೋದು ಬೇರೆಲ್ಲೂ ಅಲ್ಲ ಜನ ಸಾಮಾನ್ಯರ ಮನೆಗಳಲ್ಲಿ' ಅದರಲ್ಲೂ ನೀವು ಮಲಗೋ ಬೆಡ್​​ರೂಂಗಳಲ್ಲಿ.

ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದರೂ, ಇಲ್ಲಿ ಸದಾ ಸಮರ ನಡೀತಾನೇ ಇರುತ್ತೆ. ಉಗ್ರರನ್ನು ಛೂ ಬಿಡೋ ಪಾಕಿಸ್ತಾನ, ಜನ ಸಾಮಾನ್ಯರಿಗೂ ಶಸ್ತ್ರಾಸ್ತ್ರಗಳನ್ನ ಕೊಟ್ಟು ಇಂಡಿಯನ್ ಆರ್ಮಿ ಮೇಲೆ ಛೂ ಬಿಡುತ್ತೆ. ಅಸ್ತ್ರಗಳು ಇಲ್ದಿದ್ರೂ ಕಲ್ಲುಗಳಿಂದಲೇ ನಮ್ಮ ಸೈನಿಕರ ಮೇಲೆ ದಾಳಿ ನಡೆಸ್ತಾರೆ ಕಾಶ್ಮೀರದ ಕಿಡಿಗೇಡಿಗಳು.

ಜಮ್ಮು ಕಾಶ್ಮೀರದಲ್ಲಿನ ಪರಿಸ್ಥಿತಿ ತುಂಬಾನೇ ಮಿತಿ ಮೀರಿದೆ. ಸೇನೆ ಕಠಿಣ ನಿಲುವುಗಳನ್ನ ತಾಳ್ತಾ ಇದ್ರೂ, ಇಲ್ಲಿನ ಜನರ ಮನಸ್ಥಿತಿ ಮಾತ್ರ ಬದಲಾಗಿಲ್ಲ. ಪಾಕಿಸ್ತಾನದ ಜೊತೆ ಸೇರ್ಕೊಂಡು ಸೈನಿಕರ ಮೇಲೆಯೇ ಎಗರಿ ಬೀಳ್ತಿದ್ದಾರೆ. ಸೈನಿಕರು ಮತ್ತು ಪ್ರತ್ಯೇಕತಾವಾದಿಗಳ ನಡುವಿನ ಸಮರ ಇಲ್ಲಿ ನಿರಂತರವಾಗಿ ನಡೀತಾನೇ ಇರುತ್ತೆ. ಜಮ್ಮು ಕಾಶ್ಮೀರದಲ್ಲಿನ ಕಲ್ಲು ತೂರಾಟವನ್ನು ಹತ್ತಿಕ್ಕೋದಕ್ಕೆ ಇಂಡಿಯನ್ ಆರ್ಮಿ ಟ್ರೈ ಮಾಡ್ತಾನೇ ಇದೆ. ಉಗ್ರ ನಾಯಕರ ಹೆಣ ಮಲಗಿಸ್ತಿದೆ. ಇಷ್ಟಿದ್ರೂ ಪಾಕಿಸ್ತಾನದ ಎಂಜಲು ತಿನ್ನೋ ಕೆಲವು ಕಿರಾತಕರು ಸ್ಥಳೀಯರನ್ನು ಎತ್ತಿ ಕಟ್ಟಿ ಸೈನಿಕರ ಮೇಲೆ ಛೂ ಬಿಡ್ತಿದ್ದಾರೆ.

ಜಮ್ಮು ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನ ಸೂಕ್ಷ್ಮವಾಗಿ ಅವಲೋಕಿಸಿದ ಇಂಡಿಯನ್ ಆರ್ಮಿ ಮತ್ತು ಕೇಂದ್ರ ಗುಪ್ತಚರ ಇಲಾಖೆ, ಗಲಭೆಯ ಜಾಡು ಹಿಡಿದು ಹೊರಟಿತ್ತು. ಹೀಗೆ ತನಿಖೆ ಆರಂಭಿಸಿದ ತಂಡಕ್ಕೆ ಸಿಕ್ಕಿದ್ದು ಬೆಡ್​ರೂಂ ವಿಲನ್ಸ್​.ಹಣದ ಆಸೆ ತೋರಿಸಿ ಸೈನಿಕರ ವಿರುದ್ಧ ಸ್ಥಳೀಯರನ್ನ ಎತ್ತಿ ಕಟ್ತಾರೆ

ಇದು ನಿಜಕ್ಕೂ ಬೆಚ್ಚಿ ಬೀಳಿಸುವಂಥ ವಿಚಾರ. ಕಾಶ್ಮೀರದಲ್ಲಿನ ಗಲಾಟೆ ಮತ್ತು ಉಗ್ರವಾದವನ್ನ ಬೆಬನ್ನು ಹತ್ತಿದಾಗ, ಬೆಡ್​ರೂಂ ವಿಲನ್​​ಗಳ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೆಲವು ಉಗ್ರ ನಾಯಕರು ಬೆಡ್​ರೂಂನಲ್ಲಿ ಕೂತ್ಕೊಂಡೇ ಭಾರತವನ್ನು ಅತಂತ್ರಗೊಳಿಸೋ ಪ್ಲಾನ್ ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಯುವಕರಿಗೆ ಆಮಿಷವೊಡ್ತಿದ್ದಾರೆ. ಹಣದ ಆಸೆ ತೋರಿಸಿ ಸೈನಿಕರ ಮೇಲೆ ಕಲ್ಲು ತೂರುವಂತೆ ಮಾಡ್ತಿದ್ದಾರೆ. ನಮ್ಮ ಸೈನಿಕರಿಗೇ ಚಮಕ್​ ಕೊಡ್ತಿದ್ದಾರೆ. ಇದನ್ನರಿತ ಇಂಡಿಯನ್ ಆರ್ಮಿ, ಬೆಡ್​ರೂಂ ವಿಲನ್​ಗಳ ವಿರುದ್ಧ ಕಾರ್ಯಾಚರಣೆಯನ್ನ ಆರಂಭಿಸಿದೆ. ಬೆಡ್​ರೂಂನಲ್ಲಿ ಕೂತ್ಕೊಂಡು ಉಗ್ರರನ್ನು ಹುಟ್ಟು ಹಾಕ್ತಿದ್ದವರು.. ಮಾಸ್ಟರ್​ ಪ್ಲಾನ್​ ರೂಪಿಸ್ತಿದ್ದವರು.. ಎಲ್ಲರನ್ನೂ ಬಗ್ಗು ಬಡಿಯಲು ಸಮರ ಸಾರಿದೆ ಇಂಡಿನ್ ಆರ್ಮಿ.

ಬೆಡ್​ರೂಮ್​​ನಲ್ಲಿ ಕೂತ್ಕೊಂಡು ಜಿಹಾದ್​ಗೆ ಕರೆಕೊಟ್ಟ ಉಗ್ರರು ಅವ್ರು. ಅವರ ಕಾರ್ಯಾಚರಣೆ ನಡೆಯೋದು ಬೆಡ್​​ರೂಮ್​ನಲ್ಲೇ. ಮತ್ತು ಅವರ ಟಾರ್ಗೆಟ್​ ಕೂಡ ಬೆಡ್​ರೂಂನಲ್ಲಿರೋ ವ್ಯಕ್ತಿಗಳೇ. ನಿಮಗೆ ಗೊತ್ತಿಲ್ಲದಂತೆ ನಿಮ್ಮ ಮನೆಯ ಬೆಡ್​ರೂಮನ್ನೂ ಅವ್ರು ಟಾರ್ಗೆಟ್​ ಮಾಡಿರಬಹುದು. ಬೆಡ್​ರೂಂ ಟೆರರಿಸ್ಟ್​ಗಳ ಕೆಲಸ ನಾಲ್ಕು ಗೋಡೆಗಳ ಮಧ್ಯೆನೇ. ಬೆಡ್​ರೂಂನಲ್ಲಿ ಕೂತ್ಕೊಂಡು, ಒಂದು ಲ್ಯಾಪ್​ಟಾಪೋ ಡೆಸ್ಕ್​ಟಾಪೋ ಇಟ್ಕೊಂಡು ಇಂಟರ್​ನೆಟ್​ ಮೂಲಕ ಜನರನ್ನ ಸೆಳೆಯೋದು. ಸಾಮಾಜಿಕ ಜಾಲ ತಾಣಗಳ ಮೂಲಕ ಉಗ್ರರನ್ನು ಒಗ್ಗೂಡಿಸೋದು. ಉಗ್ರವಾದವನ್ನ ಬಿತ್ತೋದು.

ಐಸಿಸ್​ ಸಂಘಟನೆಯಿಂದ ಹಿಡಿದು ಎಲ್ಲಾ ಸಂಘಟನೆಗಳೂ ಈಗ ಬೆಡ್​ರೂಂ ವಿಲನ್​​ಗಳನ್ನ ನೇಮಕ ಮಾಡಿಕೊಂಡಿವೆ. ಬೆಡ್​ರೂಂ ಜಿಹಾದಿಗಳ ಮೂಲಕ, ಸಾಮಾಜಿಕ ಜಾಲತಾಣಗಳಲ್ಲಿ ಉಗ್ರವಾದವನ್ನು ಬಿತ್ತುತ್ತಿವೆ. ಧರ್ಮಾಂಧತೆಯನ್ನು ಜನರ ಮಿದುಳಿಗೆ ತುಂಬಿ ಉಗ್ರರನ್ನಾಗಿ ಬದಲಾಯಿಸುತ್ತಿವೆ. ಇಂಥಾ ಕೆಲಸ ಕಾಶ್ಮೀರದಲ್ಲೂ ನಡೀತಾ ಇದೆ. ನಾನಾ ಭಾಗಗಳಲ್ಲಿರೋ ಉಗ್ರರು, ಬೆಡ್​​ರೂಂ ಜಿಹಾದಿಗಳಾಗಿ ಬದಲಾಗಿ, ಉಗ್ರರನ್ನ ಒಗ್ಗೂಡಿಸ್ತಿದ್ದಾರೆ. ಭಾರತದಲ್ಲಿ ದಾಳಿ ಮಾಡೋದಕ್ಕೆ ಪ್ಲಾನ್ ಮಾಡ್ತಿದ್ದಾರೆ. ಈಗಾಗಲೇ ಉಗ್ರರು ಸಜ್ಜುಗೊಂಡಿದ್ದು ಒಂದು ಭೀಕರ ದಾಳಿಗೆ ಪ್ಲಾನನ್ನೂ ಹಾಕಲಾಗಿದೆ. ಆ ಪ್ರಕಾರ ಬೆಡ್​ರೂಂ ಜಿಹಾದಿಗಳ ಮುಖ್ಯ ಟಾರ್ಗೆಟ್​ ಆಗಿರೋದು ಅಮರನಾಥ ಯಾತ್ರಿಗಳು.

ಅಮರನಾಥ ಭಕ್ತರು ಟಾರ್ಗೆಟ್

ಪ್ರತೀವರ್ಷ ಜೂನ್​ ತಿಂಗಳಲ್ಲಿ ಅಮರನಾಥ ಯಾತ್ರೆ ಆರಂಭವಾಗುತ್ತೆ. ಆಗಸ್ಟ್​ ತಿಂಗಳವರೆಗೆ ನಡೆಯೋ ಅಮರನಾಥ್​ ಯಾತ್ರೆಯಲ್ಲಿ ಕೋಟ್ಯಾನು ಕೋಟಿ ಭಕ್ತರು ಭಾಗಿಯಾಗ್ತಾರೆ. ಹೀಗೆ ಅಮರನಾಥನ ದರ್ಶನಕ್ಕೆ ತೆರಳೋ ಭಕ್ತರನ್ನ ಬೆಡ್​ರೂಂ ಜಿಹಾದಿಗಳು ಟಾರ್ಗೆಟ್ ಮಾಡಿದ್ದಾರೆ. ಇದಕ್ಕಾಗಿ ಒಂದಷ್ಟು ಉಗ್ರರನ್ನ ಸಾಮಾಜಿಕ ಜಾಲತಾಣದ ಮೂಲಕ ಸೆಳೆದಿದ್ದು, ಅವರಿಗೆ ಟ್ರೈನಿಂಗ್ ಕೂಡ ಕೊಟ್ಟಿದ್ದಾರೆ ಅಂತ ಹೇಳಲಾಗುತ್ತಿದೆ. ಅಮರನಾಥ್ ಯಾತ್ರೆ ಆರಂಭವಾದಾಗ, ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸೋ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ.

ಬೆಡ್'ರೂಮ್ ಜಿಹಾದಿಗಳ ಬೆನ್ನು ಮೂಳೆ ಮುರಿದಿದ್ದಾರೆ ಮೋದಿ

ಅಮರನಾಥ ಯಾತ್ರಿಕರ ಮೇಲೆ ದಾಳಿ ನಡೆಯೋ ಸಾಧ್ಯತೆ ಇದೆ ಅನ್ನೋದು ಕೇಂದ್ರ ಗುಪ್ತಚರ ಇಲಾಖೆಗೆ ಗೊತ್ತಾಗಿದೆ. ಹೀಗಾಗಿ ಬೆಡ್​ರೂಂ ಜಿಹಾದಿಗಳ ವಿರುದ್ಧ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಇಂಡಿಯನ್ ಆರ್ಮಿ ಕೂಡ ಬೆಡ್​ರೂಂ ವಿಲನ್​ಗಳನ್ನ ಹುಡುಕಿ ಹುಡುಕಿ ಕೊಲ್ಲುತ್ತಿದೆ. ಇಷ್ಟೇ ಅಲ್ಲ.. ಒಂದೇ ಹೊಡೆತಕ್ಕೆ ಬೆಡ್​ರೂಂ ಜಿಹಾದಿಗಳ ಬೆನ್ನು ಮೂಳೆಯನ್ನೇ ಮುರಿದಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ಸಾಮಾಜಿಕ ಜಾಲತಾಣಗಳು ಬಂದ್

ಸೋಶಿಯಲ್ ಮೀಡಿಯಾಗಳ ಮೂಲಕ, ವಾಟ್ಸಾಪ್​ ಗ್ರೂಪ್​ಗಳ ಮೂಲಕ ಉಗ್ರರನ್ನು ಒಂದುಗೂಡಿಸಲಾಗ್ತಿತ್ತು. ಸಾಮಾಜಿಕ ಜಾಲ ತಾಣಗಳಲ್ಲೇ ರಹಸ್ಯವಾಗಿ ಪ್ಲಾನ್ ರೂಪಿಸಲಾಗ್ತಿತ್ತು. ಜನರನ್ನೂ ಸಜ್ಜುಗೊಳಿಸಿ, ದಾಳಿಗೆ ಸಿದ್ಧತೆ ನಡೆಸಲಾಗ್ತಿತ್ತು. ಇದನ್ನ ಸೂಕ್ಷ್ಮವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ಬೆಡ್​ರೂಂ ಜಿಹಾದಿಗಳ ಬೆನ್ನು ಮೂಳೆಯನ್ನೇ ಮುರಿದಿದೆ. ಜಮ್ಮು ಕಾಶ್ಮೀರದಲ್ಲಿ ಇಂಟರ್​ನೆಟ್​​ ಅನ್ನೇ ಸ್ಥಗಿತಗೊಳಿಸಲಾಗಿದೆ. ವಾಟ್ಸಪ್ಪೂ ಬಂದ್. ಫೆಸ್​ಬುಕ್ಕು ಬಂದ್. ಉಗ್ರರು ಒಬ್ಬರನ್ನೊಬ್ಬರು ಸಂಪರ್ಕಿಸಲು ಸಾಧ್ಯವಾಗದಂತೆ ಮಾಡಿದ್ದಾರೆ ಮೋದಿ. ಆ ಮೂಲಕ ಉಗ್ರರ ಪ್ಲಾನನ್ನೇ ಉಲ್ಟಾ ಮಾಡಿದ್ದಾರೆ.

ಜಮ್ಮು ಕಾಶ್ಮೀರದಲ್ಲೀಗ ಉಗ್ರ ಸಂದೇಶಗಳ ರವಾನೆ ಹತೋಟಿಗೆ ಬಂದಿದೆ. ಉಗ್ರರು ಒಬ್ಬರನ್ನೊಬ್ಬರಿ ಸಂಪರ್ಕಿಸೋದಕ್ಕೆ ಸಾಧ್ಯವಾಗ್ತಿಲ್ಲ.. ಹಾಗಂತ ಅಮರನಾಥ್​ ಯಾತ್ರಾರ್ಥಿಗಳು ಸೇಫ್ ಅಂತಾನೂ ಹೇಳೋದಕ್ಕಾಗಲ್ಲ.. ಯಾವ ಟೈಮಲ್ಲಿ ಏನು ಬೇಕಾದ್ರೂ ಆಗಬಹುದು. ಹೀಗಾಗಿ ಅಮರನಾಥ್​ ಯಾತ್ರಿಕರಿಗೆ ಹೆಚ್ಚಿನ ಭದ್ರತೆಯನ್ನ ಒದಗಿಸಲಾಗಿದೆ. ಎಲ್ಲೆಡೆ ಹದ್ದಿನ ಕಣ್ಣಿಡಲಾಗಿದ್ದು, ಅಮರನಾಥನ ದರ್ಶನಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಮೋದಿ. ಈ ಬೆಡ್​ರೂಂ ಜಿಹಾದಿಗಳು ನಿಮ್ಮ ಮನೆಯ ಕಂಪ್ಯೂಟರ್​ ಅನ್ನೂ ಸಂಪರ್ಕಿಸಿರಬಹುದು. ನಿಮ್ಮ ಮಕ್ಕಳು, ಕುಟುಂಬ ಸದಸ್ಯರನ್ನ ಸೆಳೆಯೋ ಪ್ರಯತ್ನವೂ ಮಾಡಿರಬಹುದು. ಯಾವುದಕ್ಕೂ ಎಚ್ಚರವಾಗಿರಿ. ನರಭಕ್ಷಕರ ಉಗ್ರರಿಂದ ನಿಮ್ಮ ಕುಟುಂಬವನ್ನ ನೀವು ಕಾಪಾಡಿಕೊಳ್ಳಿ .

ವರದಿ: ಶೇಖರ್ ಪೂಜಾರಿ, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಟಲ್ ಬ್ಯಾನ್ ಮಾಡಿ ದೇಶಕ್ಕೆ ಮಾದರಿಯಾದ ಗಡಿಗ್ರಾಮ: ಪ್ರತಿನಿತ್ಯ ಮೊಬೈಲ್, ಟಿವಿ 2 ಗಂಟೆ ಬಂದ್!
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ, ಇದು ಯೂನಸ್ ಸರ್ಕಾರದ ವ್ಯವಸ್ಥಿತ ಪಿತೂರಿ: ಶೇಖ್ ಹಸೀನಾ ಗಂಭೀರ ಆರೋಪ