‘ಮುಗಿದಿಲ್ಲ ರಾಜೀನಾಮೆ ಪರ್ವ, ಇನ್ನೂ 25 ಜನ ಕೈ ಶಾಸಕರು ರಿಸೈನ್ ಮಾಡ್ತಾರೆ’

Published : Jul 06, 2019, 08:38 PM ISTUpdated : Jul 06, 2019, 08:39 PM IST
‘ಮುಗಿದಿಲ್ಲ ರಾಜೀನಾಮೆ ಪರ್ವ, ಇನ್ನೂ 25 ಜನ ಕೈ ಶಾಸಕರು ರಿಸೈನ್ ಮಾಡ್ತಾರೆ’

ಸಾರಾಂಶ

14 ಶಾಸಕರು ರಾಜೀನಾಮೆ ನೀಡಿ ಅದರಲ್ಲಿ ಕೆಲವರು ಮುಂಬೈ ವಿಮಾನ ಏರಿದ್ದಾರೆ. ಈ ನಡುವೆ ದೇವರಹಿಪ್ಪರಗಿ ಬಿಜೆಪಿ ಶಾಸಕ ಎ. ಎಸ್. ಪಾಟೀಲ್ ನಡಹಳ್ಳಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ವಿಜಯಪುರ[ಜು. 06]  ಮೈತ್ರಿ ಪಕ್ಷದ ರೆಬಲ್ ಶಾಸಕರ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ಶಾಸಕ ಎ. ಎಸ್. ಪಾಟೀಲ್ ನಡಹಳ್ಳಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

25 ಕ್ಕೂ ಅಧಿಕ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿಲಿದ್ದಾರೆ. ಈ ಬಗ್ಗೆ ನನಗೆ ಮಾಹಿತಿ ಇದೆ. ಕಾಂಗ್ರೆಸ್ ನಲ್ಲಿ ಅನೇಕ ಜನ ಸ್ನೇಹಿತರಿದ್ದಾರೆ. ನನ್ನ ಜೊತೆ ಸಂಪರ್ಕದಲ್ಲಿದ್ದವರಿಗೆ ಕಾಂಗ್ರೆಸ್ ಬಿಟ್ಟು ಹೊರ ಬನ್ನಿ ಅಂತಾ ಹೇಳಿದ್ದೀನಿ ಎಂದು ಹೇಳಿದ್ದಾರೆ.

ದೋಸ್ತಿ ಖತಂ.. ಅಮೆರಿಕದಿಂದ ಬಂದ ತಕ್ಷಣ ಸಿಎಂ ಕುಮಾರಸ್ವಾಮಿ ರಾಜೀನಾಮೆ?

ಆ ಪಕ್ಷದಲ್ಲಿ ಏನಿಲ್ಲ, ನಾನು ಆಗಲೇ ತೀರ್ಮಾನ ಮಾಡಿ ಹೊರಗೆ ಬಂದಿದ್ದೀನಿ‌ ನೀವು ಹೊರಗೆ ಬನ್ನಿ ಅಂತಾ ಹೇಳಿದ್ದೀನಿ. ಕಾಂಗ್ರೆಸ್ ನಲ್ಲಿ ಜಾತಿ, ಹಣ ಬಿಟ್ಟರೇ ಬೇರೆನೂ ಇಲ್ಲ. ಅಲ್ಲಿನ ವಾತಾವರಣ ನೋಡಿ ಹೊರ ಬಂದಿದ್ದೇನೆ ಎಂದಿದ್ದಾರೆ.

ರಾಷ್ಟ್ರದ ತುಂಬಾ ಕಾಂಗ್ರೆಸ್ ನಾಶವಾಗಿದೆ. ರಾಜ್ಯದಲ್ಲೂ ಈಗ ಬೀಳುತ್ತೆ, ನಾಳೆ ಬೀಳುತ್ತೆ ಅನ್ನೋ ಪರಿಸ್ಥಿತಿ ಇದೆ ಎಂದು ಬಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ನಡಹಳ್ಳಿ ಹೇಳಿಕೆ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ