ಈಶ್ವರಪ್ಪ ವಿರುದ್ಧ ನಡೆಯುತ್ತಿದೆಯಾ ಬೇಹುಗಾರಿಕೆ?: ಹೈಕಮಾಂಡ್ಗೆ ರವಾನೆಯಾಗುತ್ತಿದೆ ಬ್ರಿಗೇಡ್ ಮಾಹಿತಿ!

Published : Jan 13, 2017, 04:10 AM ISTUpdated : Apr 11, 2018, 12:55 PM IST
ಈಶ್ವರಪ್ಪ ವಿರುದ್ಧ ನಡೆಯುತ್ತಿದೆಯಾ ಬೇಹುಗಾರಿಕೆ?: ಹೈಕಮಾಂಡ್ಗೆ ರವಾನೆಯಾಗುತ್ತಿದೆ ಬ್ರಿಗೇಡ್ ಮಾಹಿತಿ!

ಸಾರಾಂಶ

ಜಿದ್ದಿಗೆ ಬಿದ್ದು ರಾಯಣ್ಣ ಬ್ರಿಗೇಡ್​  ಕಟ್ಟಲು ಹೊರಟಿರುವ ಈಶ್ವರಪ್ಪ ವಿರುದ್ಧ ಈಗ ಬಿಜೆಪಿಯಲ್ಲಿ ಬೇಹುಗಾರಿಕೆ ನಡೆಯುತ್ತಿದೆಯಾ? ಹೌದು ಎನ್ನುತ್ತವೆ ರಾಜ್ಯ ಬಿಜೆಪಿಯ ಕೆಲವು ಮೂಲಗಳು. ಬಿರುಸಿನಲ್ಲಿ ನಡೆಯುತ್ತಿರುವ ಬ್ರಿಗೇಡ್​ನ ಪಿನ್​ ಟು ಪಿನ್​ ಮಾಹಿತಿ ಹೈಕಮಾಂಡ್​ಗೆ ರವಾನೆಯಾಗುತ್ತಿದೆಯಂತೆ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಭೆ ಸೇರಿದಂತೆ ಎಲ್ಲಾ ಚಟುವಟಿಕೆಗಳ ಮಾಹಿತಿ ಸಾಕ್ಷಿ  ಸಮೇತ ಹೈಕಮಾಂಡ್​  ಅಂಗಳ ತಲುಪಿದಿಯಂತೆ.

ಬೆಂಗಳೂರು(ಜ.13): ಜಿದ್ದಿಗೆ ಬಿದ್ದು ರಾಯಣ್ಣ ಬ್ರಿಗೇಡ್​  ಕಟ್ಟಲು ಹೊರಟಿರುವ ಈಶ್ವರಪ್ಪ ವಿರುದ್ಧ ಈಗ ಬಿಜೆಪಿಯಲ್ಲಿ ಬೇಹುಗಾರಿಕೆ ನಡೆಯುತ್ತಿದೆಯಾ? ಹೌದು ಎನ್ನುತ್ತವೆ ರಾಜ್ಯ ಬಿಜೆಪಿಯ ಕೆಲವು ಮೂಲಗಳು. ಬಿರುಸಿನಲ್ಲಿ ನಡೆಯುತ್ತಿರುವ ಬ್ರಿಗೇಡ್​ನ ಪಿನ್​ ಟು ಪಿನ್​ ಮಾಹಿತಿ ಹೈಕಮಾಂಡ್​ಗೆ ರವಾನೆಯಾಗುತ್ತಿದೆಯಂತೆ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಭೆ ಸೇರಿದಂತೆ ಎಲ್ಲಾ ಚಟುವಟಿಕೆಗಳ ಮಾಹಿತಿ ಸಾಕ್ಷಿ  ಸಮೇತ ಹೈಕಮಾಂಡ್​  ಅಂಗಳ ತಲುಪಿದಿಯಂತೆ.

ಹೈಕಮಾಂಡ್​ಗೆ ರವಾನೆಯಾಗುತ್ತಿದೆಯಂತೆ ಬ್ರಿಗೇಡ್​ ಚಟುವಟಿಕೆ ಮಾಹಿತಿ

ಬಿಜೆಪಿ-ಬ್ರಿಗೇಡ್ ನಡುವಿನ ಸಂಘರ್ಷ ದಿನೇ ದಿನೇ ತೀವ್ರಸ್ವರೂಪ ಪಡೆದುಕೊಳ್ಳುತ್ತಿದೆ. ವರಿಷ್ಠರು ಸೂಚನೆ ನೀಡಿದರೂ ತಲೆಕೆಡಿಸಿಕೊಳ್ಳದ ಕೆ.ಎಸ್​. ಈಶ್ವರಪ್ಪ ರಾಯಣ್ಣ ಬ್ರಿಗೇಡ್​ ಚಟುವಟಿಕೆಯನ್ನು ರಾಜಾರೋಷವಾಗಿ ಮುಂದುವರಿಸಿದ್ದಾರೆ. ಕೇವಲ ಬಾಯಿ ಮಾತಿನಲ್ಲಿ ಈಶ್ವರಪ್ಪಗೆ ವರಿಷ್ಠರಿಂದ ಎಚ್ಚರಿಕೆ ಕೊಡಿಸಿದ್ದ ರಾಜ್ಯ ಬಿಜೆಪಿ ನಾಯಕತ್ವ ಈಗ ಈಶ್ವರಪ್ಪ ನಡೆಯನ್ನು ಗಂಭೀರವಾಗಿ ಪರಿಗಣಿಸಿದಂತಿದೆ. ಹೀಗಾಗೇ ಬ್ರಿಗೇಡ್ ಚಟುವಟಿಕೆಯ ಪಿನ್ ಟು ಪಿನ್ ಮಾಹಿತಿಯನ್ನೂ ಹೈಕಮಾಂಡ್​ಗೆ ಕಳುಹಿಸಿಕೊಡಲಾಗುತ್ತಿದೆ ಎನ್ನಲಾಗ್ತಿದೆ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಬ್ರಿಗೇಡ್​ನ ಪೂರ್ಣ ಮಾಹಿತಿ ಕೂಡ ಈಗಾಗಲೇ ಹೈಕಮಾಂಡ್​ ಅಂಗಳ ತಲುಪಿದೆ ಎನ್ನಲಾಗಿದೆ.

ವರಿಷ್ಠರ ಗಮನ ಸೆಳೆಯಲು ಗಂಭೀರ ಪ್ರಯತ್ನ 

ಪಂಚರಾಜ್ಯಗಳ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಹೈಕಮಾಂಡ್'​ಗೆ ರಾಜ್ಯದಲ್ಲಿನ ಬೆಳವಣಿಗೆಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಸಮಯವಿಲ್ಲ. ಆದರೂ ವರಿಷ್ಠರ ಗಮನ ಸೆಳೆಯಲು ಗಂಭೀರ ಪ್ರಯತ್ನ ಮಾಡಿರುವ ರಾಜ್ಯ ನಾಯಕತ್ವ, ಬ್ರಿಗೇಡ್ ಚಟುವಟಿಕೆಯ ಪುರಾವೆ ಸಮೇತ. ಅಂದರೆ ವೀಡಿಯೋ ಸಮೇತ ಮಾಹಿತಿ ಹೈಕಮಾಂಡ್​'ಗೆ ರವಾನಿಸಲಾಗಿದೆ ಎಂಬ ಮಾತು ಬಿಜೆಪಿ ಕಾರಿಡಾರ್'​ನಲ್ಲಿ ಬಲವಾಗಿ ಕೇಳಿ ಬಂದಿದೆ.

ರಾಜ್ಯ ಚುನಾವಣೆ ಮುಗಿಯುವುದನ್ನು ಬ್ರಿಗೇಡ್ ವಿರೋಧಿ ಬಣ ಕಾಯುತ್ತಿದೆ. ಇತ್ತ ಈಶ್ವರಪ್ಪ ಮಾತ್ರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಮುನ್ನುಗ್ಗುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆ ಮುಂದೊಂದು ದಿನ ಕಮಲದಲ್ಲಿ ಭಾರೀ ತಳಮಳ ಸೃಷ್ಟಿಸುವ ಮುನ್ಸೂಚನೆ ನೀಡುತ್ತಿರುವುದಂತೂರೋದಂತು ಸತ್ಯ

ವರದಿ: ಕಿರಣ್ ಹನಿಯಡ್ಕ, ಸುವರ್ಣ ನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯಾನೆಟ್ ಕನ್ನಡಪ್ರಭ ಸುವರ್ಣ ನ್ಯೂಸ್ ವತಿಯಿಂದ ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ
ಉತ್ತರ ಕನ್ನಡ: ಯುವಜನತೆಯಲ್ಲಿ ಹೆಚ್ಚುತ್ತಿದೆ ಹೆಚ್‌ಐವಿ ಸೋಂಕು, ಜೆನ್ ಝೀ ಕಿಡ್‌ ಗಳಲ್ಲೇ ಅತೀ ಹೆಚ್ಚು!