ಬಿಜೆಪಿ ಕೈ ಹಿಡಿದ ಶಾಸಕ, ಜಿಪಂನಲ್ಲಿ ಅರಳಿದ ಕಮಲ

By Web DeskFirst Published Jun 24, 2019, 11:04 PM IST
Highlights

ಲೋಕಸಭಾ ಚುನಾವಣೆ ನಂತರ ದೇಶದಲ್ಲಿ ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ರಾಜಕಾರಣದ ಬದಲಾವಣೆಗಳು ನಿರಂತರವಾಗಿದೆ.

ಕೋಲ್ಕತ್ತಾ[ಜೂ. 24]  ಬಿಜೆಪಿ ನಿಧಾನವಾಗಿ ಮಮತಾ ಬ್ಯಾನರ್ಜಿಯ ಭದ್ರಕೋಟೆ ಪಶ್ಚಿಮ ಬಂಗಾಳವನ್ನು ಆಕ್ರಮಿಸಿಕೊಳ್ಳುತ್ತಿದೆ. ಸೌತ್ ದಿನಾಜ್ ಪುರ್ ಜಿಲ್ಲಾ ಪರಿಷತ್ ಕಮಲದ ವಶವಾಗಿದೆ. ತೃಣಮೂಲ ಕಾಂಗ್ರೆಸ್ ನ ಪ್ರಮುಖ ನಾಯಕ ಬಿಪ್ ಲಾಬ್ ಮಿತ್ರಾ ಸಹ ಬಿಜೆಪಿ ಸೇರಿದ್ದಾರೆ.

ಪಶ್ಚಿಮ ಬಂಗಾಳದ ಉತ್ತರ ಭಾಗದಲ್ಲಿ ಟಿಎಂಸಿಯನ್ನು ಕಟ್ಟಿ ಬೆಳೆಸಿದ್ದವರಲ್ಲಿ ಮಿತ್ರಾ ಪ್ರಮುಖರು.  ಮಿತರಾ ಜತೆ 18 ಜನ ಸದಸ್ಯರು ಬಿಜೆಪಿ ಸೇರಿರುವುದು ಅಲ್ಲದೇ ಲಿಪುರ್ ದರ್ ಜಿಲ್ಲೆಯ ಕಲ್ಚಿನಿಯ  ಟಿಎಂಸಿಯ ಶಾಸಕ ವಿಲ್ಸನ್ ಚಾಂಪ್ರಮರಿ ಸಹ ಕಮಲದ ಕೈ ಹಿಡಿದಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ  ಟಿಎಂಸಿಯ ಅನೇಕ ಶಾಸಕರು ಬಿಜೆಪಿ ಜಾಯಿನ್ ಆಗಿದ್ದಾರೆ. ಇಡಿ ದೇಶದಲ್ಲಿ ಪಕ್ಷಾಂತಯರ ಪರ್ವ ನಡೆಯುತ್ತಿದ್ದು ಮಮತಾ ಬ್ಯಾನರ್ಜಿ ಅವರಿಗೆ ತಮ್ಮ ಪಕ್ಷದ ಅಸ್ತಿತ್ವ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ.

 

click me!