ಚುನಾವಣೆ ಹೊಸ್ತಿಲಲ್ಲ ಕಾಂಗ್ರೆಸ್ ವಿರುದ್ಧ ಬಿಜೆಪಿಗೆ ಸಿಕ್ಕಿತು ಮತ್ತೊಂದು ಅಸ್ತ್ರ: ರಾಜ್ಯವ್ಯಾಪಿ ಪ್ರತಿಭಟನೆಗೆ ಸಿದ್ಧತೆ!

By Suvarna Web DeskFirst Published Aug 20, 2017, 10:21 AM IST
Highlights

ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಿದೆ. ಡಿಕೆ ಶಿವಕುಮಾರ್ ವಿರುದ್ಧದ ಪ್ರತಿಭಟನೆಯ ಜೊತೆಯಲ್ಲೇ ಎಸಿಬಿಯನ್ನು ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂಬ ಮತ್ತೊಂದು ಅಸ್ತ್ರ ಬಿಜೆಪಿಯ ಕೈ ಸೇರಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ಈಗ ಪ್ರತಿಭಟನೆ ನಡೆಸುತ್ತಿದೆ.

ಬೆಂಗಳೂರು(ಆ.20): ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಿದೆ. ಡಿಕೆ ಶಿವಕುಮಾರ್ ವಿರುದ್ಧದ ಪ್ರತಿಭಟನೆಯ ಜೊತೆಯಲ್ಲೇ ಎಸಿಬಿಯನ್ನು ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂಬ ಮತ್ತೊಂದು ಅಸ್ತ್ರ ಬಿಜೆಪಿಯ ಕೈ ಸೇರಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ಈಗ ಪ್ರತಿಭಟನೆ ನಡೆಸುತ್ತಿದೆ.

ಎಸಿಬಿ ವಿಚಾರ ಕಾಂಗ್ರೆಸ್'ಗೆ ಮುಳುವಾಗುವುದರೊಂದಿಗೆ ಬಿಜೆಪಿಗೆ ಪ್ರಬಲವಾದ ಅಸ್ತ್ರದಂತೆ ಬಂದೊದಗಿದೆ. ಸರ್ಕಾರ ಎಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಬಿಜೆಪಿ ವಾದಕ್ಕೆ ಪೂರಕವೆಂಬಂತೆ ಕೆಎಎಸ್ ಅಧಿಕಾರಿ ಬಸವರಾಜೇಂದ್ರರವರು ರಾಜ್ಯಪಾಲರಿಗೆ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರ ಮತ್ತಷ್ಟು ಬಲ ನೀಡಿದಂತಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಬಿಜೆಪಿ ಸಂಪೂರ್ಣ ಸಿದ್ಧತೆ ನಡೆಸಿದೆ.

ಇಂದು  ಬೆಂಗಳೂರಿನ ಮೈಸೂರು ವೃತ್ತದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ಆರಂಭಿಸಿದ್ದಾರೆ. ನಾಳೆಯಿಂದ ರಾಜ್ಯವ್ಯಾಪಿ ಪ್ರತಿಭಟನೆಯನ್ನು ಬಿಜೆಪಿ ಆಯೋಜಿಸಿದೆ. ಅಮಿತ್ ಶಾ ಆಗಮನ ಹಾಗೂ ಅವರ ಮಾತುಗಳಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ನಾಯಕರು ಸಿಕ್ಕ ಸಣ್ಣ ಅವಕಾಶವನ್ನೂ ಪ್ರಬಲವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಯೋಚನೆ ಮಾಡುತ್ತಿದೆ.

ಹೀಗಾಗಿ ಎಸಿಬಿ ವಿಚಾರವನ್ನು ಸಾದ್ಯವಾದಷ್ಟು ರೀತಿಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಲು, ಚುನಾವಣಾ ವಿಚಾರವಾಗಿ ಪರಿವರ್ತಿಸಲು ಹಾಗೂ ಈ ಹೋರಾಟವನ್ನು ಚುನಾವಣೆ ಹಂತದವರೆಗೆ ಜೀವಂತವಾಗಿರಿಸಲು ಬಿಜೆಪಿ ನಡೆಸುತ್ತಿದೆ ಎಂಬುವುದರಲ್ಲಿ ಅನುಮಾನವಿಲ್ಲ. ಕೋರ್ ಕಮಿಟಿ ಸಭೆಯಲ್ಲೂ ಎರಾಜ್ಯ ಸರ್ಕಾರದ ವಿರುದ್ಧ ಕಾನೂನಾತ್ಮಕ ಹಾಗೂ ರಾಜಕೀಯ ಈ ಎರಡೂ ಹಂತದ ಹೋರಾಟ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.   

click me!