ಬಿಜೆಪಿ ವಾರ್ಷಿಕ ಆದಾಯ 1027 ಕೋಟಿ, ಖರ್ಚಾಗಿದ್ದೆಷ್ಟು?

Published : Dec 19, 2018, 09:07 AM IST
ಬಿಜೆಪಿ ವಾರ್ಷಿಕ ಆದಾಯ 1027 ಕೋಟಿ, ಖರ್ಚಾಗಿದ್ದೆಷ್ಟು?

ಸಾರಾಂಶ

ಪಕ್ಷದ ಲೆಕ್ಕ ಪರಿಶೋಧನಾ ವರದಿಯಲ್ಲಿನ ಅಂಕಿ-ಅಂಶ ಬಹಿರಂಗ| ಕಳೆದ ಸಲಕ್ಕಿಂತ ಆಡಳಿತ ಪಕ್ಷದ ಆದಾಯ 7 ಕೋಟಿ ರು. ಇಳಿಕೆ| ಆದರೆ ಇನ್ನೂ ವರದಿ ಸಲ್ಲಿಸದ ಕಾಂಗ್ರೆಸ್‌ ಪಕ್ಷ: ಎಡಿಆರ್‌

ನವದೆಹಲಿ[ಡಿ.19]: ಬಿಜೆಪಿ 2017-18ನೇ ಸಾಲಿನಲ್ಲಿ 1,027 ಕೋಟಿ ರುಪಾಯಿ ಆದಾಯ ಘೋಷಿಸಿದೆ. ಇದೇ ವೇಳೆ ಪಕ್ಷವು ಈ ನಿಧಿಯ 74 ಪ್ರತಿಶದತಷ್ಟು, ಅಂದರೆ 758.47 ಕೋಟಿ ರು. ಖರ್ಚು ಮಾಡಿದೆ.

ಭಾರತೀಯ ಚುನಾವಣಾ ವ್ಯವಸ್ಥೆ ಹಾಗೂ ರಾಜಕೀಯ ಪಕ್ಷಗಳ ಕಾರ್ಯಚಟುವಟಿಕೆ ಮೇಲೆ ಮೇಲೆ ಕಣ್ಣಿಡುವ ಸಂಸ್ಥೆಯಾದ ‘ಅಸೋಸಿಯೇಶನ್‌ ಫಾರ್‌ ಡೆಮಾಕ್ರೆಟಿಕ್‌ ರೀಸಚ್‌ರ್‍’ (ಎಡಿಆರ್‌) ಈ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಆದರೆ ಕಾಂಗ್ರೆಸ್‌ ಪಕ್ಷ ಇನ್ನೂ ತನ್ನ ಲೆಕ್ಕ ಪರಿಶೋಧನಾ ವರದಿಯನ್ನು ಸಲ್ಲಿಸಿಲ್ಲ ಎಂದು ಎಡಿಆರ್‌ ಹೇಳಿದೆ.

ಇದೇ ವೇಳೆ, ಬಿಎಸ್‌ಪಿ 2017-18ರಲ್ಲಿ 51.7 ಕೋಟಿ ರು. ಆದಾಯ ಸಂಪಾದಿಸಿದೆ. 14.78 ಕೋಟಿ ರು. ಖರ್ಚು ಮಾಡಿದೆ. ಎನ್‌ಸಿಪಿ ಆದಾಯ 8.15 ಕೋಟಿ ರು. ಇದ್ದರೆ ಅದಕ್ಕಿಂತ ಹೆಚ್ಚು ಅಂದರೆ 8.84 ಕೋಟಿ ರು. ಖರ್ಚು ಮಾಡಿದೆ ಎಂಬ ಕುತೂಹಲಕರ ಮಾಹಿತಿಯೂ ಇದರಲ್ಲಿದೆ.

2016-17ನೇ ಸಾಲಿನಲ್ಲಿ ಬಿಜೆಪಿಗೆ 1034 ಕೋಟಿ ರು. ಆದಾಯ ಹರಿದುಬಂದಿತ್ತು. ಆದರೆ ಇದು 17-18ನೇ ಸಾಲಿನಲ್ಲಿ 7 ಕೋಟಿ ರು.ನಷ್ಟುಇಳಿಕೆ ಕಂಡಿದೆ ಎಂಬುದು ಇಲ್ಲಿ ಗಮನಾರ್ಹ. ಚುನಾವಣಾ ಬಾಂಡ್‌ ಮೂಲಕ ಬಿಜೆಪಿಗೆ ಬಂದಿರುವ ಆದಾಯ 210 ಕೋಟಿ ರುಪಾಯಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ ಮಾಡಿದ ದೈತ್ಯ ಕಂಪನಿಗಳು
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ