ನಗರವನ್ನೇ ಬೆಚ್ಚಿಬೀಳಿಸುವ ಘಟನೆ ನಡೆದಿದೆ, ಬಿಬಿಎಂಪಿ ಬಿಜೆಪಿ ಕಾರ್ಪೋರೇಟರ್ ಪತಿಯ ಬರ್ಬರ ಹತ್ಯೆ ನಡೆದಿದೆ.
ಬೆಂಗಳೂರು: ನಗರವನ್ನೇ ಬೆಚ್ಚಿಬೀಳಿಸುವ ಘಟನೆ ನಡೆದಿದೆ, ಬಿಬಿಎಂಪಿ ಬಿಜೆಪಿ ಕಾರ್ಪೋರೇಟರ್ ಪತಿಯ ಬರ್ಬರ ಹತ್ಯೆ ನಡೆದಿದೆ.
ವಾರ್ಡ್ ನಂಬರ್ 138 ಛಲವಾದಿ ಪಾಳ್ಯರ ಕಾರ್ಪೋರೇಟರ್ ರೇಖಾ ಪತಿ ಕದಿರೇಶನ್’ನನ್ನು ದುಷ್ಕರ್ಮಿಗಳು ಹಾಡುಹಗಲೇ ಕೊಚ್ಚಿ ಹತ್ಯೆ ಮಾಡಿದ್ದಾರೆ.
ಸಂಜೆ 4 ಗಂಟೆ ವೇಳೆಗೆ ಕಾಟನ್ಪೇಟೆಯ ಅಂಜಿನಪ್ಪ ಗಾರ್ಡನ್ನಲ್ಲಿ ಕದಿರೇಶ್ ಹತ್ಯೆ ನಡೆದಿದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಬೆಕ್ಕಿನ ಕಣ್ಣು ರಾಜೇಂದ್ರ ಸಹಚರರಿಂದ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ.
ಮೃತ ಕದಿರೇಶ್ ಕಾಟನ್ಪೇಟೆಯಲ್ಲಿ 2002ರಲ್ಲೇ ರೌಡಿ ಶೀಟರ್ ಖಾತೆ ತೆರೆದಿದ್ದ. ಕದಿರೇಶ್ ವಿರುದ್ಧ ಹಲವಾರು ಶ್ರೀರಾಂಪುರ, ಕಾಟನ್ಪೇಟೆ’ಗಳಲ್ಲಿ ಕೇಸ್’ಗಳು ದಾಖಲಾಗಿತ್ತು. ಒಟ್ಟು 15 ಪ್ರಕರಣಗಳಲ್ಲಿ ಕದಿರೇಶ್ ಆರೋಪಿಯಾಗಿದ್ದ ಎಂದು ಹೇಳಲಾಗಿದೆ.
ಕದಿರೇಶ್ ವಿರುದ್ಧದ 5 ಪ್ರಕರಣಗಳು ಖುಲಾಸೆಯಾಗಿದ್ದು, ಇನ್ನೂ 10 ಪ್ರಕರಣಗಳ ವಿಚಾರಣೆ ನಡೆಯುತ್ತಿತ್ತು. ಕದಿರೇಶ್ ವಿರುದ್ಧ ಕೊಲೆ, ಕೊಲೆಯತ್ನ. ಹಲ್ಲೆ ಬೆದರಿಕೆ ದೂರುಗಳಿತ್ತು.