ಲಕ್ಕಸಂದ್ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು

Published : Nov 23, 2016, 06:58 AM ISTUpdated : Apr 11, 2018, 12:53 PM IST
ಲಕ್ಕಸಂದ್ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು

ಸಾರಾಂಶ

ಲಕ್ಕಸಂದ್ರ ವಾರ್ಡ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸರಳಾ ಮಹೇಶ್​​ ಬಾಬು ಗೆಲುವನ್ನ ಸಾಧಿಸಿದ್ದಾರೆ.

ಬೆಂಗಳೂರು (ನ.23): ಲಕ್ಕಸಂದ್ರ ವಾರ್ಡ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸರಳಾ ಮಹೇಶ್​​ ಬಾಬು ಗೆಲುವನ್ನ ಸಾಧಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಮೋಹನ್​ ಗಿಂತ 2414 ಮತಗಳ ಮುನ್ನಡೆಯನ್ನ ಸಾಧಿಸಿದ್ದಾರೆ. ಮೋಹನ್ 5224 ಮತಗಳನ್ನ ಪಡೆದಿದ್ದರೆ  ಸರಳ ಮಹೇಶ್ ಬಾಬು 7638 ಮತಗಳ ಮೂಲಕ ಜಯಸಾಧಿಸಿದ್ದಾರೆ.

ಇತ್ತೀಚೆಗಷ್ಟೇ ಲಕ್ಕಸಂದ್ರ ವಾರ್ಡ್​ನ ಕಾರ್ಪೊರೇಟರ್​ ಮಹೇಶ್ ಅಪಘಾತದಲ್ಲಿ ಮೃತಪಟ್ಟಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಕಳೆದ 20 ರಂದು ಉಪಚುನಾವಣೆ ನಡೆಸಲಾಗಿತ್ತು. ಇಂದು ಆಡುಗೋಡಿಯ ಮುನಿಚಿನ್ನಪ್ಪ ಶಾಲೆಯಲ್ಲಿ ಮತ ಎಣಿಕೆ ನಡೆದಿದ್ದು, ಬಿಜೆಪಿಯ ಸರಳಾ ಮಹೇಶ್ ಗೆಲುವನ್ನ ಸಾಧಿಸಿದ್ದಾರೆ. ಸರಳಾ ಮಹೇಶ್ ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಿಸಿದ್ದಾರೆ.  ಇನ್ನೂ 4 ನೇ ಬಾರಿಯೂ ಕೂಡ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಸೋಲನುಭವಿಸಿದ್ದು, ಮೋಹನ್ ಪರ ಪ್ರಚಾರ ಮಾಡಿದ ಸಚಿವ ರಾಮಲಿಂಗಾರೆಡ್ಡಿ  ಲೆಕ್ಕ ಚಾರ ಉಲ್ಟಾ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನನ್ನನ್ನು ಯಾರೂ ಅಲುಗಾಡಿಸಲು ಆಗೋದಿಲ್ಲ : ಸಿಎಂ ಖಡಕ್‌ ನುಡಿ
ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!