ಬಿಜೆಪಿಗೆ ಮತ್ತೋರ್ವ ಶಾಸಕ ಸೇರ್ಪಡೆ : ಹೆಚ್ಚಿದ ಬಲ

By Web DeskFirst Published Feb 1, 2019, 12:44 PM IST
Highlights

ಕ್ಷೇತ್ರವೊಂದರಲ್ಲಿ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿದ್ದು ಇಲ್ಲಿ ಬಿಜೆಪಿ ಗೆಲುವು ಪಡೆಯುವ ಮೂಲಕ ಮತ್ತೊಂದು ಸ್ಥಾನ ಸೇರ್ಪಡೆಯಾದಂತಾಗಿದೆ.  ಹರ್ಯಾಣದ ಜಿಂದ್ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದಾರೆ. 

ಜಿಂದ್‌/ಜೈಪುರ: ಹರ್ಯಾಣದ ಜಿಂದ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ  ಆಡಳಿತಾರೂಢ ಬಿಜೆಪಿ ಜಯಿಸಿದೆ.

ಹರ್ಯಾಣದ ಜಿಂದ್‌ನಲ್ಲಿ ಕಾಂಗ್ರೆಸ್‌ ಮುಖ್ಯ ರಾಷ್ಟ್ರೀಯ ವಕ್ತಾರ ರಣದೀಪ್‌ ಸುರ್ಜೇವಾಲಾ ಅವರು ಬಿಜೆಪಿ ಅಭ್ಯರ್ಥಿ ಕೈಲಿ ಹೀನಾಯವಾಗಿ ಸೋಲುಂಡು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

ಜಿಂದ್‌ನಲ್ಲಿ ಐಎನ್‌ಎಲ್‌ಡಿ ಶಾಸಕನ ನಿಧನದ ಕಾರಣ ಕ್ಷೇತ್ರ ತೆರವಾಗಿತ್ತು. ಜನವರಿ 31ರಂದು ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು,   ಇಲ್ಲಿ ಬಿಜೆಪಿಯ ಡಾ. ಕೃಷ್ಣ ಮಿದ್ಧಾ ಅವರು ತಮ್ಮ ಸಮೀಪದ ಸ್ಪರ್ಧಿಯಾದ ಜನನಾಯಕ ಜನತಾ ಪಾರ್ಟಿಯ (ಜೆಜೆಪಿ) ದಿಗ್ವಿಜಯ ಸಿಂಗ್‌ ಚೌಟಾಲಾ ಅವರನ್ನು 12,935 ಮತದಿಂದ ಸೋಲಿಸಿದರು. ಇಲ್ಲಿ ಮಿದ್ಧಾ ಅವರಿಗೆ 50566, ಚೌಟಾಲಾ ಅವರಿಗೆ 37681 ಮತ ಬಂದರೆ ಹಾಲಿ ಕಟಿಹಾಲ್‌ನ ಶಾಸಕರಾಗಿದ್ದರೂ ಜಿಂದ್‌ಗೆ ಬಂದು ನಿಂತಿದ್ದ ಕಾಂಗ್ರೆಸ್‌ ಮುಖ್ಯ ರಾಷ್ಟ್ರೀಯ ವಕ್ತಾರ ರಣದೀಪ್‌ ಸುರ್ಜೇವಾಲಾ ಕೇವಲ 22740 ಮತ ಪಡೆದು 3ನೇ ಸ್ಥಾನಕ್ಕೆ ತಳ್ಳಲ್ಪಟ್ಟರು.

2014ರ ನವೆಂಬರ್ ನಲ್ಲಿ ಹರ್ಯಾಣದಲ್ಲಿ ಚುನಾವಣೆ ನಡೆದಿದ್ದು,  2019ನೇ ಸಾಲಿನಲ್ಲಿ ಇಲ್ಲಿ ಮತ್ತೆ ವಿಧಾನಸಭಾ ಚುನಾವಣೆ ನಡೆಯಲಿದೆ. ಸದ್ಯ ತೆರವಾದ ಕ್ಷೇತ್ರಕ್ಕೆ ಉಪಚುನಾವಣೆ ನಡೆಸಲಾಗಿದ್ದು, ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ ಬಿಜೆಪಿ 49 ಸ್ಥಾನ ಪಡೆದಂತಾಗಿದೆ. 

ಚೌಟಾಲಾ ಕುಟುಂಬದ ಅಂತಃಕಲಹದದ ಕಾರಣ ಹಿಸಾರ್‌ ಸಂಸದ ದುಷ್ಯಂತ್‌ ಚೌಟಾಲಾ ಐಎನ್‌ಎಲ್‌ಡಿಯಿಂದ ಹೊರಬಂದು ಜೆಜೆಪಿ ಕಟ್ಟಿದ್ದರು. ಈ ಕುಟುಂಬ ಕಲಹವೇ ದಿಗ್ವಿಜಯ ಚೌಟಾಲಾ ಸೋಲಿಗೆ ಕಾರಣ. ಇನ್ನು ಸುರ್ಜೇವಾಲಾ ಹೊರಗಿನವರು ಎಂಬುದು ಹಾಗೂ ಒಂದು ಕ್ಷೇತ್ರದ ಶಾಸಕರಾಗಿದ್ದರೂ ಇಲ್ಲಿಗೆ ಬಂದು ಸ್ಪರ್ಧಿಸಿದ್ದು ಸೋಲಿಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

click me!