
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಹುತೇಕ ಫೈನಲ್ ಆಗಿದ್ದು ಇಂದು ರಾತ್ರಿ 70 ರಿಂದ 80 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಸಾಧ್ಯತೆಯಿದೆ. ಈ ಬಗ್ಗೆ ಸುವರ್ಣ ನ್ಯೂಸ್ಗೆ ಬಿಜೆಪಿ ಉನ್ನತ ಮೂಲಗಳ ಖಚಿತ ಮಾಹಿತಿ ಲಭ್ಯವಾಗಿದೆ. ಟಿಕೆಟ್ ಹಂಚಿಕೆ ಕುರಿತು ಬೆಳಗಿನ ಜಾವ 3 ಗಂಟೆವರೆಗೆ ಅಮಿತ್ ಶಾ ಬಿಜೆಪಿ ನಾಯಕರಾದ ಯಡಿಯೂರಪ್ಪ ಅನಂತ್ ಕುಮಾರ್, ಸಂತೋಷ್ ಚರ್ಚೆ ನಡೆಸಿದರು. ಶ್ರೀರಾಮುಲುಗೆ ಬಳ್ಳಾರಿ ಗ್ರಾಮೀಣದಿಂದ, ಶಿವಮೊಗ್ಗದಿಂದ ಕೆ.ಎಸ್.ಈಶ್ವರಪ್ಪ, ವಿಜಯಪುರ ಬಸನಗೌಡ ಪಾಟೀಲ್ ಯತ್ನಾಳ್, ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿಗೆ, ತುಮಕೂರಿನಲ್ಲಿ ಜ್ಯೋತಿ ಗಣೇಶ್ಗೆ ಟಿಕೆಟ್ ಪಕ್ಕಾ ಆಗಿದೆ.
ಜೆಡಿಎಸ್ ತೊರೆದ ಮಲ್ಲಿಕಾರ್ಜುನ ಖೂಬಾಗೂ ಟಿಕೆಟ್ ಬಸವ ಕಲ್ಯಾಣದಿಂದ ಮಲ್ಲಿಕಾರ್ಜುನ ಖೂಬಾಗೂ ಟಿಕೆಟ್ ಫೈನಲ್ ಇಂದು ಸಂಜೆ ಬಹುತೇಕ ಎಲ್ಲ ನಾಯಕರ ಹೆಸರು ಘೋಷಣೆ ಮಾಡಲಾಗುತ್ತದೆ. ಶಿಗ್ಗಾವಿಯಲ್ಲಿ ಸೋಮಣ್ಣ ಬೇವಿನಮರದ್, ತುಮಕೂರಿನಲ್ಲಿ ಸೊಗಡು ಶಿವಣ್ಣಗೂ ಟಿಕೆಟ್ ತಪ್ಪಿದೆ. ಇವರಿಬ್ಬರನ್ನು ಮನವೊಲಿಸಲು ಯಡಿಯೂರಪ್ಪ ಅವರಿಗೆ ಸೂಚಿಸಲಾಗಿದೆ.
ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೆಟ್..?
ಶೋಭಾ ಕರಂದ್ಲಾಜೆ ಪರ ಯಡಿಯೂರಪ್ಪ ಬ್ಯಾಟಿಂಗ್ ಮಾಡಿದ್ದು ಯಶವಂತಪುರದಿಂದ ಶೋಭಾ ಕರಂದ್ಲಾಜೆಗೆ ಟಿಕೆಟ್ಗೆ ಮನವಿ ಮಾಡಿದ್ದು ಆದರೆ ಅಂತಿಮವಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.