ಅಮೆರಿಕದ ಮರುಭೂಮಿಲಿ ಬಿಲ್'ಗೇಟ್ಸ್ ಸ್ಮಾರ್ಟ್ ಸಿಟಿ..!

Published : Nov 28, 2017, 01:57 PM ISTUpdated : Apr 11, 2018, 12:54 PM IST
ಅಮೆರಿಕದ ಮರುಭೂಮಿಲಿ ಬಿಲ್'ಗೇಟ್ಸ್ ಸ್ಮಾರ್ಟ್ ಸಿಟಿ..!

ಸಾರಾಂಶ

ಮೈಕ್ರೋಸಾಫ್ಟ್ ಕಂಪನಿಯ ಸಂಸ್ಥಾಪಕ, ವಿಶ್ವದ ನಂ.2 ಶ್ರೀಮಂತ ಬಿಲ್ ಗೇಟ್ಸ್ ಅಮೆರಿಕದ ಅರಿಜೋನಾ ಮರುಭೂಮಿಯಲ್ಲಿ ಸ್ಮಾರ್ಟ್‌'ಸಿಟಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ 25 ಸಾವಿರ ಎಕರೆ ಜಮೀನು ಖರೀದಿಸಿರುವ ಅವರು, 516  ಕೋಟಿ ರು. ಬಂಡವಾಳ ತೊಡಗಿಸಲು ಉದ್ದೇಶಿಸಿದ್ದಾರೆ.

ನ್ಯೂಯಾರ್ಕ್(ನ.28): ನಗರ ಪ್ರದೇಶಗಳಿಗೆ ವಲಸೆ ಹೆಚ್ಚುತ್ತಲೇ ಇರುವ ಹಿನ್ನೆಲೆಯಲ್ಲಿ ಮೈಕ್ರೋಸಾಫ್ಟ್ ಕಂಪನಿಯ ಸಂಸ್ಥಾಪಕ, ವಿಶ್ವದ ನಂ.2 ಶ್ರೀಮಂತ ಬಿಲ್ ಗೇಟ್ಸ್ ಅಮೆರಿಕದ ಅರಿಜೋನಾ ಮರುಭೂಮಿಯಲ್ಲಿ ಸ್ಮಾರ್ಟ್‌'ಸಿಟಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ 25 ಸಾವಿರ ಎಕರೆ ಜಮೀನು ಖರೀದಿಸಿರುವ ಅವರು, 516  ಕೋಟಿ ರು. ಬಂಡವಾಳ ತೊಡಗಿಸಲು ಉದ್ದೇಶಿಸಿದ್ದಾರೆ.

ಬೆಲ್ಮಂಟ್ ಪಾರ್ಟ್‌'ನರ್ಸ್‌ ಎಂಬ ತಮ್ಮ ಕಂಪನಿಯ ಮೂಲಕ ಬಿಲ್‌'ಗೇಟ್ಸ್ ಹೂಡಿಕೆಗೆ ನಿರ್ಧರಿಸಿದ್ದಾರೆ. ಈ ಸ್ಮಾರ್ಟ್ ಸಿಟಿಯಲ್ಲಿ ಮನೆಗಳು, ಶಾಲೆ, ಅಂಗಡಿಗಳು ಸೇರಿ ಎಲ್ಲ ಸೌಲಭ್ಯವೂ ಇರಲಿವೆ. 80 ಸಾವಿರ ಮನೆಗಳು ಹಾಗೂ 1.82 ಲಕ್ಷ ಜನಸಂಖ್ಯೆಗೆ ಆತಿಥ್ಯ ವಹಿಸುವ ಉದ್ದೇಶವಿದೆ.

25 ಸಾವಿರ ಎಕರೆ ಜಾಗವನ್ನು ಕಚೇರಿ, ವಾಣಿಜ್ಯ, ಚಿಲ್ಲರೆ ವಹಿವಾಟು ಮತ್ತು 470 ಎಕರೆಯನ್ನು ಸಾರ್ವಜನಿಕ ಶಾಲೆಗಳಿಗೆ ಮೀಸಲಿಡಲಾಗುತ್ತದೆ. ಸ್ವಯಂಚಾಲಿತ ಕಾರುಗಳು, ಒಂದರ ಜತೆ ಪರಸ್ಪರ ಸಂಪರ್ಕ ಸಾಧಿಸಿ, ಸಂಚಾರ ದಟ್ಟಣೆ ಕಡಿಮೆಗೊಳಿಸುವ ಟ್ರಾಫಿಕ್ ಸಿಗ್ನಲ್'ಗಳು, ಹೈಸ್ಪೀಡರ್ ಇಂಟರ್ನೆಟ್ ಸಹಿತ ವಾತಾವರಣವನ್ನು ಒದಗಿಸಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡೆವಿಲ್ ಇನ್ ಟ್ರಬಲ್: ನಟ ದರ್ಶನ್‌ನಿಂದ ಒಂದು ಗನ್ ಕಿತ್ತುಕೊಂಡರೂ ಮತ್ತೊಂದು .22mm ರೈಫಲ್ ಮರೆತ ಪೊಲೀಸರು
Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!