500, 1000 ರೂಪಾಯಿ ನೋಟ್ ಬ್ಯಾನ್: ಪ್ರಧಾನಿ ಮೋದಿಯನ್ನು ಬೆಂಬಲಿಸಿದ ಬಿಹಾರ್ ಸಿಎಂ

By Suvarna Web DeskFirst Published Nov 27, 2016, 10:40 AM IST
Highlights

ಜೆಡಿಯು ಮುಖಂಡ ಹಾಗೂ ಬಿಹಾರ್​​ ಸಿಎಂ ನಿತೀಶ್ ಕುಮಾರ್ ಮಾತ್ರ ಪ್ರಧಾನಿ ಮೋದಿಗೆ ಬೆಂಬಲ ಸೂಚಿಸಿದ್ದಾರೆ. ಇವತ್ತು ಪಕ್ಷದ ಸಭೆ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ನಿತೀಶ್​​ಕುಮಾರ್​​ ಪ್ರಧಾನಿ ನೋಟ್​​ಬ್ಯಾನ್​ ಮಾಡಿದ್ದರಿಂದ ಕಪ್ಪು ಹಣ ತಡೆಯಲು ಸಾಧ್ಯವಾಗುತ್ತದೆ, ಹಾಗಾಗಿ ನಾಳೆ ನಡೆಯುವ ಬಂದ್​ಗೆ ನನ್ನ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಿಹಾರ(ನ.27): 500, 1000 ರೂಪಾಯಿ ನೋಟ್​ ಬ್ಯಾನ್​ ಮಾಡಿರುವುದು ಖಂಡಿಸಿ ನಾಳೆ ವಿಪಕ್ಷಗಳು ಭಾರತ್​​ ಬಂದ್​ಗೆ ಕರೆ ನೀಡಿವೆ. ಬಂದ್​ನಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್  ಸೇರಿದಂತೆ ಹಲವು ವಿಪಕ್ಷ ನಾಯಕರು ಬಂದ್​ಗೆ ಬೆಂಬಲ ಸೂಚಿಸಿದ್ದಾರೆ.

ಆದರೆ ಜೆಡಿಯು ಮುಖಂಡ ಹಾಗೂ ಬಿಹಾರ್​​ ಸಿಎಂ ನಿತೀಶ್ ಕುಮಾರ್ ಮಾತ್ರ ಪ್ರಧಾನಿ ಮೋದಿಗೆ ಬೆಂಬಲ ಸೂಚಿಸಿದ್ದಾರೆ. ಇವತ್ತು ಪಕ್ಷದ ಸಭೆ ಬಳಿಕ ಮಾಧ್ಯಮಗಳಿಗೆ ಮಾತನಾಡಿದ ನಿತೀಶ್​​ಕುಮಾರ್​​ ಪ್ರಧಾನಿ ನೋಟ್​​ಬ್ಯಾನ್​ ಮಾಡಿದ್ದರಿಂದ ಕಪ್ಪು ಹಣ ತಡೆಯಲು ಸಾಧ್ಯವಾಗುತ್ತದೆ, ಹಾಗಾಗಿ ನಾಳೆ ನಡೆಯುವ ಬಂದ್​ಗೆ ನನ್ನ ಬೆಂಬಲ ಇಲ್ಲ ಎಂದು ಸ್ಪಷ್ಟಪಡಿಸಿದರು.

click me!