ಶಂಕಿತ ಉಗ್ರರ ಜಾಲ ಬೇಧಿಸಿದ ಪಂಜಾಬ್ ಪೊಲೀಸ್

By Web DeskFirst Published Oct 10, 2018, 8:12 PM IST
Highlights

ಬಂಧಿತರಲ್ಲಿ ಮೂವರು ಕಾಶ್ಮೀರ ಉಗ್ರರ ಮೂಲದವರಾಗಿದ್ದು ಜಲಂಧರ್'ನ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹಾಸ್ಟೆಲ್ ನಲ್ಲಿ ವಾಸವಿದ್ದ ಇವರನ್ನು ಇಂದು ಮುಂಜಾನೆ 90 ಮಂದಿಯಷ್ಟಿದ್ದ ಪೊಲೀಸರ ಪಡೆ ವಶಕ್ಕೆ ಪಡೆದಿದೆ.

ನವದೆಹಲಿ[ಅ.10]: ಪಂಜಾಬ್ ಪೊಲೀಸ್ ಹಾಗೂ ಜಮ್ಮು ಕಾಶ್ಮೀರದ ವಿಶೇಷ ಕಾರ್ಯಪಡೆ ತಮ್ಮ ಜಂಟಿ ಕಾರ್ಯಾಚರಣೆಯಲ್ಲಿ ಶಂಕಿತ ಐವರು ಉಗ್ರರನ್ನು ಬಂಧಿಸಿ ಅವರಿಂದ ಎಕೆ 47 ಬಂದೂಕುಗಳು ಹಾಗೂ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದೆ.

ಬಂಧಿತರಲ್ಲಿ ಮೂವರು ಕಾಶ್ಮೀರ ಉಗ್ರರ ಮೂಲದವರಾಗಿದ್ದು ಜಲಂಧರ್'ನ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹಾಸ್ಟೆಲ್'ನಲ್ಲಿ ವಾಸವಿದ್ದ ಇವರನ್ನು ಇಂದು ಮುಂಜಾನೆ 90 ಮಂದಿಯಷ್ಟಿದ್ದ ಪೊಲೀಸರ ಪಡೆ ವಶಕ್ಕೆ ಪಡೆದಿದೆ. ಬಂಧಿತರ ವಿರುದ್ಧ ಶಸ್ತ್ರಾಸ್ತ್ರ ಕಾಯಿದೆ,ಸ್ಫೋಟಕ ಕಾಯಿದೆ ಹಾಗೂ ಕಾನೂನುಬಾಹಿರ ತಡೆಗಟ್ಟುವಿಕೆ ಕಾಯಿದೆ ಅನ್ವಯ ಪ್ರಕರಣಗಳನ್ನು ದಾಖಲಿಸಲಾಗಿದೆ.

ವಶಪಡಿಸಿಕೊಂಡ ಸ್ಫೋಟಕ ಸಾಮಗ್ರಿಗಳು ಪಾಕಿಸ್ತಾನದ ಐಎಸ್ಐನಿಂದ ತಯಾರಿತವಾಗಿದ್ದು ಶಂಕಿತರು ಇವುಗಳನ್ನು ಭಾರತದ ಗಡಿಗಳ ಮೂಲಕ ಕೊಂಡೊಯ್ಯಲು ಯತ್ನಿಸುತ್ತಿದ್ದರು ಎಂದು ಡಿಜಿಪಿ ತಿಳಿಸಿದ್ದಾರೆ.

ಇತ್ತೀಚಿಗಷ್ಟೆ ಪಂಜಾಬಿನ ಪಾಟಿಯಾಲದಲ್ಲಿ ಸ್ಥಳೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಗಾಜಿ ಅಹಮದ್ ಮಲ್ಲಿಕ್ ಎಂಬ ಶಂಕಿತನೊಬ್ಬನನ್ನು ಬಂಧಿಸಿ ಜಮ್ಮು ಮತ್ತು ಕಾಶ್ಮೀರದ ಪೊಲೀಸರ ವಶಕ್ಕೆ ಒಪ್ಪಿಸಿದ್ದರು.

 

click me!