ಹುದ್ದೆಗೆ ರಾಜೀನಾಮೆ ನೀಡಿದ ಸಂಸ್ಕೃತ ಕಲಿಸಬಾರದೆ ಎಂದ ಮುಸ್ಲಿಂ ಪ್ರೊಫೆಸರ್

By Suvarna NewsFirst Published Dec 10, 2019, 11:19 PM IST
Highlights

ಮುಸ್ಲಿಂ ಆದ ಕಾರಣಕ್ಕೆ ಸಂಸ್ಕೃತ ಕಲಿಸಬಾರದೆ?/ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಫ್ರೊಫೆಸರ್ ಫಿರೋಜ್ ಖಾನ್ ರಾಜೀನಾಮೆ/ ಎಬಿವಿಪಿ ಮತ್ತು ವಿದ್ಯಾರ್ಥಿಗಳ ನಿರಂತರ ಪ್ರತಿಭಟನೆ

ವಾರಣಾಸಿ(ಡಿ. 10)  ನಾನೊಬ್ಬ ಮುಸ್ಲಿಂ ಆದ ಕಾರಣಕ್ಕೆ ಸಂಸ್ಕೃತ ಕಲಿಸಬಾರದೆ ಎಂದು ಪ್ರಶ್ನೆ ಮಾಡಿದ್ದ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಫ್ರೊಫೆಸರ್ ಫಿರೋಜ್ ಖಾನ್ ರಾಜೀನಾಮೆ ನೀಡಿದ್ದಾರೆ. ಕಲಾ ವಿಭಾಗಕ್ಕೆ ಖಾನ್ ಶಿಫ್ಟ್ ಆಗಿದ್ದಾರೆ.

ಬನಾರಸ್ ಹಿಂದು ವಿಶ್ವವಿದ್ಯಾಲಯದ ಸಂಸ್ಕೃತ ವಿದ್ಯಾ ಧರ್ಮ ವಿಜ್ಞಾನ್​ ಕಾಲೇಜಿನ ಸಂಸ್ಕೃತ ವಿಭಾಗಕ್ಕೆ ಮುಸ್ಲಿಂ ​ ಪ್ರೊಫೆಸರ್ ನೇಮಕ ಮಾಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಈ ವಿದ್ಯಾರ್ಥಿಗಳ ಪ್ರತಿಭಟನೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಬೆಂಬಲ ನೀಡಿತ್ತು.

ಮುಸ್ಲಿಂ ಪ್ರಾಧ್ಯಾಪಕನ ಸಂಸ್ಕೃತ ಇತಿಹಾಸ ಕೇಳಿ ತಿಳಿದುಕೊಳ್ಳಿ

ಡಾ. ಫಿರೋಜ್​ ಖಾನ್​ ಅವರನ್ನು ಸಂಸ್ಕೃತ ವಿಭಾಗಕ್ಕೆ ಅಸಿಸ್ಟೆಂಟ್​ ಪ್ರೊಫೆಸರ್​ ಆಗಿ ನವಂಬರ್​ 5ರಂದು ನೇಮಕ ಮಾಡಲಾಗಿತ್ತು.  ಆದರೆ ಸಂಸ್ಕೃತ ವನ್ನು ಹಿಂದೂ ಪ್ರೊಫೆಸರ್ ಮಾತ್ರ ಹೇಳಿಕೊಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.

ಆಡಳಿತ ಮಂಡಳಿ ಖಾನ್ ಪರವಾಗಿ ನಿಂತುಕೊಂಡಿದ್ದರೂ ಪಾಠ-ಪ್ರವಚನಕ್ಕೆ ಬ್ರೇಕ್ ಬಿದ್ದಿತ್ತು.ಪ್ರತಿಕ್ರಿಯೆ ನೀಡಿದ್ದ ಯುನಿವರ್ಸಿಟಿಯ ವಕ್ತಾರ ರಾಜೇಶ್ ಸಿಂಗ್, ಯಾರೂ ಏನೇ ಹೇಳಲಿ, ಈ ಪೋಸ್ಟ್ ಗೆ ಖಾನ್ ಗಿಂತ ಅತ್ಯುತ್ತಮ ವ್ಯಕ್ತಿ ಸಿಗಲು ಸಾಧ್ಯವೇ ಇಲ್ಲ. ತರಬೇತಿ ಅಥವಾ ಶಿಕ್ಷಣ ನೀಡುವಲ್ಲಿ ಜಾತಿ-ಮತ-ಲಿಂಗಗಳ ತಾರತಮ್ಯ ಇಲ್ಲ. ನಾವು ಕಾನೂನು ಸಲಹೆ ಪಡೆದುಕೊಂಡು ಮುಂದೆ ಹೆಜ್ಜೆ ಇಡುತ್ತೇವೆ ಎಂದು ಹೇಳಿದ್ದರು. ಆದರೆ ಈಗ ಎಬಿವಿಪಿ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ ಕಾರಣಕ್ಕೆ ಖಾನ್ ರಾಜೀನಾಮೆ ನೀಡಿದ್ದಾರೆ.

click me!