ಸ್ಥಳದಲ್ಲೇ ಉದ್ಯೋಗ : ಮೋದಿ ಸರ್ಕಾರದಿಂದ ಹೊಸ ಯೋಜನೆ

Published : Apr 28, 2018, 03:26 PM IST
ಸ್ಥಳದಲ್ಲೇ ಉದ್ಯೋಗ : ಮೋದಿ ಸರ್ಕಾರದಿಂದ ಹೊಸ ಯೋಜನೆ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ  ಹೊಸದಾದ ಯೋಜನೆಯೊಂದನ್ನು ಆರಂಭ ಮಾಡಲು ಸಜ್ಜುಗೊಂಡಿದೆ. ಶೀಘ್ರ ರಥ ಯಾತ್ರೆ ಯನ್ನು ಕೖಗೊಳ್ಳಲಿರುವ ಕೇಂದ್ರ ಸರ್ಕಾರ ಸ್ಥಳದಲ್ಲಿ ಯುವ ಜನತೆಗೆ ಉದ್ಯೋಗವನ್ನು ಕಲ್ಪಿಸಿ ಸಬಲೀಕರಣ ಮಾಡುವ ಯತ್ನದಲ್ಲಿದೆ.  

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರ್ಕಾರ  ಹೊಸದಾದ ಯೋಜನೆಯೊಂದನ್ನು ಆರಂಭ ಮಾಡಲು ಸಜ್ಜುಗೊಂಡಿದೆ. ಶೀಘ್ರ ರಥ ಯಾತ್ರೆ ಯನ್ನು ಕೖಗೊಳ್ಳಲಿರುವ ಕೇಂದ್ರ ಸರ್ಕಾರ ಸ್ಥಳದಲ್ಲಿ ಯುವ ಜನತೆಗೆ ಉದ್ಯೋಗವನ್ನು ಕಲ್ಪಿಸಿ ಸಬಲೀಕರಣ ಮಾಡುವ ಯತ್ನದಲ್ಲಿದೆ.  
 
ಯುವಜನತೆಯ ಸಬಲೀಕರಣದ ಉದ್ದೇಶದಿಂದ ಇಂತಹ ರಥಯಾತ್ರೆ ಕೈಗೊಳ್ಳಲಾಗುತ್ತಿದೆ. ಈ ರಥಯಾತ್ರೆಗೆ ಕೌಶಲ್ಯಾಭಿವೃದ್ಧಿ ಸಚಿವರು ಚಾಲನೆ ನೀಡಲಿದ್ದಾರೆ.
 
ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಕೌಶಲ ರಥ ಯಾತ್ರೆ ನಡೆಸಲು ಅಲ್ಲಿನ ಮುಖ್ಯಮಂತ್ರಿಗಳೂ ಕೂಡ ಅನುಮೋದನೆ ನೀಡಿದ್ದು, ಶೀಘ್ರ ರಾಜಸ್ಥಾನ, ಮಧ್ಯ ಪ್ರದೇಶ, ಚತ್ತೀಸ್’ಗಢದಲ್ಲಿ ಈ ರಥಯಾತ್ರೆ ಸಾಗಲಿದೆ. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಯಲ್ಲಿ ಹಿಂದುಳಿದಿದೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸಿದ ನಿಟ್ಟಿನಲ್ಲಿ ಉದ್ಯೋಗ ಸೃಷ್ಟಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಇನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಕೂಡ ಇದಕ್ಕೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. 

ಕೌಶಲ್ಯಾಭಿವೃದ್ಧಿ ಸಚಿವರಾದ ಅನಂತ್ ಕುಮಾರ್ ಹೆಗಡೆ ಯುವ ಜನತೆಯ ಕೌಶಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಇದರ ಪ್ರಮುಖ ಉದ್ದೇಶ ಉದ್ಯೋಗ ಒದಗಿಸುವುದಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಧ್ಯೆ ಖುರ್ಚಿ ಕಾದಾಟ ಇಲ್ಲ: ಬಸವರಾಜ ರಾಯರೆಡ್ಡಿ
ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!