ಇನ್ಮುಂದೆ ನಾನು ಮಾತನಾಡುವುದಿಲ್ಲ : ಭಾರತಿ ವಿಷ್ಣುವರ್ಧನ್

Published : Dec 31, 2018, 12:49 PM IST
ಇನ್ಮುಂದೆ ನಾನು ಮಾತನಾಡುವುದಿಲ್ಲ : ಭಾರತಿ ವಿಷ್ಣುವರ್ಧನ್

ಸಾರಾಂಶ

ನಾನು ಇನ್ನುಮುಂದೆ ಮಾತನಾಡುವುದಿಲ್ಲ ಎಂದು ವಿಷ್ಣುವರ್ಧನ್ ಅವರ ಪತ್ನಿ ನಟಿ ಭಾರತಿ ಹೇಳಿದ್ದಾರೆ. ವಿಷ್ಣು ಸ್ಮಾರಕ ವಿಚಾರಕ್ಕೆ ಸಂಬಂಧಿಸಿದಂತೆ ಪದೇ ಪದೇ ಒತ್ತಾಯ ಮಾಡುತ್ತಿದ್ದೇನೆ ಅನ್ನುತ್ತಾರೆ. ಆದರೆ ಈ ಬಗ್ಗೆ ಇನ್ನುಮುಂದೆ ಮಾತನಾಡುವುದಿಲ್ಲ ಎಂದಿದ್ದಾರೆ. 

ಬೆಂಗಳೂರು :  ಒಂದೆಡೆ ನಟ ವಿಷ್ಣುವರ್ಧನ್ ಅಭಿಮಾನಿ ಗಳು ಬೆಂಗಳೂರಿನಲ್ಲಿ ವಿಷ್ಣು ಸ್ಮಾರಕ ಆಗಬೇಕು ಎಂದು ಒತ್ತಾಯಿಸುತ್ತಿದ್ದರೆ, ಇನ್ನೊದೆಡೆ ಅವರ ಅಳಿಯ, ನಟ ಅನಿರುದ್ಧ ಅವರು, ‘ಮೈಸೂರಿನಲ್ಲಿಯೇ ಡಾ. ವಿಷ್ಣು ಸ್ಮಾರಕ ನಿರ್ಮಾಣ ಆಗಲಿದೆ, ಅದರಲ್ಲಿ ಎರಡು ಮಾತಿಲ್ಲ. ಸ್ಮಾರಕ ನಿ ರ್ಮಾಣ ಕಾಮ ಗಾರಿ ಆರಂಭಿಸುವ ಪ್ರಯತ್ನವನ್ನು ಜನವರಿಯಲ್ಲೇ ಮಾಡಲಿದ್ದೇವೆ’ ಎಂದು ಹೇಳಿದ್ದಾರೆ. 

ಇನ್ನು ಬಗ್ಗೆ  ವಿಷ್ಣು ಸ್ಮಾರಕ ನಿರ್ಮಾಣದ ಕುರಿತು ಪದೇ ಪದೇ ಒತ್ತಾಯ ಮಾಡುತ್ತಿದ್ದೇನೆ ಅನ್ನುತ್ತಾರೆ, ಅದರ ಅಗತ್ಯತೆಯೂ ಇತ್ತು. ಒಂಬತ್ತು ವರ್ಷವಾದರೂ ಒಬ್ಬ ಹಿರಿಯ ನಟನ ಸ್ಮಾರಕವಾಗಿಲ್ಲ ಎಂದರೆ ಬೇಸರವಾಗುತ್ತದೆ. ಈಗಲಾದರೂ ಕಾಮಗಾರಿ ಕೈಗೆತ್ತಿಕೊಳ್ಳಲಿ. 

ಇನ್ನುಮುಂದೆ ಕಾಮಗಾರಿ ಅಥವಾ ಸ್ಮಾರಕ ನಿರ್ಮಾಣದ ಬಗ್ಗೆ ಮಾತನಾಡದಿರಲು ನಿರ್ಧರಿಸಿದ್ದೇನೆ. ಏಕೆಂದರೆ ಹಲವು ಬಾರಿ ಹಲವು ಸರ್ಕಾರಗಳಿಗೆ ಮನವಿ ಮಾಡಿ ಸಾಕಾಗಿದೆ ಎಂದು ಭಾರತಿ ವಿಷ್ಣುವರ್ಧನ್ ಅವರು ಬೇಸರ ವ್ಯಕ್ತಪಡಿಸಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ