ಕೆಲವೊಮ್ಮೆ ನೀತಿ ಕತೆಗಳು ನಿಜವಾಗುತ್ತದೆ. ಬೆಂಗಳೂರಿನಲ್ಲಿಯೇ ಅಂಥದ್ದೊಂದು ನೀತಿ ಕತೆಯ ಉದಾಹರಣೆ ನಿಮ್ಮ ಮುಂದೆ ಇದೆ. ಇದು ಅತ್ತೆ-ಸೊಸೆಯ ಸ್ಟೋರಿ.. ಸೊಸೆ ಮಾಡಿದ ಕೆಲಸಕ್ಕೊಂದು ಶ್ಲಾಘನೆ ಕೊಡಲೇಬೇಕು..
ಬೆಂಗಳೂರು[ಜು. 24] ಅಪ್ಪ ಮಗುವಿಗೊಂದು ಮಾತು ನೀಡುತ್ತಾನೆ, ನೀನು ಏನೂ ಹೇಳಿದರೂ ನಡೆಸಿಕೊಡುತ್ತೇನೆ ಎಂದು ಹೇಳುತ್ತಾರೆ. ಇದಾದ ಕೆಲವೇ ದಿನದಲ್ಲಿ ಮಗು ತನ್ನ ತಂದೆಯ ಬಳಿ ಹಠಕ್ಕೆ ನಿಲ್ಲುತ್ತದೆ. ಕೂಡಲೇ ನನ್ನನ್ನು ಕ್ಷೌರಿಕನ ಅಂಗಡಿಗೆ ಕರೆದುಕೊಂಡು ಹೋಗಿ ತಲೆ ಬೋಳಿಸಿಕೊಂಡು ಬರಬೇಕು ಎಂದು ದುಂಬಾಲು ಬೀಳುತ್ತಾಳೆ .
ತಂದೆಗೆ ಏನೂ ತೋಚದಂತಾಗುತ್ತದೆ. ಆದರೆ ಅಪ್ಪ ಹೇಳಿದ ಮಾತನ್ನು ಉಳಿಸಿಕೊಳ್ಳಲು ಮಗಳ ತಲೆ ಬೋಳಿಸುತ್ತಾರೆ. ಇದಾದ ಮೇಲೆ ಮಗುವನ್ನು ಸ್ಕೂಲಿಗೆ ಕರೆದುಕೊಂಡು ಹೋಗುತ್ತಾರೆ., ಈ ಮಗು ವಾಹನ ಇಳಿಯುತ್ತಿದ್ದಂತೆ ಆ ಕಡೆಯಿಂದ ತಲೆ ಬೋಳಿಸಿದ ಇನ್ನೊಂದು ಮಗು ಮತ್ತೊಂದು ವಾಹನದಿಂದ ಇಳಿಯುತ್ತದೆ. ಇಬ್ಬರೂ ಒಬ್ಬರ ಹೆಗಲ ಮೇಲೆ ಕೈಹಾಕಿಕೊಂಡು ಸ್ಕೂಲಿಗೆ ತೆರಳುತ್ತಾರೆ.
undefined
ತಂದೆಗೆ ಒಂದು ಕ್ಷಣಕ್ಕೆ ಏನೂ ಮಾಡಬೇಕು ಎಂಬುದೇ ಗೊತ್ತಾಗಲ್ಲ. ಮಗು ತನ್ನ ಸ್ನೇಹಿತನಿಗಾಗಿ ತಲೆ ಬೋಳಿಸಿಕೊಂಡಿತ್ತು. ಕ್ಯಾನ್ಸರ್ ನ ಕಿಮೋಥೆರಪಿ ಪರಿಣಾಮ ಮಗುವೊಂದು ತನ್ನ ತಲೆಗೂದಲು ಕಳೆದುಕೊಂಡಿತ್ತು. ಆ ಮಗುವನ್ನು ಶಾಲೆಯಲ್ಲಿ ಕೆಲವರು ಅಣಕಿಸುತ್ತಿದ್ದರು. ಸ್ನೇಹತನ ನೆರವಿಗೆ ನಿಲ್ಲಲು.. ಅವನಿಗೆ ಮಾನಸಿಕ ಶಕ್ತಿ ತುಂಬಲು ಬೇರೆಯವರು ಯಾರೂ ಅಣಕಿಸಬಾರದು ಎಂಬ ಕಾರಣಕ್ಕೆ ಈ ಮಗುವೂ ತಲೆ ಬೋಳಿಸಿಕೊಂಡಿತ್ತು. ಈಗ ಅಂಥದ್ದೆ ಒಂದು ಸಂದರ್ಭ ಬೆಂಗಳೂರಿನಲ್ಲಾಗಿದೆ. ಇಲ್ಲಿ ಮಕ್ಕಳಲ್ಲ ಬದಲಾಗಿ ಅತ್ತೆ-ಸೊಸೆ.
ಅತ್ತೆಗೆ ಶಕ್ತಿ ತುಂಬಲು ಸೊಸೆ ತಲೆ ಬೋಳಿಸಿಕೊಂಡಿದ್ದಾರೆ. ಬೆಂಗಳೂರು ಮೂಲದ ನಮಿತಾ ವರ್ಮಾ ರಾಜೇಶ್ ಎಂಬ ಮಹಿಳೆ ತಲೆ ಬೋಳಿಸಿಕೊಂಡಿರುವ ತನ್ನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಮಹಿಳೆಯರಿಗೆ ಸುಂದರವಾಗಿ ಕಾಣಬೇಕೆಂಬ ಹೆಬ್ಬಯಕೆ ಇರುತ್ತದೆ. ಆದರೆ ಇವರು ತನ್ನ ತಲೆ ಕೂದಲನ್ನೇ ಅತ್ತೆಗಾಗಿ ತ್ಯಾಗ ಮಾಡಿದ್ದಾರೆ.
ಕ್ಯಾನ್ಸರ್ನಿಂದ ಬಳಲುವವರು ಕೀಮೋಥೆರಪಿಯಿಂದ ಕೂದಲು ಕಳೆದುಕೊಂಡಾಗ ಅನುಭವಿಸುವ ಸಂಕಟ ಯಾರಿಗೂ ಬೇಡ. ನಾವು ನೀಡುವ ಕೂದಲಿಂದ ಮಾಡುವ ವಿಗ್ ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸಬಲ್ಲದು ಎಂದು ನಮಿತಾ ವರ್ಮಾ ಮನವಿ ಮಾಡಿದ್ದಾರೆ.
ಆನ್ ಲೈನ್ ಮಾರ್ಕೆಟಿಂಗ್ ಕಂಪನಿಯೊಂದರ ಉದ್ಯೋಗಿಯಾಗಿರುವ ವರ್ಮಾ ಅತ್ತೆಗೆ ನೈತಿಕ ಬಲ ತುಂಬಿದ್ದಾರೆ. ನಿಮ್ಮ ಕೂದಲನ್ನು ದಾನ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಎಲ್ಲ ಅತ್ತೆ ಸೊಸೆಯರು ಇಂಥದ್ದೇ ಹೊಂದಾಣಿಕೆಯಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು, ಶಕ್ತಿ ತುಂಬಿಕೊಳ್ಳುತ್ತ ಬದುಕು ಸಾಗಿಸಿದೆರೆ ಎಷ್ಟು ಚೆನ್ನ ಅಲ್ಲವೇ?