
ಬೆಂಗಳೂರು (ಏ. 04): ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ಬೆಂಗಳೂರು ವಿವಿಯ ಎಲ್ಲಾ ವಿಭಾಗಗಳನ್ನ ಬಂದ್ ಮಾಡಿ ದಲಿತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಕ್ಲಾಸ್ ಬಂದ್ ಮಾಡುವ ವಿಚಾರದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದಿದೆ.
ಎಚ್ಚರಿಕೆಯ ದ್ಯೋತಕವಾಗಿ ಈ ಪ್ರತಿಭಟನೆ ನಡೆಸಲಾಗುತ್ತಿದೆ. 47 ಸಾವಿರ ದಲಿತರಿಗೆ ದೇಶದಲ್ಲಿ ದೌರ್ಜನ್ಯವಾಗಿದೆ. ರಾಷ್ಟ್ರವ್ಯಾಪಿ ನಾವು ಪ್ರತಿಭಟನೆ ಮಾತನಾಡಬೇಕಾದ ಪರಿಸ್ಥಿತಿ ಬಂದಿದೆ. ಪ್ರತಿಯೊಬ್ಬರಿಗೂ ಸಂವಿಧಾನ ರಕ್ಷಾ ಕವಚವಾಗಿತ್ತು. 1989 ರ ಕಾಯ್ದೆಯನ್ನು ಉಳಿಸಿಕೊಳ್ಳುವ ಬದಲು ಅದನ್ನು ಕುಂದಿಸುವ ಕೆಲಸ ಮಾಡಲಾಗುತ್ತಿದೆ. ಕಾಯ್ದೆ ದುರ್ಬಳಕೆ ಆದರೆ ಕ್ರಮ ಕೈಗೊಳ್ಳುವ ಬದಲು ಕಾಯ್ದೆಯನ್ನೇ ದುರ್ಬಲಗೊಳಿಸುವುದು ಸರಿಯಲ್ಲ. ದೂರು ನೀಡಿದಾಗ ಅದನ್ನು ಪರಿಗಣಿಸದೇ ಕ್ರಮ ಕೈಗೊಳ್ಳುವ ಬದಲು ತನಿಖೆ ಮಾಡಬೇಕು ಎನ್ನುವುದು ನಿಜಕ್ಕೂ ವಿಪರ್ಯಾಸ. ಏಳು ಲಕ್ಷ ಹಳ್ಳಿಗಳಲ್ಲಿರುವ ದಲಿತರಿಗೆ ಈ ನಿಟ್ಟಿನಲ್ಲಿ ಅನ್ಯಾಯವಾಗುತ್ತೆ. ಷೋಷಣೆಯನ್ನು ಪ್ರಶ್ನಿಸುವುದನ್ನೇ ನಾವು ಮರೆಯಬೇಕಾಗುತ್ತೆ. ಕಾನೂನನ್ನು ರದ್ದು ಮಾಡುವ ಹುನ್ನಾರ ಇದು. ರಾಜ್ಯದ 21 ವಿವಿಗಳಲ್ಲೂ ನಾಳೆಯಿಂದ ಬಂದ್ ನಡೆಸಲಾಗುವುದು. 5 ದಿನಗಳ ಕಾಲ ಪ್ರತಿಭಟನೆ ನಡೆಯಲಿದೆ. ಕುಲಪತಿಗಳ ಒಪ್ಪಿಗೆ ಇಲ್ಲದೇ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ದೂರಶಿಕ್ಷಣ ನಿರ್ದೇಶಕ ಮೈಲಾರಪ್ಪ ಹೇಳಿದ್ದಾರೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.