ಬಯಲಾಯ್ತು ಬೆಂಗಳೂರು ವಿವಿ ಕರ್ಮಕಾಂಡ; ಪರೀಕ್ಷಾ ವಿಶೇಷಾಧಿಕಾರಿ ರಾಜಿನಾಮೆ

By Suvarna Web DeskFirst Published Dec 29, 2017, 9:35 AM IST
Highlights

ಅದು ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಸ್ಥಳ. ಅಲ್ಲಿ ಕೆಲಸ ಮಾಡಲು ನುರಿತ ಸಿಬ್ಬಂದಿ ಇರಬೇಕು.ಆಲ್ಲದೆ ವಿವಿಯ ನಿಯಮಗಳ ಅಡಿಯಲ್ಲಿಯೇ ಕೆಲಸ ನಿರ್ವಹಿಸಬೇಕು. ಆದ್ರೆ ಇತ್ತೀಚಿಗೆ ಪರೀಕ್ಷಾ ವಿಭಾಗದ ರಿಜಿಸ್ಟ್ರಾರ್ ಕಾರ್ಯ ವೈಖರಿಗೆ ಬೇಸತ್ತು ವಿಶೇಷಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡಿರುವ ಪತ್ರದಲ್ಲಿ ವಿವಿಯ ಪರೀಕ್ಷಾ ವಿಭಾಗದ ಕಾರ್ಯವೈಖರಿ ಬಗ್ಗೆ ಸ್ಫೋಟಕ ಮಾಹಿತಿಯನ್ನ ಬಿಚ್ಚಿ ಇಟ್ಟಿದ್ದಾರೆ. ಈ  ಎಕ್ಸ್'ಕ್ಲೂಸಿವ್   ಮಾಹಿತಿಯನ್ನ ಸುವರ್ಣ ನ್ಯೂಸ್ ಬಹಿರಂಗಗೊಳಿಸುತ್ತಿದೆ.

ಬೆಂಗಳೂರು (ಡಿ.29): ಅದು ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ಸ್ಥಳ. ಅಲ್ಲಿ ಕೆಲಸ ಮಾಡಲು ನುರಿತ ಸಿಬ್ಬಂದಿ ಇರಬೇಕು.ಆಲ್ಲದೆ ವಿವಿಯ ನಿಯಮಗಳ ಅಡಿಯಲ್ಲಿಯೇ ಕೆಲಸ ನಿರ್ವಹಿಸಬೇಕು. ಆದ್ರೆ ಇತ್ತೀಚಿಗೆ ಪರೀಕ್ಷಾ ವಿಭಾಗದ ರಿಜಿಸ್ಟ್ರಾರ್ ಕಾರ್ಯ ವೈಖರಿಗೆ ಬೇಸತ್ತು ವಿಶೇಷಾಧಿಕಾರಿಗಳು ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡಿರುವ ಪತ್ರದಲ್ಲಿ ವಿವಿಯ ಪರೀಕ್ಷಾ ವಿಭಾಗದ ಕಾರ್ಯವೈಖರಿ ಬಗ್ಗೆ ಸ್ಫೋಟಕ ಮಾಹಿತಿಯನ್ನ ಬಿಚ್ಚಿ ಇಟ್ಟಿದ್ದಾರೆ. ಈ  ಎಕ್ಸ್'ಕ್ಲೂಸಿವ್   ಮಾಹಿತಿಯನ್ನ ಸುವರ್ಣ ನ್ಯೂಸ್ ಬಹಿರಂಗಗೊಳಿಸುತ್ತಿದೆ.

ಬೆಂಗಳೂರು ವಿಶ್ವವಿದ್ಯಾಲಯ ಪರೀಕ್ಷಾ ವಿಭಾಗದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಸಾಬೀತಾಗಿದೆ. ಒಂದು ಕಡೆ ಪದವಿ ಉಪನ್ಯಾಸಕರು ಮೌಲ್ಯಮಾಪನ ಬಹಿಷ್ಕಾರ ಮಾಡಿದ್ದಾರೆ.ಇದ್ರ ಮಧ್ಯೆ ಪರೀಕ್ಷಾ ವಿಭಾಗದ ಡಾ.ಸಿ.ಎಸ್.ಕರಿಗಾರ್ ವಿಶೇಷಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ..ತಮ್ಮ ರಾಜೀನಾಮೆಗೆ ಪರೀಕ್ಷಾ ವಿಭಾಗದ ಲೋಪದೋಷ ಕಾರಣ ನೀಡಿದ್ದಾರೆ..ಕಳೆದೊಂದು ವರ್ಷದಿಂದ ಪರೀಕ್ಷಾ ವಿಭಾಗದ ವಿಶೇಷಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಸಿ.ಎಸ್ ಕರಿಗಾರ್ ರಿಜಿಸ್ಟ್ರಾರ್ ತೆಗೆದುಕೊಳ್ಳುವ ಕೆಲ ನಿರ್ಧಾರಗಳಿಗೆ ಬೇಸತ್ತು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ರಾಜೀನಾಮೆಗೆ ಪ್ರಮುಖ ಕಾರಣ ನೀಡಿದ ಡಾ.ಸಿ.ಎಸ್.ಕರಿಗಾರ್

1.ವಿದ್ಯಾರ್ಥಿಗಳಿಗೆ ಲೋಪದೋಷ ಹೊಂದಿರುವ ಅಂಕಪಟ್ಟಿ ವಿತರಣೆ

2.ಸಿಜಿಪಿಎ ತಪ್ಪು ಅಂಕಗಳ ಕ್ರೋಢಿಕರಣ

3.ಅಂಕಗಳ ತಪ್ಪು ಲೆಕ್ಕಾಚಾರ

4.ಮರು ಮೌಲ್ಯಮಾಪನ ನಂತರ ವಿದ್ಯಾರ್ಥಿಗಳಿಗೆ ತಪ್ಪು ಅಂಕಪಟ್ಟಿಗಳ ವಿತರಣೆ

5.ವಿದ್ಯಾರ್ಥಿಗಳ ತಪ್ಪು ಅಂಕಪಟ್ಟಿಗಳಿಂದ ಸ್ನಾತಕೋತ್ತರ ಪದವಿಗೆ ವಿದ್ಯಾರ್ಥಿಗಳ ಪ್ರವೇಶ

6.ಪರೀಕ್ಷಾ ವಿಭಾಗದ ಗಣಕ ಯಂತ್ರ ನಿರ್ವಹಿಸುವ ಕೆಲಸಗಾರರ ನಿರ್ಲಕ್ಷ್ಯ.

7.ಕಾಲೇಜುಗಳಿಂದ ಸಲ್ಲಿಸುವ ಇಂಟರ್ನಲ್ ಅಸಿಸ್ ಮೆಂಟ್  ಅಂಕಗಳ ತಪ್ಪು ಗ್ರಹಿಕೆ

8.ಪ್ರಾಯೋಗಿಕ ಪರೀಕ್ಷೆಯ ನಂತರ ಒಎಂಆರ್ ಶೀಟ್ ಗಳನ್ನ ವಿತರಿಸುವುದು

ಒಟ್ಟಿನಲ್ಲಿ ಬೆಂಗಳೂರು ವಿವಿಯ ಪರೀಕ್ಷಾ ವಿಭಾಗದ ಕಾರ್ಯ ಚಟುವಟಿಕೆಗಳಿಗೆ ಬೇಸತ್ತು ವಿಶೇಷಾಧಿಕಾರಿಗಳು ರಾಜೀನಾಮೆ ಸಲ್ಲಿಸಿರೋದು ಪರೀಕ್ಷಾ ವಿಭಾಗದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಸಾಬೀತಾಗಿದೆ. ಆಲ್ಲದೆ ಪರೀಕ್ಷಾ ವಿಭಾಗದ ಕಾರ್ಯ ಚಟುವಟಿಕೆಗಳನ್ನ  ರಾಜ್ಯ ಗುಪ್ತದಳ ಗಮನಿಸುತ್ತಿದ್ದು, ಸಧ್ಯದಲ್ಲೇ ಹಲವು ಅಧಿಕಾರಿಗಳು ಪೊಲೀಸರ ಬಲೆಗೆ ಬಿಳೋ ಸಾಧ್ಯತೆ ಇದೆ ಎನ್ನಲಾಗಿದೆ. ಈ ಬೆಳವಣಿಗೆಗಳಿಂದ ಬೇಸತ್ತು ವಿಶೇಷಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ ಅನ್ನೋದು ಮೂಲಗಳಿಂದ ತಿಳಿದು ಬಂದಿದೆ.

-ವರದಿ: ನಂದೀಶ್ ಮಲ್ಲೇನಹಳ್ಳಿ

ಫೋಟೋ ಕೃಪೆ: ಹಿಂದೂ

click me!