
ಬೆಂಗಳೂರು(ಆ.16): ಸೋಮವಾರರಿಂದ ಎಡಬಿಡದೇ ಬೆಂಗಳೂರಿನಲ್ಲಿ ಸುರಿದಿರುವ ಮಳೆಯು ಭಾರೀ ಅವಾಂತರವನ್ನೇ ಸೃಷ್ಟಿಸಿದ್ದು, ಈಜಿಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಐದಂತಸ್ತಿನ ಕಟ್ಟಡವೊಂದು ಉರುಳುವ ಭೀತಿ ಎದುರಿಸುತ್ತಿದೆ.
ಇಂದು ಮುಂಜಾನೆ ಮೂರು ಗಂಟೆಗೆ ಕಟ್ಟಡ ವಾಲಿರುವ ಸದ್ದು ಕೇಳಿಬಂದ ಹಿನ್ನಲೆಯಲ್ಲಿ ಅಕ್ಕಪಕ್ಕದ ನಿವಾಸಿಗಳು ಬೀದಿಯಲ್ಲಿ ಬಂದು ಕುಳಿತ್ತಿದ್ದರು. ಮೊಹಮ್ಮದ್ ಸಾಧೀರ್ ಎಂಬುವವರಿಗೆ ಸೇರಿದ ಮನೆಯು ನಿರಂತರ ಮಳೆಯಿಂದಾಗಿ ಒಂದು ಕಡೆ ವಾಲಿದೆ. ಈಜಿಪುರದ 14ನೇ ಕ್ರಾಸ್'ನಲ್ಲಿನ ಮನೆಗೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ದೌಡಾಯಿಸಿದ್ದು, ಅಕ್ಕಪಕ್ಕದ ನಿವಾಸಿಗಳನ್ನು ತೆರವುಗೊಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಎಕ್ಸಿಕ್ಯೂಟಿವ್ ಇಂಜಿನಿಯರ್ ಇಂಜಿನಿಯರ್ ಶ್ರೀನಿವಾಸ್ ಪರೀಶೀಲನೆ ನಡೆಸಿದ್ದಾರೆ. ಕಟ್ಟಡದ ಪಿಲ್ಲರ್'ನಲ್ಲಿ ಬಿರುಕು ಕಾಣಿಸಿಕೊಂಡಿದ್ದೇ ಕಟ್ಟಡ ವಾಲಲು ಕಾರಣ ಎನ್ನಲಾಗುತ್ತಿದ್ದು, ಕಟ್ಟಡ ಕುಸಿಯುವ ಮುನ್ನ, ಕಟ್ಟಡ ದ್ವಂಸಗೊಳಿಸಲು ಬಿಬಿಎಂಪಿ ತೀರ್ಮಾನಿಸಿದೆ. ಅಲ್ಲದೇ ಅನುಮತಿಗೂ ಮೀರಿ ಕಟ್ಟಡ ನಿರ್ಮಿಸಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಕಟ್ಟಡ ವಾಲಿರುವುದರಿಂದ ಯಾವುದೇ ಸಮಸ್ಯೆಯಿಲ್ಲ. ಈಗಾಗಲೇ ಕಟ್ಟಡ ದ್ವಂಸ ಮಾಡಲು ಸಿದ್ದತೆ ಮಾಡಲಾಗಿದೆ. ಕಟ್ಟಡವನ್ನು ಮೇಲಿನಿಂದ ಹಂತಹಂತವಾಗಿ ದ್ವಂಸ ಮಾಡಲಾಗುತ್ತದೆ. ನಾಳೆಯೂ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಕಟ್ಟಡ ದ್ವಂಸ ತಜ್ಞ ಶ್ರೀನಿವಾಸ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.