
ಆಂಧ್ರಪ್ರದೇಶ(ಆ.16): ಬೋರ್'ವೆಲ್'ನಲ್ಲಿ ಸಿಲುಕಿಕೊಂಡಿದ್ದ ಎರಡು ವರ್ಷದ ಮಗು ಸುಮಾರು 10 ಗಂಟೆಗಳ ಕಾಲ ಸಾವಿನ ಜೊತೆ ಹೋರಾಡಿ ಸಾವನ್ನೇ ಗೆದ್ದು ಬಂದಿರುವ ಅಪರೂಪದ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ.
ನಿನ್ನೆ ಸಂಜೆ 4.30ಕ್ಕೆ ವಿನುಕೊಂಡದ ಉಮ್ಮಡಿವರಂ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ಎಂಬುವನ ಪತ್ನಿ ಅನುಷಾ ತನ್ನ ಎರಡು ವರ್ಷದ ಮಗು ಚಂದ್ರಶೇಖರ್'ನನ್ನು ಹೊಲಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಗು ಆಟವಾಡುತ್ತಾ 100 ಅಡಿ ಅಧಿಕಕ್ಕೂ ಆಳವಿರುವ ಬೋರ್'ವೆಲ್'ಗೆ ಬಿದ್ದಿದೆ.
ನಂತರ ತಾಯಿ ಅಳುತ್ತಾ ಸಹಾಯಕ್ಕಾಗಿ ಸ್ಥಳೀಯರನ್ನು ಕರೆದಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ NDRF ತಂಡದವರು ಆಕ್ಸಿಜನ್ ಪೈಪ್'ನ್ನು ಬೋರ್‌ವೆಲ್ ಒಳಗೆ ಬಿಟ್ಟು ಕಾರ್ಯಾಚರಣೆ ಕೈಗೊಂಡರು.
ಸುಮಾರು 10 ಗಂಟೆ ಬಳಿಕ ಮಧ್ಯರಾತ್ರಿ 2.40ಕ್ಕೆ ಬೋರ್‌ವೆಲ್‌ನಿಂದ ಮಗುವನ್ನು ಸುರಕ್ಷಿತವಾಗಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.