Latest Videos

ಹೊಸ ವರ್ಷ ಸಂಭ್ರಮಾಚರಣೆ ವೇಳೆ ಕಿರುಕುಳ ಕೊಡುವ ಕಾಮುಕರೇ ಎಚ್ಚರ!

By Suvarna Web DeskFirst Published Dec 29, 2017, 4:20 PM IST
Highlights

ಹೊಸ ವರ್ಷ ಸಂಭ್ರಮಾಚರಣೆ ವೇಳೆ ಕಿರುಕುಳ ಕೊಡುವ ಕಾಮುಕರೇ ಎಚ್ಚರ! ಹೊಸ ವರ್ಷಾಚರಣೆಗೆ ಖಾಕಿ ಪಡೆ ಸಜ್ಜಾಗಿದೆ. ಕಳೆದ ವರ್ಷದಂತೆ ಈ ಬಾರಿಯು ಯುವತಿಯರಿಗೆ ಕಿರುಕುಳ ಕೊಡೋಕೆ ಮುಂದಾದರೆ  ತಗಲಾಕೊಳ್ಳೋದು ಗ್ಯಾರಂಟಿ..!

ಬೆಂಗಳೂರು (ಡಿ.29): ಹೊಸ ವರ್ಷ ಸಂಭ್ರಮಾಚರಣೆ ವೇಳೆ ಕಿರುಕುಳ ಕೊಡುವ ಕಾಮುಕರೇ ಎಚ್ಚರ! ಹೊಸ ವರ್ಷಾಚರಣೆಗೆ ಖಾಕಿ ಪಡೆ ಸಜ್ಜಾಗಿದೆ. ಕಳೆದ ವರ್ಷದಂತೆ ಈ ಬಾರಿಯು ಯುವತಿಯರಿಗೆ ಕಿರುಕುಳ ಕೊಡೋಕೆ ಮುಂದಾದರೆ  ತಗಲಾಕೊಳ್ಳೋದು ಗ್ಯಾರಂಟಿ..!

ಹೊಸ ವರ್ಷದ ಸಂಭ್ರಮಾಚರಣೆಯ ಪ್ರತಿ ಚಲನವಲನವನ್ನು ಚೆಕ್ ಮಾಡಲಿದೆ ಬೆಂಗಳೂರು ಖಾಕಿಪಡೆ.  ಬ್ರೀಗೇಡ್, ಎಂಜಿ ರಸ್ತೆ ಮೇಲೆ ಖಾಕಿಯ ಹದ್ದಿನಕಣ್ಣು ಇರಲಿದೆ.  ಕಮಿಷನರ್ ಕಛೇರಿಯ ಕಮೆಂಡ್ ಸೆಂಟರ್'ನಲ್ಲಿ ಮಧ್ಯರಾತ್ರಿವರೆಗೆ ಖುದ್ದು ಡಿಸಿಪಿಯೇ  ನಿಮ್ ಚಲನವಲನವನ್ನು ನೋಡಲಿದ್ದಾರೆ. ಹೆಣ್ಣು ಮಕ್ಕಳ  ಮೇಲೆ ಕೈ ಹಾಕಿದ್ರೆ, ನಿಮ್ ಕೈ ಗೆ ಕೋಳ ಬೀಳೋದು ಗ್ಯಾರಂಟಿ! ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸಂಭ್ರಮಾಚರಣೆಯನ್ನ ಬರೋಬ್ಬರಿ 300 ಕ್ಯಾಮೆರಾಗಳು ರೆಕಾರ್ಡ್ ಮಾಡಲಿವೆ.

ಕಳೆದ ವರ್ಷ ನಡೆದ ಕಿರುಕುಳ ಹಿನ್ನಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಈ ಬಾರಿ ಪೊಲೀಸ್ ಇಲಾಖೆ ಸಂಪೂರ್ಣ ಸಜ್ಜಾಗಿದೆ.

click me!